ರಿಷಬ್ ಶೆಟ್ಟಿ-ಟೋಡರ್ ಲಾಜರೋವ್ TNIE
ಸಿನಿಮಾ ಸುದ್ದಿ

Kantara Chapter 1: 60 ದಿನಗಳ ಸುದೀರ್ಘ ಶೂಟಿಂಗ್ ಪುನರಾರಂಭಿಸಿದ ರಿಷಬ್ ಶೆಟ್ಟಿ!

ನಿರ್ಮಾಣ ಸಂಸ್ಥೆ ಉನ್ನತ ಸ್ಟಂಟ್ ಹಾಗೂ ನೃತ್ಯ ಸಂಯೋಜಕರೊಂದಿಗೆ ಮಾತುಕತೆ ನಡೆಸುತ್ತಿದೆ. ಬ್ಲಾಕ್ಬಸ್ಟರ್ RRR ನಲ್ಲಿ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದ ಟೋಡರ್ ಲಾಜರೋವ್ ಸೇರಿದಂತೆ ಐದು ಅತ್ಯುತ್ತಮ ನೃತ್ಯಗಾರರನ್ನು ಸಂಪರ್ಕಿಸಿದೆ ಎಂದು ಹೇಳಲಾಗುತ್ತದೆ.

ಕಾಂತಾರ ದೊಡ್ಡ ಯಶಸ್ಸಿನ ನಂತರ, ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ಪ್ರಿಕ್ವೆಲ್ ಅನ್ನು ಇನ್ನಷ್ಟು ದೊಡ್ಡದಾಗಿ ಮತ್ತು ಅದ್ಭುತವಾಗಿ ಹೊರತರಲು ಮುಂದಾಗಿದೆ. ಕಾಂತಾರ ಅಧ್ಯಾಯ 1 ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ಅರ್ಧದಷ್ಟು ಚಿತ್ರೀಕರಣ ಮುಗಿದಿದ್ದು ತನ್ನ ಮೂರನೇ ಹತಂದ ಶೂಟಿಂಗ್ ಪ್ರಾರಂಭಿಸಿದ್ದು 60 ದಿನಗಳ ಕಾಲ ನಿರಂತರವಾಗಿ ಚಿತ್ರೀಕರಣ ಮಾಡಲಿದೆ.

ಏತನ್ಮಧ್ಯೆ, ನಿರ್ಮಾಣ ಸಂಸ್ಥೆ ಉನ್ನತ ಸ್ಟಂಟ್ ಹಾಗೂ ನೃತ್ಯ ಸಂಯೋಜಕರೊಂದಿಗೆ ಮಾತುಕತೆ ನಡೆಸುತ್ತಿದೆ. ಬ್ಲಾಕ್ಬಸ್ಟರ್ RRR ನಲ್ಲಿ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದ ಟೋಡರ್ ಲಾಜರೋವ್ ಸೇರಿದಂತೆ ಐದು ಅತ್ಯುತ್ತಮ ನೃತ್ಯಗಾರರನ್ನು ಸಂಪರ್ಕಿಸಿದೆ ಎಂದು ಹೇಳಲಾಗುತ್ತದೆ.

ಇನ್ನು ರಿಷಬ್ ಅವರು ಕುದುರೆ ಸವಾರಿ ಮತ್ತು ಪ್ರಾಚೀನ ಭಾರತೀಯ ಸಮರ ಕಲೆಯಾದ ಕಳರಿಪಯಟ್ಟುನಲ್ಲಿ ವ್ಯಾಪಕ ತರಬೇತಿಯನ್ನು ಪಡೆದಿದ್ದಾರೆ. ಕಲರಿಪಯಟ್ಟು ತನ್ನ ಪಾತ್ರದ ಭಾಗವಾಗಿ ಕರಗತ ಮಾಡಿಕೊಂಡ ಅವರು ಒಂದು ವರ್ಷದಿಂದ ತಮ್ಮ ಕೌಶಲ್ಯವನ್ನು ಮೆರೆದಿದ್ದಾರೆ. ಚಿತ್ರದಲ್ಲಿನ ಪ್ರಮುಖ ಆಕ್ಷನ್ ಸೀಕ್ವೆನ್ಸ್‌ಗಳು ಪುರಾತನ ಸಮರ ಕಲೆಯನ್ನು ಒಳಗೊಂಡಿರುವುದರಿಂದ ಈ ತರಬೇತಿಯು ನಿರ್ಣಾಯಕವಾಗಿರುತ್ತದೆ. ಆದರೆ ವೇಳಾಪಟ್ಟಿಯಲ್ಲಿ ತಂಡವು ವಿಶಿಷ್ಟ ಶೈಲಿಯನ್ನು ಒಳಗೊಂಡ ಹಾಡುಗಳು ಮತ್ತು ದೃಶ್ಯಗಳನ್ನು ಚಿತ್ರೀಕರಿಸುತ್ತದೆ.

ಚಿತ್ರದ ದೃಶ್ಯ.

ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಕಾಂತಾರ ಅಧ್ಯಾಯ 1ರ ನಿರ್ಮಾಪಕರು ಭಾರತೀಯ ಚಲನಚಿತ್ರ ನಿರ್ಮಾಣದಲ್ಲಿ ಹೊಸ ಮಾನದಂಡಗಳನ್ನು ಹೊಂದಿಸಲು ಯೋಜಿಸಿದ್ದಾರೆ. ಕಾಂತಾರ ಅಧ್ಯಾಯ 1 ರ ಸಂಪೂರ್ಣ ಪಾತ್ರವರ್ಗವನ್ನು ಇನ್ನೂ ಅಧಿಕೃತವಾಗಿ ಘೋಷಿಸಬೇಕಾಗಿದ್ದರೂ, ನಿರ್ದೇಶನ ಮತ್ತು ನಾಯಕನಾಗಿ ನಟಿಸುತ್ತಿರುವ ರಿಷಬ್ ಶೆಟ್ಟಿ ಜೊತೆಗೆ, ಮೂಲ ಕಾಂತಾರದಿಂದ ಕೆಲವು ನಟರು ಅಭಿನಯಿಸುತ್ತಿದ್ದಾರೆ. ಮೊದಲ ಚಿತ್ರಕ್ಕೆ ಕೆಲಸ ಮಾಡಿದ ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಮತ್ತು ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಕೂಡ ಪ್ರಿಕ್ವೆಲ್ ತಂಡದ ಭಾಗವಾಗಿದ್ದಾರೆ.

ಕಾಂತಾರ ಅಧ್ಯಾಯ 1ರ ನಿರ್ಮಾಣವು ಪೂರ್ಣ ಸ್ವಿಂಗ್‌ನಲ್ಲಿದೆ. 2025 ರ ಮಧ್ಯದಲ್ಲಿ ಬಿಡುಗಡೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಹೆಚ್ಚುವರಿಯಾಗಿ, ಪ್ರಶಾಂತ್ ವರ್ಮಾ ಅವರ ಮುಂದಿನ ಚಿತ್ರ ಜೈ ಹನುಮಾನ್‌ನಲ್ಲಿ ರಿಷಬ್ ಶೆಟ್ಟಿ ಹನುಮಾನ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರು ಕಾಂತಾರ ಅಧ್ಯಾಯ 1ಗಾಗಿ ತಮ್ಮ ಕಮಿಟ್‌ಮೆಂಟ್‌ಗಳನ್ನು ಪೂರ್ಣಗೊಳಿಸಿದ ನಂತರವೇ ಈ ಯೋಜನೆಯ ಚಿತ್ರೀಕರಣವನ್ನು ಪ್ರಾರಂಭಿಸಲು ಯೋಜಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT