ಕಿರುತೆರೆ ನಟಿ ಮಲೈಕಾ ವಸುಪಾಲ್ ‘ಉಪಾಧ್ಯಕ್ಷ’ ಸಿನಿಮಾ ಮೂಲಕ ಜನರ ಮನ ಗೆದ್ದ ಮೇಲೆ ಹೊಸ ಸಿನಿಮಾಗಳ ಆಫರ್‌ಗಳು ಅರಸಿ ಬರುತ್ತಿವೆ. ‘ಬನಾರಸ್’ ಹೀರೋ ಝೈದ್ ಖಾನ್ ನಟನೆಯ ಹೊಸ ಚಿತ್ರಕ್ಕೆ ಮಲೈಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಮುದ್ದು ಮುಖದ ಚೆಲುವೆ ಮಲೈಕಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಸದ್ಯ ಅನಿಲ್ ಕುಮಾರ್ ನಿರ್ದೇಶಿಸುತ್ತಿರುವ ‘ಕಲ್ಟ್’ ಚಿತ್ರ ಫಸ್ಟ್ ಲುಕ್ ಪೋಸ್ಟರ್‌ನಿಂದಲೇ ವೈರಲ್ ಆಗಿತ್ತು. ಇದೀಗ ಝೈದ್ ಖಾನ್ ಅವರ ‘ಬ್ಲಡ್ಡೀ ಲವ್’ಗೆ ರಚಿತಾ ರಾಮ್ ಬಳಿಕ ಮತ್ತೋರ್ವ ನಾಯಕಿಯಾಗಿ ಮಲೈಕಾ ಬಣ್ಣ ಹಚ್ಚುತ್ತಿದ್ದಾರೆ.
‘ಕಲ್ಟ್’ ಆ್ಯಕ್ಷನ್ ರೊಮ್ಯಾಂಟಿಕ್ ಜಾನರ್ ಚಿತ್ರವಾಗಿದ್ದು, ಈ ಪ್ರಾಜೆಕ್ಟ್ ಕುರಿತು ಇನ್ನಷ್ಟು ಮಾಹಿತಿ ಒಂದೊಂದಾಗೇ ಹೊರಬೀಳಲಿದೆ. ಒಂದೇ ಸಿನಿಮಾದಲ್ಲಿ ಝೈದ್ ಖಾನ್ ಜೊತೆ ರಚಿತಾ ರಾಮ್ ಮತ್ತು ಮಲೈಕಾ ಈ ಮೂವರ ರೊಮ್ಯಾಂಟಿಕ್ ಸ್ಟೋರಿ ಇರುತ್ತದೆ ಎಂದು ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅಭಿಮಾನಿಗಳು ಈ ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.