ಯುವ ರಾಜಕುಮಾರ್-ಸಪ್ತಮಿ ಗೌಡ 
ಸಿನಿಮಾ ಸುದ್ದಿ

ನಟ ಯುವ ದಾಂಪತ್ಯದಲ್ಲಿ ಬಿರುಕು: ನನ್ನದೂ ತಪ್ಪಿದೆ; ನಟಿ ಸಪ್ತಮಿ ಗೌಡ ಆಡಿಯೋ ವೈರಲ್

ಶ್ರೀದೇವಿ ಹಾಗೂ ಯುವ ದಾಂಪತ್ಯದಲ್ಲಿ ಬಿರುಕು ಮೂಡಲು ಸಪ್ತಮಿ ಗೌಡ ಕಾರಣ ಎಂಬ ವಾದವನ್ನೂ ಅನೇಕರು ಮಾಡುತ್ತಿದ್ದಾರೆ. ಇನ್ನೂ 'ಯುವ' ಸಿನಿಮಾದ ಸೆಟ್​ನಲ್ಲಿಯೇ ಶ್ರೀದೇವಿ ಬಂದು ಜಗಳ ಸಹ ಮಾಡಿದ್ದರು ಎಂಬ ಮಾತು ಕೂಡ ಕೇಳಿ ಬರುತ್ತಿದೆ.

ನಟ ಯುವ ರಾಜ್​ಕುಮಾರ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಯುವ ರಾಜ್​ಕುಮಾರ್ ತಮ್ಮ ಪತ್ನಿ ಶ್ರೀದೇವಿಯಿಂದ ವಿಚ್ಛೇದನ ಬಯಸಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ. ಮಾಧ್ಯಮಗಳ ಮುಂದೆ ಯುವ ಪರ ವಕೀಲರು, ಶ್ರೀದೇವಿ ವಿರುದ್ಧ ಹಲವು ಆರೋಪಗಳನ್ನು ಸಹ ಮಾಡಿದ್ದರು.

ವಿಚ್ಛೇದನ ಅರ್ಜಿಯಲ್ಲಿ ಸಹ ಅನೈತಿಕ ಸಂಬಂಧದ ಆರೋಪ ಮಾಡಲಾಗಿತ್ತು. ಅದಕ್ಕೆ ಪ್ರತಿಯಾಗಿ ಶ್ರೀದೇವಿ ಸಹ ಯುವ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿದ್ದರು. ನಟಿ ಸಪ್ತಮಿ ಗೌಡ ಹೆಸರು ಈ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬಂದಿತ್ತು. ಇದೀಗ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದೆ.

‘ಹೌದು ನನ್ನಿಂದ ಹಲವರಿಗೆ ನೋವಾಗಿದೆ. ನನ್ನದು ತಪ್ಪಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ನಾನು ಗುರು (ಯುವ ಮೂಲ ಹೆಸರು) ನಂಬಿ ಮಾಡಿದೆ. ನಿಮ್ಮ ಸೆಟ್ ಅಲ್ಲಿ ಆಗಿದೆ, ಸಾರಿ ಸರ್’ ಎಂಬ ಮಾತುಗಳು ಆಡಿಯೋನಲ್ಲಿವೆ. ಈ ಆಡಿಯೋವನ್ನು ಸಪ್ತಮಿ, ವಿಜಯ್ ಕಿರಗಂದೂರು ಅವರಿಗೆ ಕಳಿಸಿದ್ದಾರೆ ಎನ್ನಲಾಗುತ್ತಿದೆ.

‘ಗುರು ಬಂದು ಎಲ್ಲವನ್ನೂ ಹೇಳಿಕೊಂಡ ಮೇಲೆ ನಾನು ಮುಂದುವರೆದೆ. ಅದು ನಿಮ್ಮ ಸೆಟ್​ನಲ್ಲಿ ಆಯ್ತು, ಆಗಬಾರದಿತ್ತು, ಬೇಸರವಿದ್ದರೆ ದಯವಿಟ್ಟು ಕ್ಷಮಿಸಿ, ನನ್ನ ಸೈಡ್ ಆಫ್ ದಿ ಸ್ಟೋರಿ ಸಹ ದಯವಿಟ್ಟು ಕೇಳಿಸಿಕೊಳ್ಳಿ. ಯಾವತ್ತಾದರೂ ಸಪ್ತಮಿ ಇಷ್ಟು ಕೆಟ್ಟವಳು ಎಂದು ಅಂದುಕೊಳ್ಳುವ ಮುಂಚೆ ಏನಾಯಿತು ಎಂದು ನನ್ನಿಂದ ಒಮ್ಮೆ ಕೇಳಿಸಿಕೊಳ್ಳಿ’ ಎಂಬ ಮಾತುಗಳು ಆಡಿಯೋನಲ್ಲಿದೆ.

‘ನಾನು ಮೊದಲಿನಿಂದಲೂ ಹೇಳುತ್ತಲೇ ಇದ್ದೆ, ಇದೆಲ್ಲ ವರ್ಕೌಟ್ ಆಗಲ್ಲ ಎಂದು. ಅಲ್ಲದೆ ನಾನು ಎಂದಿಗೂ ಸಹ ಫ್ಯಾಮಿಲಿ ಬಿಟ್ಟು ಬಾ, ಪತ್ನಿ ಜೊತೆ ಬ್ರೇಕ್ ಅಪ್ ಮಾಡಿಕೊ ಎಂದು ಹೇಳಿಲ್ಲ ಸರ್ ನನ್ನನ್ನು ನಂಬಿ. ಬೇಕಾದರೆ ನನ್ನನ್ನು ಬೈಯ್ಯಿರಿ, ಗುರು (ಯುವ)ಗೆ ಅದು ಮೊದಲ ಸಿನಿಮಾ. ನಿಮಗೂ ಸಹ ಬಹಳ ಮುಖ್ಯವಾದ ಸಿನಿಮಾ. ನನಗೆ ಗೊತ್ತಿದೆ. ಯಾರಿಗೂ ತೊಂದರೆ ಆಗಬಾರದು ಸರ್. ನಾನು ಇದನ್ನು ಇನ್ನಷ್ಟು ಕಾಂಪ್ಲೆಕ್ಸ್ ಮಾಡುವುದಿಲ್ಲ. ಬೈಯ್ಯುವುದಾದರೆ ಬೈಯ್ಯಿರಿ’ ಎಂದು ಸಪ್ತಮಿ ಅವರದ್ದು ಎನ್ನಲಾದ ಆಡಿಯೋನಲ್ಲಿ ಹೇಳಲಾಗಿದೆ.

ಶ್ರೀದೇವಿ ಹಾಗೂ ಯುವ ದಾಂಪತ್ಯದಲ್ಲಿ ಬಿರುಕು ಮೂಡಲು ಸಪ್ತಮಿ ಗೌಡ ಕಾರಣ ಎಂಬ ವಾದವನ್ನೂ ಅನೇಕರು ಮಾಡುತ್ತಿದ್ದಾರೆ. ಇನ್ನೂ 'ಯುವ' ಸಿನಿಮಾದ ಸೆಟ್​ನಲ್ಲಿಯೇ ಶ್ರೀದೇವಿ ಬಂದು ಜಗಳ ಸಹ ಮಾಡಿದ್ದರು ಎಂಬ ಮಾತು ಕೂಡ ಕೇಳಿ ಬರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel