ಟೆನಂಟ್ ಚಿತ್ರ ತಂಡ 
ಸಿನಿಮಾ ಸುದ್ದಿ

'ಟೆನಂಟ್' ಚಿತ್ರಕ್ಕೆ ಸಹಿ ಮಾಡಲು ಆರಂಭದಲ್ಲಿ ಹಿಂದೇಟು ಹಾಕಿದ್ದೆ: ನಟಿ ಸೋನು ಗೌಡ

ಚಿತ್ರತಂಡ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ನವೆಂಬರ್ 22 ರಂದು ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ.

ಟೀಸರ್ ಮತ್ತು ಹಾಡುಗಳ ಮೂಲಕ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿರುವ ‘ಟೆನಂಟ್’ ಸಿನಿಮಾ ಇದೀಗ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ.

ಚಿತ್ರತಂಡ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ನವೆಂಬರ್ 22 ರಂದು ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಇದಕ್ಕಾಗಿ ಪ್ರಮೋಷನ್ ಅಂಗಳಕ್ಕೆ ಚಿತ್ರ ತಂಡ ಇಳಿದಿದೆ.

ಟೆನಂಟ್ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದ್ದು, ಸದ್ಯ ಬಿಗ್ ಬಾಸ್ ಮನೆಯೊಳಗೆ ಇರುವ ನಟ ಧರ್ಮ ಕೀರ್ತಿರಾಜ್ ಮತ್ತು ಉಗ್ರಂ ಮಂಜು ಸೇರಿದಂತೆ ನಟ ತಿಲಕ್, ರಾಕೇಶ್ ಮಯ್ಯ ಹಾಗೂ ಸೋನು ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಾಸ್ಟರ್ ಚಾಯ್ಸ್ ಕ್ರಿಯೇಷನ್ಸ್ ಅಡಿಯಲ್ಲಿ ನಾಗರಾಜ್ ಟಿ ನಿರ್ಮಿಸಿದ ಈ ಚಿತ್ರ ಟ್ರೇಲರ್ ಮೂಲಕ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ. ಚಿತ್ರಕ್ಕೆ ಶ್ರೀಧರ್ ಶಾಸ್ತ್ರಿ ಆಕ್ಷನ್ ಕಟ್ ಹೇಳಿದ್ದರೆ, ನಿರ್ದೇಶಕ ಶ್ರೀಧರ್ ಅವರಿಗೆ ಇದು ಮೊದಲ ಸಿನಿಮಾ ಆಗಿದೆ.

‘ಕಣ್ ಕಣ್ಣ ಸಲಿಗೆ…’ ಎಂದು ಲವರ್ ಬಾಯ್ ಆಗಿ ಮಿಂಚಿದ್ದ ನಟ ಧರ್ಮಕೀರ್ತಿರಾಜ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಇನ್ನು ತಿಲಕ್ ರಾಜ್, ರಾಕೇಶ್ ಮಯ್ಯ ಹಾಗೂ ಸೋನು ಗೌಡ ಅವರ ಪಾತ್ರಗಳು ವಿಭಿನ್ನವಾಗಿದ್ದು, ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಬರುತ್ತಿದ್ದಾರೆ.

ಪೊಲೀಸ್ ಪಾತ್ರದಲ್ಲಿ ಮಿಂಚಿರುವ ನಟ ತಿಲಕ್ ಮಾತನಾಡಿ, ನಿರ್ದೇಶಕ ಶ್ರೀಧರ್ ಕಥೆ ಹೇಳಿದಾಗ ತುಂಬಾ ಇಷ್ಟ ಆಯ್ತು. ಇದು ನಿಜಕ್ಕೂ ನೈಜ ಘಟನೆ ಆಧಾರಿತವಾಗಿರುವುದಾ ಅಂತ ಕೇಳಿದೆ. ನನ್ನ ಸಿನಿಮಾ ಜೀವನದಲ್ಲೇ ಇಂಥ ಪಾತ್ರ ಮಾಡಿಲ್ಲ ಇದು ಖಂಡಿತ ನನ್ನ ಜೀವನದ ಹೈಲೆಟ್ ಸಿನಿಮಾವಾಗಲಿದೆ ಎಂದು ಹೇಳಿದರು.

ಇನ್ನು ನಟ ರಾಕೇಶ್ ಮಯ್ಯಾ ಮಾತನಾಡಿ, ನಿರ್ದೇಶಕ ಶ್ರೀಧರ್ ಪಾತ್ರದ ಬಗ್ಗೆ ತುಂಬಾ ಕ್ಲಾರಿಟಿ ಇಟ್ಟುಕೊಂಡು ಮಾಡಿದ್ದಾರೆ. ಒಂದೇ ಮನೆಯಲ್ಲಿ ನಡೆಯುವ ಸಿನಿಮಾವಿದು. ತುಂಬಾ ಎಂಗೇಜಿಂಗ್ ಆಗಿ ಇಟ್ಕೊಂಡು ಮಾಡಿದ ಚಿತ್ರ. ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ನಟಿ ಸೋನು ಗೌಡ ಮಾತನಾಡಿ, ಮೊದಲು ಈ ಸಿನಿಮಾದ ಕಥೆ ಕೇಳಿ ಮಾಡಬೇಕಾ ಬೇಡವಾ ಎಂದು ಯೋಚನೆ ಮಾಡಿದ್ದೆ. ಯಾಕೆಂದರೆ ಈ ರೀತಿಯ ಪಾತ್ರ ನಾನು ಯಾವತ್ತು ಮಾಡಿರಲಿಲ್ಲ. ಜನ ನನ್ನನ್ನು ಸ್ವೀಕಾರ ಮಾಡ್ತಾರ ಎನ್ನುವ ಭಯವಿತ್ತು. ಆದರೆ, ಕಥೆ ಇಷ್ಟ ಆಗಿ ಒಪ್ಪಿಕೊಂಡೆ. ಲಾಕ್ ಡೌನ್ ಸಮಯದಲ್ಲಿ ಒಂದೇ ಮನೆಯಲ್ಲಿ 21 ದಿನಗಳು ಶೂಟಿಂಗ್ ಮಾಡಿದ್ದೇವೆ. ಈ ರೀತಿಯ ಚಿತ್ರ ಜನರನ್ನು ಎಂಗೇಜಿಂಗ್ ಆಗಿ ಇಟ್ಟುಕೊಳ್ಳಬಹುದೇ ಎನ್ನುವ ಡೌಟ್ ಕೂಟ ನನಗಿತ್ತು. ಆದರೆ, ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.

ನಿರ್ದೇಶಕ ಶ್ರೀಧರ್ ಮಾತನಾಡಿ, ಲಾಕ್‍ಡೌನ್ ಆಧಾರವಾಗಿಟ್ಟುಕೊಂಡು ಮಾಡಿರುವ ಕಥೆ ಇದು. ಒಂದೇ ಮನೆಯಲ್ಲಿ ನಡೆಯುವ ಕಥೆ ಇದಾಗಿದ್ದು, ಚಿತ್ರದಲ್ಲಿ 5 ಪ್ರಮುಖ ಪಾತ್ರಗಳಿವೆ. ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಎಂದು ಹೇಳಿದರು.

ಅಂದಹಾಗೆ ಚಿತ್ರಕ್ಕೆ ಗಿರೀಶ್ ಹೊತೂರ್ ಸಂಗೀತ ಸಂಯೊಜನೆ ಮಾಡಿದ್ದು, ಉಜ್ವಲ್ ಸಂಕಲನ, ಮನೋಹರ್ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT