ಜಗದೀಶ್ ಮತ್ತು ಕಿಚ್ಚಾ ಸುದೀಪ್ 
ಸಿನಿಮಾ ಸುದ್ದಿ

Bigg Boss Kannada: ಮತ್ತೆ ಬರ್ತಾರಾ ಲಾಯರ್ ಜಗದೀಶ್?; 'ಮುಗಿದು ಹೋದ ಅಧ್ಯಾಯ' ಎಂದ Kichcha Sudeep

ಜಗದೀಶ್ ಅವರನ್ನು ಸ್ವತಃ ಬಿಗ್ ಬಾಸ್​ ಮನೆಯಿಂದ ಎಲಿಮಿನೇಟ್ ಮಾಡಿದ್ದಾರೆ. ಇದೀಗ ಮತ್ತೆ ಜಗದೀಶ್ ಅವರನ್ನು ಮನೆಗೆ ವಾಪಸ್ ಕರೆಸುವ ಕುರಿತು ಚರ್ಚೆಗಳು ನಡೆಯುತ್ತಿದೆ.

ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 11 ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು.. ಇತ್ತೀಚೆಗೆ ಜಗಳದಿಂದಾಗಿ ಪರಸ್ಪರ ಕೈಕೈ ಮಿಲಾಯಿಸಿ ಮನೆಯಿಂದ ಹೊರಬಂದಿದ್ದ ಲಾಯರ್ ಖ್ಯಾತಿಯ ಜಗದೀಶ್ ಮತ್ತೆ ಬಿಗ್ ಹೌಸ್ ಒಳಗೆ ಹೋಗುವ ಕುರಿತು ಕಾರ್ಯಕ್ರಮದ ನಿರೂಪಕ ನಟ ಕಿಚ್ಚಾ ಸುದೀಪ್ ಮಹತ್ವದ ಹೇಳಿಕೆ ನೀಡಿದ್ದಾರೆ.

ಹೌದು.. ಹಾಲಿ ಆವೃತ್ತಿಯ ಕನ್ನಡ ಬಿಗ್ ಬಾಸ್ ಕಳೆದ ಸೀಸನ್​ಗಳಿಗಿಂತ ಹೆಚ್ಚು ಸುದ್ದಿಯಲ್ಲಿದೆ. ‘ಬಿಗ್ ಬಾಸ್’ ಸುದ್ದಿಯಲ್ಲಿ ಇರುವುದರ ಜೊತೆಗೆ ಸಾಕಷ್ಟು ಟೀಕೆಗಳನ್ನು ಕೂಡ ಪಡೆದುಕೊಳ್ಳುತ್ತಿದ್ದು, ಲಾಯರ್ ಖ್ಯಾತಿಯ ಜಗದೀಶ್ ಮನೆಯ ಇತರೆ ಸದಸ್ಯರೊಂದಿಗೆ ಮಿತಿಮೀರಿ ನಡೆದುಕೊಂಡು ಇದೀಗ ಮನೆಯಿಂದಲೇ ಹೊರಹಾಕಲ್ಪಟ್ಟಿದ್ದಾರೆ.

ಜಗದೀಶ್ ಅವರನ್ನು ಸ್ವತಃ ಬಿಗ್ ಬಾಸ್​ ಮನೆಯಿಂದ ಎಲಿಮಿನೇಟ್ ಮಾಡಿದ್ದಾರೆ. ಇದೀಗ ಮತ್ತೆ ಜಗದೀಶ್ ಅವರನ್ನು ಮನೆಗೆ ವಾಪಸ್ ಕರೆಸುವ ಕುರಿತು ಚರ್ಚೆಗಳು ನಡೆಯುತ್ತಿದೆ.

ಮಹಿಳಾ ಸ್ಪರ್ಧಿಗಳ ವಿರುದ್ಧ ಅವರು ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಇದರಿಂದ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಅವರು ಎಲಿಮಿನೇಟ್ ಆಗಿದ್ದು, ಮತ್ತೆ ಬರಬೇಕು ಎನ್ನುವ ಕೂಗು ಇದೆ. ಅವರು ಬರುತ್ತಾರೆ ಅನ್ನೋದು ಅನೇಕರ ನಂಬಿಕೆ. ಆದರೆ, ಇದಕ್ಕೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.

ಸ್ಪರ್ಧಿಗಳಿಗೆ ಫುಲ್ ಕ್ಲಾಸ್

ಅಕ್ಟೋಬರ್ 19ರ ಎಪಿಸೋಡ್​ನಲ್ಲಿ ಸುದೀಪ್ ಅವರು ಮನೆಯವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ಪ್ರಶ್ನೆಗಳು ಮನೆಯವರು ಮಾಡಿದ ತಪ್ಪನ್ನು ಎತ್ತಿ ತೋರಿಸಿದರು. ಅಲ್ಲದೆ ಜಗದೀಶ್ ವಿಚಾರದಲ್ಲಿ ಮನೆಯ ಇತರೆ ಸದಸ್ಯರು ಮಾಡಿದ ತಪ್ಪುಗಳನ್ನು ತೋರಿಸುತ್ತಲೇ ಇಡೀ ಮನೆಯ ಸದಸ್ಯರಿಗೆ ಫುಲ್ ಕ್ಲಾಸ್ ತೆಗೆದುಕೊಂಡರು.

ಸುದೀಪ್ ಅವರು ಜಗದೀಶ್​ನ ವಹಿಸಿಕೊಂಡು ಮಾತನಾಡುತ್ತಿದ್ದಾರೆ ಎಂಬ ರೀತಿಯಲ್ಲಿ ಮನೆ ಮಂದಿಗೆ ಕಾಣುತ್ತಾ ಇತ್ತು. ಹೀಗಾಗಿ, ಸುದೀಪ್ ಪ್ರಶ್ನೆ ಕೇಳಿದಾಗ ಅವರು ಜಗದೀಶ್ ಮಾಡಿದ್ದು ತಪ್ಪು ಎಂದು ಹೇಳುವ ರೀತಿಯಲ್ಲಿ ಮಾತನಾಡಲು ಆರಂಭಿಸುತ್ತಿದ್ದರು.

ಜಗದೀಶ್ ಮುಗಿದ ಅಧ್ಯಾಯ ಎಂದ ನಟ ಕಿಚ್ಚಾ ಸುದೀಪ್

ಈ ವೇಳೆ ಸ್ಪಷ್ಟನೆ ಕೊಡುವಾಗ ಸುದೀಪ್ ಅವರು ಒಂದು ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ‘ನಾನು ಜಗದೀಶ್​ ಅವರನ್ನು ಕ್ಲೀನ್ ಮಾಡಲು ಅಥವಾ ಅವರು ಮಾಡಿದ್ದು ತಪ್ಪಲ್ಲ ಎಂದಲ್ಲ ಹೇಳಲು ಇಲ್ಲಿ ನಿಂತಿಲ್ಲ. ಅವರ ಮಾತಿನ ಮೇಲೆ ನಿಗಾ ಇರಲಿಲ್ಲ. ಈ ಕಾರಣದಿಂದ ಅವರು ಎಲಿಮಿನೇಟ್ ಆದರು. ಇದನ್ನು ಬಿಗ್ ಬಾಸ್ ಸಹಿಸಲ್ಲ. ಜಗದೀಶ್ ಬಿಗ್ ಬಾಸ್ ಪಾಲಿಗೆ ಮುಗಿದು ಹೋದ ಅಧ್ಯಾಯ’ ಎಂದು ಹೇಳಿದ್ದಾರೆ. ಇದರಿಂದ ಜಗದೀಶ್ ಅವರು ಮರಳಿ ಬರೋದಿಲ್ಲ ಎಂಬುದು ಸ್ಪಷ್ಟವಾಗಿದೆ.

ಅಂದಹಾಗೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ರಂಜಿತ್ ಹಾಗೂ ಜಗದೀಶ್ ಅವರು ಎಲಿಮಿನೇಟ್ ಆಗಿದ್ದಾರೆ. ವಾರದ ಮಧ್ಯೆ ಇವರನ್ನು ಹೊರಕ್ಕೆ ಹಾಕಲಾಗಿದೆ. ಇಂದು (ಅಕ್ಟೋಬರ್ 20) ಜಗದೀಶ್ ಅವರು ಸುದ್ದಿಗೋಷ್ಠಿ ಕೂಡ ಆಯೋಜನೆ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT