ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

A For ಆನಂದ್: ಮಕ್ಕಳ ದಿನಾಚರಣೆಯಂದು ಶಿವರಾಜ್‌ಕುಮಾರ್‌ ಹೊಸ ಸಿನಿಮಾ ಘೋಷಣೆ

ಪ್ರತಿ ಬಾರಿಯೂ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುವ ಶಿವಣ್ಣ ಅವರು ಈ ಬಾರಿ ಮೆಷ್ಟ್ರು ಆಗಿದ್ದಾರೆ.

ಸೆಂಚರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅಭಿನಯದ ಭೈರತಿ ರಣಗಲ್ ಚಿತ್ರ ನವೆಂಬರ್ 15 ರಂದು ತೆರೆ ಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಶಿವಣ್ಣ ಅವರು ನವೆಂಬರ್ 14 ರಂದು ಮಕ್ಕಳ ದಿನಾಚರಣೆಯ ವಿಶೇಷ ದಿನದಂದು 'A For ಆನಂದ್' ಎಂಬ ಹೊಸ ಸಿನಿಮಾ ಘೋಷಿಸಿದ್ದಾರೆ.

ಪ್ರತಿ ಬಾರಿಯೂ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುವ ಶಿವಣ್ಣ ಅವರು ಈ ಬಾರಿ ಮೆಷ್ಟ್ರು ಆಗಿದ್ದಾರೆ. `ಸುಂದರ ಕಾಂಡ’ದ ಸಿನಿಮಾದಲ್ಲಿ ಟೀಚರ್ ಆಗಿ‌ ಅಭಿನಯಿಸಿದ್ದ ಶಿವಣ್ಣ ಈಗ ಬಹಳ ವರ್ಷಗಳ ನಂತರ ಮತ್ತೆ ಶಿಕ್ಷಕರಾಗುತ್ತಿದ್ದಾರೆ.

ಶ್ರೀನಿ ನಿರ್ದೇಶವದ ಈ ಎ ಫಾರ್ ಆನಂದ್, ಶಿಕ್ಷಕರು ಮತ್ತು ಅವರ ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಸಂಭ್ರಮಿಸುವ ವಿಶೇಷ ಮತ್ತು ಹೃದಯಸ್ಪರ್ಶಿ ಕೌಟುಂಬಿಕ ಮನರಂಜನೆಯ ಚಿತ್ರವಾಗಿದೆ. ಶಿವರಾಜಕುಮಾರ್ ಅವರ ಪತ್ನಿ ಗೀತಾ ಅವರ ಬ್ಯಾನರ್‌ನ ಗೀತಾ ಪಿಕ್ಚರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ.

ಮಕ್ಕಳ ದಿನಾಚರಣೆಯ ಎ ಫಾರ್ ಆನಂದ್ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಫಸ್ಟ್‌ಲುಕ್‌ನಲ್ಲಿ ಮಕ್ಕಳ ಟ್ರೈನ್‌ ಮೇಲೆ ಶಿವಣ್ಣ ಬೆತ್ತ ಹಿಡಿದು ಏನೋ ತೋರಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಪೋಸ್ಟರ್‌ ಕಂಡು ಫ್ಯಾನ್ಸ್‌ ಖುಷ್‌ ಆಗಿದ್ದಾರೆ.

ಕರ್ನಾಟಕದ ಹೃದಯ ಭಾಗದಲ್ಲಿ, ಹದಿನಾಲ್ಕು ಹಳ್ಳಿಗಳ ಕನಸುಗಳು ಒಂದೇ ಶಾಲೆಯಲ್ಲಿ ಚಿಗುರುತ್ತವೆ. ಇಲ್ಲಿ ಅಕ್ಷರದ ಅರುಣೋದಯ ‘A for Apple’ನಿಂದ ಆರಂಭವಾಗುವುದಿಲ್ಲ, ಬದಲು ಬೆಳಕಿನ ಬೀಜ ಬಿತ್ತಿದ ಗುರುವಿನ ಹೆಸರಿನಿಂದ ಮೊಳೆಯುತ್ತದೆ ಅದೇ A for ಆನಂದ್ ಎಂದು ಪೋಸ್ಟರ್‌‌ ಜತೆ ಕ್ಯಾಪ್ಷನ್‌‌ ಕೊಟ್ಟಿದ್ದಾರೆ.

ಆನಂದ್ ಕೇವಲ ಶಿಕ್ಷಕರಲ್ಲ; ಅವರು ತನ್ನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ಮತ್ತು ಸ್ನೇಹಿತ. ಈ ಚಿತ್ರವು ನಂಬಿಕೆ, ಗೌರವದ ಪ್ರಾಮುಖ್ಯತೆ ಮತ್ತು ಮಕ್ಕಳ ಜೀವನದ ಮೇಲೆ ಶಿಕ್ಷಕರು ಬೀರಬಹುದಾದ ಶಾಶ್ವತ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಎ ಫಾರ್ ಆನಂದ್ ಎಲ್ಲಾ ವಯಸ್ಸಿನ ಪ್ರೇಕ್ಷಕರನ್ನು ರಂಜಿಸುವ ಚಿತ್ರವಾಗಿದೆ ಎಂದು ಚಿತ್ರ ನಿರ್ಮಾಪಕರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

Flydubai ಕಾಕ್‌ಪಿಟ್ ದಾಳಿ: ಸಹ ಪೈಲಟ್ ಗುರುತು ಬಹಿರಂಗ

FlyDubai ಕೋ ಪೈಲಟ್ ಹಾರಾಟಕ್ಕೆ ಒಮಾನ್ ನಲ್ಲಿ ನಿಷೇಧ: ಪತನಕ್ಕೆ ಯತ್ನಿಸಿದ್ದ ಆತ ಉಗ್ರವಾದ ಹಿನ್ನಲೆಯವನೇ?

ಪ್ರೇಮಾನಂದ ಮಹಾರಾಜರ ಶಿಷ್ಯ ಆತ್ಮಹತ್ಯೆಗೂ ಮುನ್ನ ಏನಾಯಿತು? ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

KPS ಯೋಜನೆ ಅನುಷ್ಠಾನಕ್ಕೆ ಕರ್ನಾಟಕಕ್ಕೆ ಎಡಿಬಿ ಯಿಂದ 1,750 ಕೋಟಿ ರೂ ಸಾಲ: ಶಾಲೆಗಳಿಗೆ ಕಾರ್ಯಕ್ಷಮತೆಯ ಗುರಿ ನಿಗದಿ!