ವಿಕ್ಕಿ ವರುಣ್, ಹರಿ ಸಂತೋಷ್ 
ಸಿನಿಮಾ ಸುದ್ದಿ

ವಿಕ್ಕಿ ವರುಣ್- ಹರಿ ಸಂತೋಷ್ ಕಾಂಬಿನೇಶನ್ ಮುಂದಿನ ಸಿನಿಮಾ 'ಡಿಸ್ಕೋ'

ವಿಕ್ಕಿ ವರುಣ್ ಚಿತ್ರಕ್ಕೆ ಕಥೆ ಬರೆದಿದ್ದು, ಹರಿ ಸಂತೋಷ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರವು ನಿಜ ಜೀವನದ ಘಟನೆಯನ್ನು ಆಧರಿಸಿದೆ.

ಕಾಲೇಜ್‌ ಕುಮಾರ್' ಸಿನಿಮಾ ಮಾಡಿ ಫೇಮಸ್ ಆಗಿದ್ದ ವಿಕ್ಕಿ ವರುಣ್ ಹಾಗೂ ಹರಿ ಸಂತೋಷ್ ಅವರು ಮತ್ತೊಂದು ಚಿತ್ರಕ್ಕೆ ಕೈಜೋಡಿಸಿದ್ದಾರೆ.

ಚಿತ್ರಕ್ಕೆ ಡಿಸ್ಕೋ ಎಂಬ ಶೀರ್ಷಿಕೆ ನೀಡಲಾಗಿದ್ದು, ಚಿತ್ರ ತಂಡ ಪೋಸ್ಟರ್ ನ್ನು ಬಿಡುಗಡೆ ಮಾಡಿದೆ. ಚಿತ್ರಕ್ಕೆ ಪ್ರಶಾಂತ್ ಕಲ್ಲೂರು ಬಂಡವಾಳ ಹೂಡಿದ್ದು, ಪೆನ್-ಎನ್ ಪೇಪರ್ ಸ್ಟುಡಿಯೋಸ್, ಸ್ಕ್ರೀನ್ 1 ನೇ ಸ್ಟುಡಿಯೋಸ್ ಮತ್ತು ಕಲ್ಲೂರ್ ಸಿನಿಮಾಸ್ ಸಿನಿಮಾ ವಿತರಣೆ ಜವಾಬ್ದಾರಿ ವಹಿಸಿಕೊಂಡಿದೆ.

ವಿಕ್ಕಿ ವರುಣ್ ಚಿತ್ರಕ್ಕೆ ಕಥೆ ಬರೆದಿದ್ದು, ಹರಿ ಸಂತೋಷ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರವು ನಿಜ ಜೀವನದ ಘಟನೆಯನ್ನು ಆಧರಿಸಿದ್ದು, ಚಿತ್ರದಲ್ಲಿ ಸಾಮಾನ್ಯ ಸಿನಿಮಾ ನಿರ್ಮಾಣದ ಮಾದರಿಯನ್ನು ಅನುಸರಿಸುವುದಿಲ್ಲ ಹರಿ ಸಂತೋಷ್ ಅವರು ಹೇಳಿದ್ದಾರೆ.

ಕಾಲೇಜ್ ಕುಮಾರ್ ನಂತರ ನಿರ್ದೇಶಕ ಸಂತೋಷ್ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. ನನ್ನ ಜೀವನದ ಕಥೆಯನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ ಇದು ಉತ್ತಮ ಭಾವನೆ. ಪಾತ್ರವು ಹಾಸ್ಯ ಹಾಗೂ ಭಾವನಗಳೊಂದಿಗೆ ಸಂಯೋಜನೆಗೊಂಡಿದ್ದು, ನನ್ನ ಸುತ್ತಮುತ್ತಲಿನ ಜನರು ನನ್ನನ್ನು ಡಿಸ್ಕೋ ಎಂದು ಕರೆಯುತ್ತಾರೆ. ಅದೇ ಹೆಸರನ್ನೇ ಚಿತ್ರಕ್ಕೂ ಇಡಲಾಗಿದೆ ಎಂದು ನಟ ವಿಕ್ಕಿ ಹೇಳಿದ್ದಾರೆ.

ಡಿಸ್ಕೋ ಚಿತ್ರದ ಸ್ಟಿಲ್

ಅಲೆಮಾರಿ ಚಿತ್ರದಿಂದ ಖ್ಯಾತಿ ಗಳಿಸಿರುವ ಹರಿ ಸಂತೋಷ್ ಅವರು, ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಧನ್ವೀರ್ ಮತ್ತು ಶ್ರೀಲೀಲಾ ನಟಿಸಿರುವ ಬೈ 2 ಲವ್ ಚಿತ್ರನ್ನೂ ನಿರ್ದೇಶಿಸಿದ್ದಾರೆ.

ತನುಜ್ ವಿರ್ವಾನಿ, ತ್ರಿಧಾ ಚೌಧರಿ ಮತ್ತು ಸಪ್ನಾ ಪಬ್ಬಿ ನಟಿಸಿರುವ ತಮ್ಮ ಚೊಚ್ಚಲ ಹಿಂದಿ ಚಲನಚಿತ್ರ ಬೆಸಬರಿಯಾ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ. ಬೇಸಬರಿಯಾ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮತ್ತೊಂದೆಡೆ, ಡಿಸ್ಕೋ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ