ಕೋಟಿ ಚಿತ್ರದ ಸ್ಟಿಲ್ - ವಾಸುಕಿ ವೈಭವ್ 
ಸಿನಿಮಾ ಸುದ್ದಿ

'ಕೋಟಿ' ಚಿತ್ರಕ್ಕಾಗಿ ಅರ್ಮಾನ್ ಮಲಿಕ್ ಜೊತೆ ಕೆಲಸ ಮಾಡಿದ್ದು ಸಂತೋಷ ತಂದಿದೆ: ವಾಸುಕಿ ವೈಭವ್

ಕೋಟಿ ಸಿನಿಮಾದ ಸಂಗೀತ ಸಂಯೋಜಕರಾದ ವಾಸುಕಿ ವೈಭವ್ ಅವರು ಗೀತರಚನೆಕಾರ ಯೋಗರಾಜ್ ಭಟ್ ಮತ್ತು ಗಾಯಕ ಅರ್ಮಾನ್ ಮಲಿಕ್ ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡಿದ್ದಾರೆ.

ಡಾಲಿ ಧನಂಜಯ್ ನಟನೆಯ ಕೋಟಿ ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಮೊದಲ ಹಾಡು 'ಮಾತು ಸೋತು' ಅನ್ನು ಬಿಡುಗಡೆ ಮಾಡಿದೆ. ನಾಯಕಿ ಮೋಕ್ಷಾ ಕುಶಾಲ್ ಅವರನ್ನೂ ಒಳಗೊಂಡಿರುವ ಈ ಹಾಡು ಇದೀಗ ಸರಿಗಮ ಕನ್ನಡದ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ.

ಕೋಟಿ ಸಿನಿಮಾದ ಸಂಗೀತ ಸಂಯೋಜಕರಾದ ವಾಸುಕಿ ವೈಭವ್ ಅವರು ಗೀತರಚನೆಕಾರ ಯೋಗರಾಜ್ ಭಟ್ ಮತ್ತು ಗಾಯಕ ಅರ್ಮಾನ್ ಮಲಿಕ್ ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡಿದ್ದಾರೆ. 'ಯೋಗರಾಜ್ ಭಟ್ ಅವರೊಂದಿಗೆ ಕೆಲಸ ಮಾಡುವುದು ಯಾವಾಗಲೂ ಉತ್ತಮ ಅನುಭವವಾಗಿದೆ ಮತ್ತು ಅರ್ಮಾನ್ ಜೊತೆಗೂಡಿ ಕೆಲಸ ಮಾಡಿರುವುದು ಸಂಪೂರ್ಣ ಸಂತೋಷವಾಗಿದೆ. ಈ ಹಾಡು ಕೇಳುಗರೊಂದಿಗೆ ಆಳವಾಗಿ ಕನೆಕ್ಟ್ ಆಗುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದು ವಾಸುಕಿ ಹಂಚಿಕೊಳ್ಳುತ್ತಾರೆ.

ವಾಸುಕಿ ವೈಭವ್ ಅವರ ಸಂಗೀತ, ಯೋಗರಾಜ್ ಭಟ್ ಅವರ ಹೃದಯಸ್ಪರ್ಶಿ ಸಾಹಿತ್ಯ ಮತ್ತು ಅರ್ಮಾನ್ ಮಲಿಕ್ ಅವರ ಭಾವಪೂರ್ಣ ಗಾಯನದ ಶಕ್ತಿಯುತ ಸಂಯೋಜನೆಯು ಕನ್ನಡ ಪ್ರೇಕ್ಷಕರಿಗೆ ಆಳವಾಗಿ ಅನುರಣಿಸುತ್ತದೆ ಎಂದು ಕೋಟಿ ನಿರ್ದೇಶಕ ಪರಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೋಟಿ ಚಿತ್ರದಲ್ಲಿ ರಂಗಾಯಣ ರಘು, ರಮೇಶ್ ಇಂದಿರಾ, ತಾರಾ ಮತ್ತು ಸರ್ದಾರ್ ಸತ್ಯದಂತಹ ಅನುಭವಿಗಳು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟು ಐದು ಹಾಡುಗಳಿರುವ ಈ ಚಿತ್ರಕ್ಕೆ ನೋಬಿನ್ ಪಾಲ್ ಅವರ ಹಿನ್ನೆಲೆ ಸಂಗೀತ, ಅರುಣ್ ಬ್ರಹ್ಮ ಅವರ ಛಾಯಾಗ್ರಹಣ ಮತ್ತು ಪ್ರತೀಕ್ ಶೆಟ್ಟಿ ಅವರ ಸಂಕಲನವಿದೆ. ಜಿಯೋ ಸ್ಟುಡಿಯೋಸ್ ನಿರ್ಮಿಸಿರುವ ಕೋಟಿ ಜೂನ್ 14 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಯೋಗೀಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌; ಅ.27ಕ್ಕೆ ವಿಚಾರಣೆ ಮುಂದೂಡಿಕೆ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!