ಪೌಡರ್ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

'ಪೌಡರ್' ಸಿನಿಮಾ ರಿಲೀಸ್ ಡೇಟ್ ಬದಲು: ಇಲ್ಲಿದೆ ಹೊಸ ಅಪ್ ಡೇಟ್!

ಕೆ.ಆರ್‌.ಜಿ ಸ್ಟೂಡಿಯೋಸ್‌ ಮತ್ತು ಟಿ.ವಿ.ಎಫ್‌ ಮೋಷನ್‌ ಪಿಕ್ಚರ್ಸ್‌ನ ಚೊಚ್ಚಲ ಸಹಯೋಗದ 'ಪೌಡರ್' ಸಿನಿಮಾ ರಿಲೀಸ್ ದಿನಾಂಕ ಬದಲಾಗಿದೆ. ಈ ಹಿಂದೆ ಜುಲೈ 14ಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿತ್ತು.

ಕೆ.ಆರ್‌.ಜಿ ಸ್ಟೂಡಿಯೋಸ್‌ ಮತ್ತು ಟಿ.ವಿ.ಎಫ್‌ ಮೋಷನ್‌ ಪಿಕ್ಚರ್ಸ್‌ನ ಚೊಚ್ಚಲ ಸಹಯೋಗದ 'ಪೌಡರ್' ಸಿನಿಮಾ ರಿಲೀಸ್ ದಿನಾಂಕ ಬದಲಾಗಿದೆ. ಈ ಹಿಂದೆ ಜುಲೈ 14ಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿತ್ತು, ಆದರೆ ಈಗ ಹೊಸ ಡೇಟ್ ಫಿಕ್ಸ್ ಮಾಡಲಾಗಿದೆ.

ರಜಾ ದಿನಗಳಲ್ಲಿ ಬಿಡುಗಡೆ ಮಾಡುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ. ಜನರನ್ನು ಥಿಯೇಟರ್ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವ ಉದ್ದೇಶ ಹೊಂದಲಾಗಿದೆ. ಆಗಸ್ಟ್ 15 ರಂದು ಸಿನಿಮಾ ರಿಲೀಸ್ ಆಗಲಿದೆ. ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯ ರಾಮ್‌ಕುಮಾರ್, ಶರ್ಮಿಳಾ ಮಾಂಡ್ರೆ ಮತ್ತು ರಂಗಾಯಣ ರಘು ನಟಿಸಿದ್ದಾರೆ. ಈಗ ಪೋಸ್ಟ್-ಪ್ರೊಡಕ್ಷನ್‌ ಹಂತದಲ್ಲಿರುವ ಚಿತ್ರಕ್ಕೆ ಸಂಕೀರ್ಣವಾದ ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸದ ಅಗತ್ಯವಿದೆ ಎಂದು ಮೂಲವೊಂದು ತಿಳಿಸಿದೆ. ಹೀಗಾಗಿ ಸಿನಿಮಾ ಬಿಡುಗಡೆ ವಿಳಂಬಕ್ಕೆ ಕಾರಣವಾಗಿದೆ.

ಪೌಡರ್ ಸಿನಿಮಾದ ಕೊನೆಯ 15 ನಿಮಿಷಗಳು ಪ್ರೇಕ್ಷಕರಿಗೆ ರೋಲರ್ ಕೋಸ್ಟರ್ ರೈಡ್ ನಂತೆ ಭಾಸವಾಗುತ್ತದೆ. ರೋಮಾಂಚಕ, ಹಿಂದೆಂದೂ ನೋಡಿರದ ಅನುಭವ ನೀಡಲಿದೆ. ಪೌಡರ್ ಶೀಘ್ರವಾಗಿ ಶ್ರೀಮಂತರಾಗಲು ಯೋಜನೆ ರೂಪಿಸುವ ಯುವಕರ ಗುಂಪಿನ ದುಸ್ಸಾಹಸಗಳ ಬಗ್ಗೆ ಹೆಣೆದ ಕಥೆಯಾಗಿದೆ. ಬೇಗನೆ ಶ್ರೀಮಂತರಾಗಲು ಅವರು ಮಾಡುವ ಯೋಜನೆಗಳು ನಿರಂತರವಾಗಿ ವಿಫಲಗೊಳ್ಳುತ್ತವೆ ಏಕೆಂದರೆ ಅವರು ದಾರಿಯುದ್ದಕ್ಕೂ ಶತ್ರುಗಳು ಮತ್ತು ಹಲವು ರೀತಿಯ ಏರಿಳಿತಗಳನ್ನು ಎದುರಿಸುತ್ತಾರೆ.

ಈ ಚಿತ್ರವನ್ನು ಜನಾರ್ಧನ್ ಚಿಕ್ಕಣ್ಣ ನಿರ್ದೇಶಿಸಿದ್ದಾರೆ, ಟಿವಿಎಫ್ ಜೊತೆಗೆ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸಿದ್ದಾರೆ. ಮುಂದಿನ ವಾರದಲ್ಲಿ ಪೌಡರ್‌ನ ಮೊದಲ ಹಾಡು ಬಿಡುಗಡೆಯಾಗಲಿದೆ. ಪ್ರಸಿದ್ಧ Rapper ಎಂಸಿ ಬಿಜ್ಜು ಮತ್ತು ವಾಸುಕಿ ವೈಭವ್ ಸಹಯೋಗದಲ್ಲಿ ಹಾಡು ಮೂಡಿ ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

SCROLL FOR NEXT