ನಟ ರವಿಚಂದ್ರನ್ - ಪ್ರೇಮಲೋಕ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

'ಪ್ರೇಮಲೋಕ 2' updates: ಪುತ್ರ ಮನೋರಂಜನ್, ವಿಕ್ರಮ್ ಜೊತೆ ರವಿಚಂದ್ರನ್; ಚಿತ್ರದಲ್ಲಿ 25 ಹಾಡು!

ರಿಯಾಲಿಟಿ ಶೋ ಮತ್ತು ವಿವಿಧ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ, ನಿರ್ದೇಶಕ ವಿ ರವಿಚಂದ್ರನ್ ಅವರು ತಮ್ಮ ಬಹುನಿರೀಕ್ಷಿತ ಪ್ರೇಮಲೋಕ 2 ಚಿತ್ರದ ಬಗ್ಗೆ ಹಲವು ಅಪ್ಡೇಟ್ಸ್‌ಗಳನ್ನು ನೀಡಿದ್ದಾರೆ. ತಮ್ಮ ಮುಂಬರುವ ಸಿನಿಮಾ ತಪಸ್ಸಿ ಕುರಿತಾದ ಚರ್ಚೆಯ ಸಮಯದಲ್ಲಿ ಪ್ರೇಮಲೋಕ 2 ಬಗ್ಗೆಯೂ ಕೆಲವು ಆಸಕ್ತಿಕರ ಸುದ್ದಿಗಳನ್ನು ಹಂಚಿಕೊಂಡಿದ್ದಾರೆ.

ರಿಯಾಲಿಟಿ ಶೋ ಮತ್ತು ವಿವಿಧ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ, ನಿರ್ದೇಶಕ ವಿ ರವಿಚಂದ್ರನ್ ಅವರು ತಮ್ಮ ಬಹುನಿರೀಕ್ಷಿತ ಪ್ರೇಮಲೋಕ 2 ಚಿತ್ರದ ಬಗ್ಗೆ ಹಲವು ಅಪ್ಡೇಟ್ಸ್‌ಗಳನ್ನು ನೀಡಿದ್ದಾರೆ. ತಮ್ಮ ಮುಂಬರುವ ಸಿನಿಮಾ ತಪಸ್ಸಿ ಕುರಿತಾದ ಚರ್ಚೆಯ ಸಮಯದಲ್ಲಿ ಪ್ರೇಮಲೋಕ 2 ಬಗ್ಗೆಯೂ ಕೆಲವು ಆಸಕ್ತಿಕರ ಸುದ್ದಿಗಳನ್ನು ಹಂಚಿಕೊಂಡಿದ್ದಾರೆ.

ಮೇ 30ರಂದು ಅವರ ಜನ್ಮದಿನದಂದು ಪ್ರೇಮಲೋಕ ಚಿತ್ರದ ಸೀಕ್ವೆಲ್ ಚಿತ್ರೀಕರಣ ಪ್ರಾರಂಭಿಸುವ ಯೋಜನೆಯನ್ನು ಹೊಂದಿರುವುದಾಗಿ ನಿರ್ದೇಶಕರು ಬಹಿರಂಗಪಡಿಸಿದ್ದಾರೆ.

ನಿರ್ದೇಶನದ ಹೊರತಾಗಿ, ತಮ್ಮ ಪುತ್ರರಾದ ಮನೋರಂಜನ್ ಮತ್ತು ವಿಕ್ರಮ್ ಅವರೊಂದಿಗೆ ರವಿಚಂದ್ರನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಅವರೇ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರದಲ್ಲಿ 25 ಹಾಡುಗಳಿದ್ದು, ರೆಕಾರ್ಡಿಂಗ್ ಮುಕ್ತಾಯದ ಹಂತದಲ್ಲಿದೆ.

ಅಭಿಮಾನಿಗಳು ಪ್ರೇಮಲೋಕ 2 ಗಾಗಿ ಕಾತರದಿಂದ ಕಾಯುತ್ತಿದ್ದು, ಮೂಲ ಪ್ರೇಮಲೋಕ ಸಿನಿಮಾವನ್ನು ವಿ ರವಿಚಂದ್ರನ್ ಅವರೇ ನಿರ್ದೇಶಿಸಿದ್ದರು. ಶ್ರೀ ಈಶ್ವರಿ ಪ್ರೊಡಕ್ಷನ್ಸ್ ಅಡಿಯಲ್ಲಿ ಎನ್ ವೀರಾಸ್ವಾಮಿ ನಿರ್ಮಿಸಿದ್ದರು ಮತ್ತು ರವಿಚಂದ್ರನ್ ಅವರೇ ಸಹ-ನಿರ್ಮಾಣದ ಹೊಣೆಯನ್ನು ಹೊತ್ತಿದ್ದರು. ಚಿತ್ರದಲ್ಲಿ ಬಾಲಿವುಡ್ ಸೆನ್ಸೇಷನ್ ಜೂಹಿ ಚಾವ್ಲಾ ಜೊತೆಗೆ ರವಿಚಂದ್ರನ್ ಅವರೇ ನಟಿಸಿದ್ದರು. ಚಿತ್ರವು ಕನ್ನಡ ಮತ್ತು ತಮಿಳಿನಲ್ಲಿ ಬಿಡುಗಡೆಯಾಗಿದ್ದು, ಹಂಸಲೇಖ ಅವರು ಸಂಯೋಜಿಸಿದ ಹಾಡುಗಳು ಇಂದಿಗೂ ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್