ಕಾಂತಾರ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಉಡುಪಿ: ಕಾಂತಾರ ಚಿತ್ರತಂಡ ತೆರಳುತ್ತಿದ್ದ ಬಸ್ ಅಪಘಾತ; ಹಲವು ಕಲಾವಿದರಿಗೆ ಗಂಭೀರ ಗಾಯ

ಕೊಲ್ಲೂರು ಸಮೀಪದ ಜಡ್ಕಳ್ ಬಳಿ ಪಲ್ಟಿಯಾದ ಬಸ್​ನಲ್ಲಿ ಹಲವರು ಇದ್ದರು. ಆ ಪೈಕಿ 6 ಜನರಿಗೆ ಗಂಭೀರವಾಗಿ ಪೆಟ್ಟಾಗಿದೆ.

ಉಡುಪಿ: ರಿಷಬ್​ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ: ಚಾಪ್ಟರ್​ 1’ ಸಿನಿಮಾದಲ್ಲಿ ನಟಿಸುತ್ತಿರುವ ಕಲಾವಿದರ ಬಸ್​ ಅಪಘಾತ ಆಗಿದೆ. ಶೂಟಿಂಗ್ ಸಲುವಾಗಿ ಜ್ಯೂನಿಯರ್​ ಕಲಾವಿದರನ್ನು ಕರೆದುಕೊಂಡು ಹೋಗಿದ್ದ ಮಿನಿ ಬಸ್​ ಪಲ್ಟಿ ಆಗಿದೆ.

ಕೊಲ್ಲೂರು ಸಮೀಪದ ಜಡ್ಕಳ್ ಬಳಿ ಪಲ್ಟಿಯಾದ ಬಸ್​ನಲ್ಲಿ ಹಲವರು ಇದ್ದರು. ಆ ಪೈಕಿ 6 ಜನರಿಗೆ ಗಂಭೀರವಾಗಿ ಪೆಟ್ಟಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಕೊಲ್ಲೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕಾಂತಾರಾ ಚಿತ್ರದ ಶೂಟಿಂಗ್, ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿನ ಪ್ರಾಂತ್ಯಗಳಲ್ಲಿ ಭರದಿಂದ ಶೂಟಿಂಗ್ ನಡೆಸಿತ್ತು. ಇತ್ತೀಚೆಗೆ ಕೊಲ್ಲೂರಿನ ಕಡೆಗೆ ಪ್ರಯಾಣ ಬೆಳೆಸಿದ್ದ ಚಿತ್ರತಂಡ ಅಲ್ಲಿನ ಮುದೂರಿನ ಬಳಿ ಕೆಲವು ದೃಶ್ಯಗಳ ಶೂಟಿಂಗ್ ನಡೆಸಿತ್ತು. ಆನಂತರದಲ್ಲಿ, ಕೊಲ್ಲೂರಿನ ಮಾರ್ಗವಾಗಿ ಬೇರೆಡೆಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಮಿನಿ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿದ್ದ 20 ಜೂನಿಯರ್ ಕಲಾವಿದರು ಸಾಗುತ್ತಿದ್ದ ಈ ಬಸ್ ಜಡ್ಕಳ್ ಬಳಿ ಸಾಗುತ್ತಿದ್ದಾಗ ತಗ್ಗೊಂದನ್ನು ಇಳಿದು ಹತ್ತುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಸುದೈವವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US Travel Ban: ಪ್ರಯಾಣ ನಿಷೇಧ ವಿಸ್ತರಿಸಿದ ಟ್ರಂಪ್, 12 ದೇಶಗಳ ಮೂಲ ಪಟ್ಟಿಗೆ ಪ್ಯಾಲೆಸ್ಟೀನಿಯನ್ನರು ಸೇರಿ 20 ದೇಶಗಳ ಸೇರ್ಪಡೆ..!

ಹೊಸ ವರ್ಷ 2026 ಸಂಭ್ರಮಾಚರಣೆ: ಬೆಂಗಳೂರು ಪೊಲೀಸರಿಂದ ಮಾರ್ಗಸೂಚಿ ಬಿಡುಗಡೆ

'ಆಪರೇಷನ್ ಸಿಂದೂರ್' ಮೊದಲ ದಿನ ಭಾರತಕ್ಕೆ ಸಂಪೂರ್ಣ ಸೋಲು, ಭಾರತೀಯ ವಿಮಾನಗಳನ್ನು ಪಾಕಿಸ್ತಾನ ಹೊಡೆದುರುಳಿಸಿತ್ತು': ಪೃಥ್ವಿರಾಜ್ ಚವಾಣ್-Video

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಉದ್ಘಾಟನಾ ಪಂದ್ಯ: ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್

ಲೋಕಾಯುಕ್ತ ದಾಳಿ: ನಾಲ್ವರು ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ಸಿಕ್ಕಿದ್ದು 18.2 ಕೋಟಿ ರೂ. ಅಕ್ರಮ ಆಸ್ತಿ!

SCROLL FOR NEXT