ಶ್ರುತಿ ಪ್ರಕಾಶ್ 
ಸಿನಿಮಾ ಸುದ್ದಿ

ವಿಕ್ರಮ್ ಭಟ್ ನಿರ್ದೇಶನದ 'ಹಾಂಟೆಡ್ 2' ಮೂಲಕ ಬಾಲಿವುಡ್‌ಗೆ ಶ್ರುತಿ ಪ್ರಕಾಶ್ ಪದಾರ್ಪಣೆ

ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಯಾಗಿಯೂ ತಮ್ಮ ಛಾಪು ಮೂಡಿಸಿರುವ ಶ್ರುತಿ ಪ್ರಕಾಶ್, ಇದೀಗ ವಿಕ್ರಮ್ ಭಟ್ ನಿರ್ದೇಶನದ, ಆನಂದ್ ಪಂಡಿತ್ ನಿರ್ಮಾಣದ ಹಾಂಟೆಡ್ 2 ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಶ್ರುತಿ ಪ್ರಕಾಶ್ ಕನ್ನಡ ಚಿತ್ರರಂಗದಲ್ಲಿ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಕೆಲವು ಹಿಂದಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಯಾಗಿಯೂ ತಮ್ಮ ಛಾಪು ಮೂಡಿಸಿರುವ ಶ್ರುತಿ ಪ್ರಕಾಶ್, ಇದೀಗ ವಿಕ್ರಮ್ ಭಟ್ ನಿರ್ದೇಶನದ, ಆನಂದ್ ಪಂಡಿತ್ ನಿರ್ಮಾಣದ ಹಾಂಟೆಡ್ 2 ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಹಾಂಟೆಡ್ ಚಿತ್ರದ ಸೀಕ್ವೆಲ್ ಇದಾಗಿದ್ದು, ಮಿಮೋಹ್ ಚಕ್ರವರ್ತಿ ಜೊತೆಗೆ ನಾಯಕಿಯಾಗಿ ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಳಗಾವಿ ಮೂಲದ ಮತ್ತು ಸದ್ಯ ಮುಂಬೈನಲ್ಲಿ ನೆಲೆಸಿರುವ ಶ್ರುತಿ, ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವುದಕ್ಕೆ ತಮ್ಮ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ.

'ನನ್ನ ತಂದೆ ಸೇನೆಯಲ್ಲಿದ್ದುದರಿಂದ ಮತ್ತು ನಾವು ದೇಶದಾದ್ಯಂತ ಸುತ್ತಾಡುವಂತಾಯಿತು. ಉತ್ತರ ಭಾರತದಲ್ಲಿ ನನ್ನ ತಂದೆಯ ಪೋಸ್ಟಿಂಗ್‌ನಿಂದಾಗಿ ನನ್ನ ಹಿಂದಿ ಉತ್ತಮವಾಗಿದೆ. ಮತ್ತೊಂದೆಡೆ, ನಾವು ಮನೆಯಲ್ಲಿ ಮಾತನಾಡುವ ಭಾಷೆ ಕನ್ನಡವಾಗಿದೆ. ನಾನು ಬಿಗ್ ಬಾಸ್‌ನಲ್ಲಿದ್ದ ಸಮಯದಲ್ಲಿ ಅದನ್ನು ಮತ್ತಷ್ಟು ಸುಧಾರಿಸಿಕೊಂಡಿದ್ದೇನೆ' ಎನ್ನುತ್ತಾರೆ.

'ನಾನು ಯಾವಾಗಲೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡಲು ಎದುರು ನೋಡುತ್ತಿದ್ದೆ. ಅದೇ ವೇಳೇ ಬಾಲಿವುಡ್‌ ಕೂಡ ಸಮಾನವಾಗಿ ಆಕರ್ಷಿಸಿತ್ತು. ಇದೀಗ ಅದು ನಿಜವಾಗಿದೆ. ಭಟ್ ನಿರ್ದೇಶನದ ಚಿತ್ರದ ಭಾಗವಾಗುವುದು ಮಹತ್ವದ ಮೈಲಿಗಲ್ಲು ಮತ್ತು ಗುಣಮಟ್ಟದ ಮುದ್ರೆಯಂತಿದೆ. ಕಾಸ್ಟಿಂಗ್ ಏಜೆಂಟ್ ಮೂಲಕ ನಾನು ಈ ಅವಕಾಶವನ್ನು ಪಡೆದುಕೊಂಡೆ. 60 ಪ್ರೊಫೈಲ್‌ಗಳಲ್ಲಿ ಶಾರ್ಟ್‌ಲಿಸ್ಟ್ ಮಾಡಿದ ನಂತರ, ತಾನು ವಿಕ್ರಮ್ ಭಟ್ ಅವರನ್ನು ಭೇಟಿಯಾದೆ' ಎಂದು ಹೇಳುತ್ತಾರೆ.

ತಮ್ಮ ಭಾಗಗಳ ಚಿತ್ರೀಕರಣವನ್ನು ನಟಿ ಬಹುತೇಕ ಪೂರ್ಣಗೊಳಿಸಿದ್ದಾರೆ ಮತ್ತು ಇನ್ನೂ ಹತ್ತು ದಿನಗಳ ಚಿತ್ರೀಕರಣ ಬಾಕಿಯಿದೆ.

ಹಾಂಟೆಡ್ 2 ನಲ್ಲಿ ಯಾಮಿನಿ ಪಾತ್ರಕ್ಕೆ ವಿಕ್ರಮ್ ಭಟ್ ಅವರ ಮಾರ್ಗದರ್ಶನ ಸ್ವೀಕರಿಸಿದ್ದಾಗಿ ಹೇಳುವ ಶ್ರುತಿ, ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದು ಅಮೂಲ್ಯವಾದ ಕಲಿಕೆಯ ಅನುಭವ ಎಂದು ವಿವರಿಸುತ್ತಾರೆ. 'ನನಗೆ ಚಿತ್ರರಂಗದಲ್ಲಿ ಸ್ವಲ್ಪ ಅನುಭವವಿದ್ದರೂ, ಈ ಚಿತ್ರದಲ್ಲಿ ಕೆಲಸ ಮಾಡುವುದು ಹೊಸ ಆರಂಭದಂತೆ ಭಾಸವಾಗುತ್ತಿದೆ. ವಿಕ್ರಮ್ ಸರ್ ಅವರ ದೃಷ್ಟಿಯ ಸ್ಪಷ್ಟತೆ ನಟರಿಗೆ ನಮ್ಮ ಪಾತ್ರಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಮ್ಮ ಅತ್ಯುತ್ತಮ ಆನ್-ಸ್ಕ್ರೀನ್ ಅನ್ನು ನೀಡಲು ಸುಲಭವಾಗುತ್ತದೆ" ಎಂದು ಅವರು ಹೇಳುತ್ತಾರೆ.

ಬೋಲ್ಡ್ ಕಂಟೆಂಟ್ ಹೊಂದಿರುವ ಭಟ್ ಅವರ ಚಲನಚಿತ್ರಗಳ ಹೊರತಾಗಿಯೂ, ಹಾಂಟೆಡ್ 2 ಫ್ಯಾಮಿಲಿ ಎಂಟರ್‌ಟೈನರ್ ಆಗಿರುತ್ತದೆ. ಇದು ಒಂದು ಕ್ಲೀನ್ ಚಿತ್ರ ಎಂದು ಅವರು ಭರವಸೆ ನೀಡುತ್ತಾರೆ.

ಹಿಂದಿ ಮತ್ತು ಕನ್ನಡದ ಚಲನಚಿತ್ರಗಳಲ್ಲಿ ಕೆಲಸ ಮಾಡುವುದರೊಂದಿಗೆ ಸಂಗೀತದ ಮೇಲಿನ ತನ್ನ ಉತ್ಸಾಹದ ಜೊತೆಗೆ ನಟನಾ ವೃತ್ತಿಜೀವನವನ್ನು ಸಮತೋಲನಗೊಳಿಸುವ ಕುರಿತು ಮಾತನಾಡುವ ಶ್ರುತಿ, 'ನನ್ನ ದಾರಿಯಲ್ಲಿ ಬರುವ ಅತ್ಯಾಕರ್ಷಕ ಅವಕಾಶಗಳಿಗಾಗಿ ನಾನು ಕೃತಜ್ಞಳಾಗಿದ್ದೇನೆ' ಎಂದು ಮಾತು ಮುಗಿಸುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT