ಸದ್ಯ ಸ್ಯಾಂಡಲ್ ವುಡ್ ನಲ್ಲಿ ಡಾಲಿ ಧನಂಜಯ್ ಹಲವು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಬ್ಯುಸಿಯಾಗಿದ್ದಾರೆ. ಸದ್ಯ ಶಂಕರ್ ಗುರು ನಿರ್ದೇಶನದ ಅಣ್ಣಾ ಫ್ರಮ್ ಮೆಕ್ಸಿಕೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ನಾಗಭೂಷಣ್, ಪೂರ್ಣಚಂದ್ರ ಮೈಸೂರು, ಮತ್ತು ರಂಗಾಯಣ ರಘು ಜೊತೆಗೆ ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿದ್ದಾರೆ, ಇವರುಗಳ ಜೊತೆಗೆ ಪ್ರತಿಭಾವಂತ ಕಲಾವಿದರು ಹಾಗೂ ಹೊಸಬರು ನಟಿಸುತ್ತಿದ್ದಾರೆ. ಇದರ ನಡುವೆ ಡಾಲಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ಅಧಿಕೃತವಾಗಿ ಪಾತ್ರವರ್ಗಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ ಪ್ರೇಮ್ ಅವರ EK ಲವ್ ಯಾ ಮೂಲಕ ವೃತ್ತಿಜೀವನ ಪ್ರಾರಂಭಿಸಿದ ರೀಷ್ಮಾ ಗಣೇಶ್ ಜೊತೆ ಬಾನದಾರಿಯಲ್ಲಿ ಕಾಣಿಸಿಕೊಂಡರು. ಉಪೇಂದ್ರ ಅವರ UI ಮತ್ತು ಧ್ರುವ ಸರ್ಜಾ ಅವರ KD ನಲ್ಲಿ ನಟಿಸಿದ್ದಾರೆ. ಧನಂಜಯ್ ಅವರೊಂದಿಗಿನ ಈ ಮೊದಲಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದು ಈ ಜೋಡಿಯು ಗಮನ ಸೆಳೆಯುತ್ತಿದೆ. ಈಗಾಗಲೇ ಕೆಲವು ಭಾಗಗಳನ್ನು ಚಿತ್ರೀಕರಿಸಿದ್ದು, ಅವರ ಪಾತ್ರದ ಬಗ್ಗೆ ಅಧಿಕೃತ ಪ್ರಕಟಣೆಯನ್ನು ನಿರೀಕ್ಷಿಸಲಾಗಿದೆ.
ಅಣ್ಣ ಫ್ರಮ್ ಮೆಕ್ಸಿಕೋ ಧನಂಜಯ್ ಮತ್ತು ನಿರ್ದೇಶಕ ಶಂಕರ್ ಗುರು ನಡುವಿನ ಎರಡನೇ ಸಿನಿಮಾವಾಗಿದೆ. ಅವರು ಈ ಹಿಂದೆ ಬಡವ ರಾಸ್ಕಲ್ ಸಿನಿಮಾದಲ್ಲಿ ಜೊತೆಯಾಗಿದ್ದರು. ಈ ಸಿನಿಮಾ ನಾಯಕ ಧನಂಜಯ ಸದ್ಯಕ್ಕೆ ಒಂದಾದ ಮೇಲೆ ಒಂದರಂತೆ ಚಿತ್ರಗಳಲ್ಲಿ ಬಿಝಿ ಇದ್ದಾರೆ. ಅವರ ನಟನೆಯ ಮತ್ತು ರೋಹಿತ್ ಪದಕಿ ನಿರ್ದೇಶನದ ಆಕ್ಷನ್ ಸಿನಿಮಾ ‘ಉತ್ತರಕಾಂಡ’ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇನ್ನೊಂದೆಡೆ, ಅಲ್ಲುಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ 2: ದಿ ರೂಲ್’ ಚಿತ್ರದಲ್ಲಿ ಡಾಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವುಗಳ ಜತೆಗೆ ‘ಕೋಟಿ’ ಹಾಗೂ ‘ಝೀಬ್ರಾ’ ಚಿತ್ರಗಳು ಧನಂಜಯ ಲೈನಪ್‌ನಲ್ಲಿವೆ. ಐರಾ ಫಿಲಂಸ್ ಸಹಯೋಗದೊಂದಿಗೆ ಸತ್ಯ ರಾಯಲ ಅವರ ರಾಯಲ ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದು, ಎಸ್‌ಕೆ ರಾವ್ ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರದ First look ಬಿಡುಗಡೆಯಾಗಿದ್ದು ಧನಂಜಯ್ ಚಿನ್ನದ ಸರ ಮತ್ತು ಕರ್ನಾಟಕ ಧ್ವಜವನ್ನು ಹೊಂದಿರುವ ಲಾಕೆಟ್‌ನಿಂದ ಅಲಂಕರಿಸಲಾಗಿದೆ. ಕರ್ನಾಟಕ ಸಾಂಪ್ರಾದಾಯಿಕ ಶೈಲಿಯ ಉಡುಗೆ ಧರಿಸಿದ್ದಾರೆ. ಬಿಳಿ ಅಂಗಿ ಮತ್ತು ಧೋತಿಯಲ್ಲಿ ಧನಂಜಯ್ ಮತ್ತಷ್ಟು ಆಕರ್ಷಕವಾಗಿ ಕಾಣುತ್ತಿದ್ದಾರೆ. ಇದೊಂದು ಕೌಟುಂಬಿಕ ಮನರಂಜನಾ ಆಕ್ಷನ್-ಪ್ಯಾಕ್ಡ್ ಸಿನಿಮಾವಾಗಿದ್ದು, ಹಳ್ಳಿಯ ಸೊಗಡನ್ನು ತೋರಿಸಲಿದೆ.