'ಟೆನೆಂಟ್' ಕನ್ನಡ ಚಿತ್ರರಂಗದಲ್ಲಿ ರಿಲೀಸ್‌ಗೆ ತಯಾರಿ ಮಾಡಿಕೊಂಡಿರುವ ಬಹುನಿರೀಕ್ಷಿತ ಸಿನಿಮಾ. ಸದ್ಯ ಚಿತ್ರ ತಂಡ ಟೀಸರ್ ರಿಲೀಸ್ ಮಾಡುವ ಮೂಲಕ ಸಿನಿರಸಿಕರ ಗಮನ ಸೆಳೆದಿದೆ. ಈಗಾಗಲೇ ಶೂಟಿಂಗ್ ಮುಗಿಸಿ, ಬಿಡುಗಡೆಗೆ ಎದುರು ನೋಡುತ್ತಿದೆ.
ಟೆನೆಂಟ್ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ನೈಜ ಕಥೆ ಆಧಾರಿತ ಸಿನಿಮಾ ಇದಾಗಿದೆ. ಸದ್ಯ ಬಿಗ್ ಬಾಸ್ ಮನೆಯೊಳಗೆ ಇರುವ ನಟ ಧರ್ಮ ಕೀರ್ತಿರಾಜ್, ಉಗ್ರಂ ಮಂಜು ಹಾಗೂ ತಿಲಕ್, ರಾಕೇಶ್ ಮಯ್ಯ ಹಾಗೂ ಸೋನು ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ಚಿತ್ರವಿದು. ಸಿನಿಮಾಗೆ ಶ್ರೀಧರ್ ಶಾಸ್ತ್ರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ಶ್ರೀಧರ್ ಅವರಿಗಿದು ಚೊಚ್ಚಲ ಚಿತ್ರ. ಯುವ ನಿರ್ದೇಶಕನ ಪ್ರಯತ್ನಕ್ಕೆ ಚಂದನವನದ ತಾರಾಬಳಗ ಸಾಥ್ ಕೊಟ್ಟಿದೆ. ಸದ್ಯ ರಿಲೀಸ್ ಆಗಿರುವ ಟೀಸರ್ ನೋಡಿದರೆ ಇದು ಅವರ ಮೊದಲ ಸಿನಿಮಾ ಅಂತಾ ಅನಿಸದ ಹಾಗೆ ಅಷ್ಟೇ ಅಚ್ಚುಕಟ್ಟಾಗಿ ಆ್ಯಕ್ಷನ್ ಕಟ್ ಹೇಳಿದ್ದಾರೆ ನಿರ್ದೇಶಕರು.
ಲಾಕ್‌ಡೌನ್ ಸಮಯದಲ್ಲಿ ದಂಪತಿಗಳ ಛಿದ್ರಗೊಂಡ ಕನಸುಗಳನ್ನು ಅನಾವರಣಗೊಳಿಸುವ ಕಥೆ ಇದಾಗಿದೆ. ನವೆಂಬರ್ 22 ರಂದು ಸಿನಿಮಾ ರಿಲೀಸ್ ಆಗಲಿದೆ. ಕೊರೋನಾ ಲಾಕ್ ಡೌನ್ ಸಮಯದಲ್ಲಿ ಅನೇಕ ಬಾಡಿಗೆದಾರರು ಎದುರಿಸಿದ ಸಮಸ್ಯೆಗಳ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಆಗಿದೆ. ಲಾಕ್‌ಡೌನ್ ಸಮಯದಲ್ಲಿ ಒಂದೇ ಮನೆಯೊಳಗೆ ನಡೆದ ಕ್ರೈಮ್ ಥ್ರಿಲ್ಲರ್ ಕಥೆ ಒಳಗೊಂಡಿದೆ.