ಶಾಹೀದ್ ಕಪೂರ್
ಶಾಹೀದ್ ಕಪೂರ್ 
ಸಿನಿಮಾ ಸುದ್ದಿ

ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ರವಿ ಬಾಲಿವುಡ್ ಗೆ: ಶಾಹೀದ್ ಕಪೂರ್ ನಟನೆಯ 'ಅಶ್ವತ್ಥಾಮ'ನಿಗೆ ಆ್ಯಕ್ಷನ್ ಕಟ್!

Shilpa D

ಅವನೇ ಶ್ರೀಮನ್ನಾರಾಯಣ ಚಿತ್ರದ ನಿರ್ದೇಶಕ ಸಚಿನ್ ರವಿ ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ, ಶಾಹಿದ್ ಕಪೂರ್ ನಾಯಕನಾಗಿರುವ ಅಶ್ವತ್ಥಾಮ ಸಿನಿಮಾಗೆ ಸಚಿನ್ ರವಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಅವರ ಪೂಜಾ ಎಂಟರ್‌ಟೈನರ್ ಬ್ಯಾನರ್‌ನ ಬೆಂಬಲದೊಂದಿಗೆ ದೊಡ್ಡ-ಬಜೆಟ್ ಯೋಜನೆಗೆ ತಯಾರಿ ನಡೆಸಿದ್ದಾರೆ. ಈ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಿಸಲಾಗಿದೆ, ನಿರ್ಮಾಪಕರು ಮತ್ತು ನಟ ಶಾಹಿದ್ ಕಪೂರ್ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಮಹಾಭಾರತದಿಂದ ಪ್ರೇರಿತವಾದ ಆಕ್ಷನ್-ಪ್ಯಾಕ್ಡ್ ಆಧಾರಿತ ಕಥೆ ಬಗ್ಗೆ ನಿರ್ದೇಶಕರು ಸುಳಿವು ನೀಡಿದ್ದಾರೆ. ಅಶ್ವತ್ಥಾಮನಾಗಿಯೇ ಶಾಹಿದ್ ಕಪೂರ್ ಇಲ್ಲಿ ಅಬ್ಬರಿಸಲಿದ್ದಾರೆ. ʻಅಶ್ವತ್ಥಾಮʼ ಒಬ್ಬ ಗ್ರೇಟ್ ವಾರಿಯರ್‌. ಏಳು ಚಿರಂಜೀವಿಗಳಲ್ಲಿ ಒಬ್ಬ ಎನ್ನುವುದು ಕೂಡ ನಂಬಿಕೆ. ಅಶ್ವತ್ಥಾಮನಿಗೆ ಸಾವೇ ಇಲ್ಲ ಅನ್ನೋದು ಚಿರಂಜೀವಿಯ ಅರ್ಥ ಎಂದೇ ಹೇಳಬಹುದು. ಕಥೆಯಲ್ಲಿ ಅಶ್ವತ್ಥಾಮ ವರ್ತಮಾನದಲ್ಲಿರುವ ನಾಯಕ. ಅಮರತ್ವದ ಪರಿಕಲ್ಪನೆಯನ್ನು ಶೋಧಿಸುವ ಕೆಲಸ ಆತನದ್ದು. ಆದರೆ ಈ ಚಿತ್ರ ಅದ್ಭುತ ಆ್ಯಕ್ಷನ್ ಇರುವ, ಮತ್ತು ಎಲ್ಲಾ ತಲೆಮಾರಿನ ವೀಕ್ಷಕರನ್ನೂ ಸೆಳೆಯಬಲ್ಲ ಚಿತ್ರವಾಗಲಿದೆ. ಅಶ್ವತ್ಥಾಮನಂತೆ ಅಮರತ್ವ ಹೊಂದಿರುವ ವ್ಯಕ್ತಿಗಳನ್ನು ಚಿತ್ರದಲ್ಲಿ ತರುವ ಪ್ರಯತ್ನವೂ ಇರಲಿದೆ. ಕಾಲ್ಪನಿಕ ಸನ್ನಿವೇಶನಗಳ ಅನ್ವೇಷಣೆ ಹಾಗೂ ಅದರ ಸಾಧ್ಯತೆ ಕುರಿತು ಕಥೆ ರಚಿಸಿಲಾಗುವುದು ಎಂದು ಹೇಳಿದ್ದಾರೆ.

ವಿಎಫ್‌ಎಕ್ಸ್‌ನಲ್ಲಿ ಸಚಿನ್ ರವಿ ಅವರ ಪರಿಣತಿಯನ್ನು ಗಮನಿಸಿದರೆ, ತಂತ್ರಜ್ಞಾನವು ಚಿತ್ರದಲ್ಲಿ ಮಹತ್ವದ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ. ಕುತೂಹಲಕಾರಿಯಾಗಿ, ಸಚಿನ್ ಕೆಲವು ವರ್ಷಗಳ ಹಿಂದೆ ಈ ಯೋಜನೆಯನ್ನು ಶಿವರಾಜಕುಮಾರ್ ಅವರಿಗೆ ನೀಡಿದ್ದರು ಮತ್ತು ಅಶ್ವತ್ಥಾಮ ಪಾತ್ರವನ್ನು ಆಧರಿಸಿದ ಚಿತ್ರದಲ್ಲಿ ಅವರನ್ನು ನಿರ್ದೇಶಿಸುವುದಾಗಿ ಘೋಷಿಸಿದ್ದರು.

ಅವನೇ ಶ್ರೀಮನ್ನಾರಾಯಣ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರು ಕಥೆಯನ್ನು ಬರೆದಿದ್ದಾರೆ. ಅಶ್ವತ್ಥಾಮನ ಜೀವನದುದ್ದಕ್ಕೂ ನಡೆದ ಘಟನೆಗಳ ಬಗ್ಗೆ ಬರೆದಿದ್ದಾಗಿ ತಿಳಿಸಿದ್ದರು, ಅದಾದ ನಂತರ ಯಾವುದೇ ಅಪ್ ಡೇಟ್ ಗಳಿರಲಿಲ್ಲ.

ವಿಕ್ಕಿ ಕೌಶಲ್ ಅವರೊಂದಿಗೆ ಆದಿತ್ಯ ಧರ್ ಇದೇ ರೀತಿಯ ಸಿನಿಮಾ ಮಾಡುವುದಾಗಿ ತಿಳಿಸಿದರು, ಅದನ್ನು 2020 ರಲ್ಲಿ ಘೋಷಿಸಲಾಯಿತು ಆದರೆ ನಂತರ ಸ್ಥಗಿತಗೊಳಿಸಲಾಯಿತು. ಅಶ್ವತ್ಥಾಮ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸಲಿದ್ದಾರೆ ಎಂಬುದು ಈಗ ಖಚಿತವಾಗಿದೆ.

SCROLL FOR NEXT