ರಾಬರ್ಟ್ ಡೌನಿ ಜ್ಯೂನಿಯರ್ Associated Press
ಸಿನಿಮಾ ಸುದ್ದಿ

ಓಪನ್ ಹೈಮರ್ ಚಿತ್ರದ ನಟ ರಾಬರ್ಟ್ ಡೌನಿ ಜ್ಯೂನಿಯರ್ ಗೆ ಆಸ್ಕರ್ ಪ್ರಶಸ್ತಿ!

ಓಪನ್ಹೈಮರ್ ಸಿನಿಮಾದಲ್ಲಿನ ಉತ್ತಮ ನಟನೆಗಾಗಿ ನಟ ರಾಬರ್ಟ್ ಡೌನಿ ಜ್ಯೂನಿಯರ್ ಗೆ ಆಸ್ಕರ್ ಪ್ರಶಸ್ತಿ ಒಲಿದಿದೆ.

ಲಾಸ್ ಏಂಜಲೀಸ್: ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಓಪನ್ಹೈಮರ್ ಸಿನಿಮಾದಲ್ಲಿನ ಉತ್ತಮ ನಟನೆಗಾಗಿ ನಟ ರಾಬರ್ಟ್ ಡೌನಿ ಜ್ಯೂನಿಯರ್ ಗೆ ಆಸ್ಕರ್ ಪ್ರಶಸ್ತಿ ಒಲಿದಿದೆ. ಮೊದಲ ಅಕಾಡೆಮಿ ಅವಾರ್ಡ್ ಗೆ ನಾಮನಿರ್ದೇಶನಗೊಂಡ 3 ದಶಕಗಳ ಬಳಿಕ ರಾಬರ್ಟ್ ಡೌನಿಗೆ ಮೊದಲ ಆಸ್ಕರ್ ಪ್ರಶಸ್ತಿ ಲಭಿಸಿದೆ.

ಓಪನ್ಹೈಮರ್ ಅಟಾಮಿಕ್ ಬಾಂಬ್ ಕುರಿತ ಸಿನಿಮಾ ಆಗಿದ್ದು, ಅಮೇರಿಕಾದ ಅಟಾಮಿಕ್ ಎನರ್ಜಿ ಕಮಿಷನ್ ಸದಸ್ಯರಾಗಿದ್ದ ಲೆವಿಸ್ ಸ್ಟ್ರಾಸ್ ಪಾತ್ರವನ್ನು ರಾಬರ್ಟ್ ಡೌನಿ ಜ್ಯೂನಿಯರ್ ನಿರ್ವಹಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಇದು ಅವರ ಅತ್ಯುತ್ತಮ ನಟನೆ ಎಂಬ ಮೆಚ್ಚುಗೆ ವ್ಯಕ್ತವಾಗಿತ್ತು.

ಹಾಲಿವುಡ್ ನ ಬಹುಮುಖ ನಟ ಈ ಹಿಂದೆ 2 ಬಾರಿ ಆಸ್ಕರ್ ಗೆ ನಾಮನಿರ್ದೇಶನಗೊಂಡಿದ್ದರಾದರೂ ಇದು ಮೊದಲ ಆಸ್ಕರ್ ಪ್ರಶಸ್ತಿಯಾಗಿದೆ. 1993 ರಲ್ಲಿ ರಾಬರ್ಟ್ ಡೌನಿ ಮೊದಲ ಬಾರಿಗೆ ಚಾಪ್ಲಿನ್ ಸಿನಿಮಾದ ನಟನೆಗಾಗಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. 2008 ರಲ್ಲಿ ಟ್ರಾಪಿಕ್ ಥಂಡರ್ ಸಿನಿಮಾದಲ್ಲಿ ಅತ್ಯುತ್ತಮ ಪೋಷಕ ನಟನೆಗಾಗಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್