ಮುಂಬೈ: ಮಾಜಿ ಗಗನಸಖಿ, ನಟಿ ನೂರ್ ಮಾಲಾಬಿಕಾ ದಾಸ್ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮುಂಬೈನಲ್ಲಿರುವ ಆಕೆಯ ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ ಬರುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಪೊಲೀಸರು ಅಲ್ಲಿಗೆ ಬಂದು ಬಾಗಿಲು ಒಡೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ನೂರ್ ಶವ ಪತ್ತೆಯಾಗಿದೆ. ಮೃತದೇಹವನ್ನು ಹೊರತೆಗೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.
2023ರಲ್ಲಿ ಬಿಡುಗಡೆಗೊಂಡಿದ್ದ ‘ದಿ ಟ್ರಯಲ್‘ ವೆಬ್ ಸರಣಿಯಲ್ಲಿ ನಟಿ ಕಾಜೋಲ್ ಜತೆ ಮಾಲಾಬಿಕಾ ದಾಸ್ ನಟಿಸಿದ್ದರು. 31 ವರ್ಷದ ನೂರ್ ಮಾಲಾಬಿಕಾ ದಾಸ್ ಖಿನ್ನತೆಯಿಂದ ಬಳಲುತ್ತಿದ್ದರು. ಈ ಸಂಬಂಧ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
32 ವರ್ಷದ ಮಾಲಾಬಿಕಾ ಅಸ್ಸಾಂ ಮೂಲದವರು, ತನ್ನ ವೃತ್ತಿಜೀವನವನ್ನು ಗಗನಸಖಿಯಾಗಿ ಪ್ರಾರಂಭಿಸಿ, ನಟನೆಯ ಆಸಕ್ತಿಯಿಂದ ಅವರು ಅನೇಕ ವಯಸ್ಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಆಕೆಯ ಸಾವಿಗೆ ಎರಡು ವಾರಗಳ ಮೊದಲು ಕುಟುಂಬ ಸದಸ್ಯರು ಮುಂಬೈನಲ್ಲಿರುವ ನಟಿಯ ನಿವಾಸಕ್ಕೆ ಭೇಟಿ ನೀಡಿದ್ದರು.ಆದರೆ, ಆಕೆಯ ಸಾವಿನ ನಂತರ ಕುಟುಂಬಸ್ಥರು ಮೃತ ದೇಹವನ್ನು ನೋಡಲು ಸಹ ಬಂದಿಲ್ಲ.ಮೃತ ದೇಹವನ್ನು ತೆಗೆದುಕೊಂಡು ಹೋಗುವಂತೆ ಪೊಲೀಸರು ಕರೆ ಮಾಡಿದರೂ ಪ್ರತಿಕ್ರಿಯಿಸಿಲ್ಲ. NGO ದ ಸಹಾಯದಿಂದ ಆಕೆಯ ಅಂತಿಮ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಗಿದೆ ಎಂದು ವರದಿಯಾಗಿದೆ.