'ರಮ್ಮಿ ಆಟ' ಸಿನಿಮಾ ಟ್ರೇಲರ್ 
ಸಿನಿಮಾ ಸುದ್ದಿ

'ರಮ್ಮಿ ಆಟ' ಸಿನಿಮಾ ಟ್ರೇಲರ್ ಅನಾವರಣ: ಸೆಪ್ಟೆಂಬರ್ 20 ರಂದು ರಿಲೀಸ್

ಆನ್‌ಲೈನ್ ಜೂಜಾಟದ ವಿರುದ್ಧ ಧ್ವನಿ ಎತ್ತಿರುವ ‘ರಮ್ಮಿ ಆಟ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಟ್ರೇಲರ್‌ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.

ಮನರಂಜನೆಗಾಗಿ ಆನ್ ಲೈನ್ ಗೇಮ್ ಆಡುವ ಹವ್ಯಾಸ ಬೆಳೆಸಿಕೊಂಡ ನಂತರ ಅದು ಚಟ ಆಗಿಬಿಡುತ್ತದೆ. ರಮ್ಮಿ ಗೇಮ್ ನಂಥ ಆಟಗಳ ಚಟಕ್ಕೆ ಕೆಲವರು ತಮ್ಮ ಮನೆ ಮಠ ಕಳೆದುಕೊಂಡು ಜೀವನವನ್ನೇ ನಾಶ ಮಾಡಿಕೊಂಡಿದ್ದಾರೆ. ಈ ಆಟದಿಂದ ಲಾಭ, ನಷ್ಟ ಎರಡೂ ಆಗಬಹುದು. ಸಿನಿತಾರೆಯರು ಇದರ ಪ್ರಚಾರ ಮಾಡುವುದರಿಂದ ಬಹುತೇಕರು ಹಣದಾಸೆಗೆ ಬಿದ್ದು ಎಲ್ಲವನ್ನೂ ಕಳೆದುಕೊಂಡಿದ್ದಾರೆ.

ಆನ್‌ಲೈನ್ ಜೂಜಾಟದ ವಿರುದ್ಧ ಧ್ವನಿ ಎತ್ತಿರುವ ‘ರಮ್ಮಿ ಆಟ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಟ್ರೇಲರ್‌ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.

‘ಜೂಜಾಟದಿಂದ ಮಹಾಭಾರತದಲ್ಲಿ ಯುದ್ಧವೇ ನಡೆಯಿತು. ಅನೇಕ ರಾಜಮಹಾರಾಜರು ಜೂಜಿನಿಂದ ಎಲ್ಲವನ್ನೂ ಕಳೆದುಕೊಂಡ ಸಾಕಷ್ಟು ನಿದರ್ಶನಗಳಿವೆ. ಇಂತಹ ರಮ್ಮಿ ಆಟವನ್ನು ಚಿತ್ರರಂಗ, ನಟನಟಿಯರು ಉತ್ತೇಜಿಸಬಾರದು. ಈ ಆಟದಿಂದಾಗುವ ಪರಿಣಾಮವನ್ನು ಚಿತ್ರದ ಮೂಲಕ ತಿಳಿಸಲು ಹೊಸ ತಂಡವೊಂದು ಹೊರಟಿದೆ. ಒಳಿತಾಗಲಿ’ ಎಂದರು ಉಮೇಶ್ ಬಣಕಾರ್. ನಿರ್ಮಾಪಕ ರಮೇಶ್ ಯಾದವ್ ಹಾಗು ಹನುಮೇಶ್ ಪಾಟೀಲ್ ಇದೇ ವೇಳೆ ಉಪಸ್ಥಿತರಿದ್ದರು ಎಯ್ಟ್ ಏಂಜಲ್ಸ್ ಸಂಸ್ಥೆಯಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಕಾರ್ತೀಕ್ ಎಸ್. ಅವರ ಛಾಯಾಗ್ರಹಣ, ಉಮರ್ ಅವರ ಸಂಭಾಷಣೆ, ಅಮೀರ್ ಅವರ ಸಾಹಸ, ಪ್ರಭು ಎಸ್.ಆರ್. ಅವರ ಸಂಗೀತ, ಗಣೇಶ್, ಮಾಧುರಿ, ಉಮರ್ ಷರೀಫ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ.

ಈಗಾಗಲೇ ತನ್ನ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿಕೊಂಡಿರುವ ರಮ್ಮಿ ಆಟ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಯು' ಸರ್ಟಿಫಿಕೇಟ್ ಸಿಕ್ಕಿದೆ. ಮುಂದಿನ ತಿಂಗಳು ಚಿತ್ರವನ್ನು ರಿಲೀಸ್ ಮಾಡುವ ಸಿದ್ದತೆ ನಡೆದಿದ್ದು, ನೆರಳು ಮೀಡಿಯಾ ಥ್ರೂ ಲಿಖಿತ್ ಫಿಲಂಸ್ ಮೂಲಕ ಸೆಪ್ಟೆಂಬರ್ 20 ರಂದು ಬಿಡುಗಡೆಯಾಗುತ್ತಿದೆ.

ಉಮರ್ ಷರೀಫ್ ಚಿತ್ರದ ನಿರ್ದೇಶಕರು. ರಮೇಶ್ ಯಾದವ್ ಹಾಗೂ ಹನುಮೇಶ್ ಪಾಟೀಲ್ ಬಂಡವಾಳ ಹೂಡಿದ್ದಾರೆ. ‘ಇವತ್ತು ಆನ್‌ಲೈನ್‌ ಜೂಜು ಸಾಕಷ್ಟು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸುತ್ತಿವೆ. ಇಂತಹ ಆಟದ ಅಡ್ಡಪರಿಣಾಮಗಳನ್ನು ಹಾಸ್ಯದ ಮೂಲಕ ಹೇಳಿದ್ದೇವೆ. ಶೀಘ್ರದಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕರು.

ಈ ಚಿತ್ರಕ್ಕೆ ಕಾರ್ತೀಕ್ ಎಸ್ ಛಾಯಾಚಿತ್ರಗ್ರಹಣ, ಪ್ರಭು ಎಸ್.ಆರ್‌ ಸಂಗೀತವಿದೆ. ರಾಘವ ಸೂರ್ಯ ಹಾಗೂ ಸಯ್ಯದ್ ಇರ್ಫಾನ್ ಚಿತ್ರದ ನಾಯಕರು. ವಿನ್ಯಾ ಶೆಟ್ಟಿ, ಸ್ನೇಹ ರಾವ್, ಅಭಿ ಗೌಡ, ಶ್ರೀಕರ್, ರೋಷನ್ ಶ್ರೀನಿವಾಸ್‌ ಮುಂತಾದವರು ಉಳಿದ ತಾರಾಗಣದಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಹಲ್ಗಾಮ್ ಉಗ್ರ ದಾಳಿ: 1,597 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ NIA; ಉನ್ನತ LeT ಕಮಾಂಡರ್ ಸಾಜಿದ್ ಜಾಟ್ ಹೆಸರು ಉಲ್ಲೇಖ!

Gold Rate: ಮತ್ತೆ ಗಗನಕ್ಕೇರಿದ ಚಿನ್ನದ ದರ, ಒಂದೇ ದಿನ ಬರೊಬ್ಬರಿ 4 ಸಾವಿರ ರೂ ಏರಿಕೆ, ಎಷ್ಟು ಗೊತ್ತಾ?

Video: ಯಶವಂತಪುರ ನಿಲ್ದಾಣದಲ್ಲಿ ಹೈಡ್ರಾಮಾ: RPF ಸಿಬ್ಬಂದಿ ಮೇಲೆ ಪುಂಡರ ಹಲ್ಲೆ, ರೈಲು ವಿಳಂಬ! ಆಗಿದ್ದೇನು?

ನವೆಂಬರ್‌ನಲ್ಲಿ ನಿರುದ್ಯೋಗ ದರ ಶೇ. 4.7 ಕ್ಕೆ ಇಳಿಕೆ, ಉದ್ಯೋಗ ಮಾರುಕಟ್ಟೆ ಚೇತರಿಕೆ!

ನಿತೀಶ್ ಕುಮಾರ್ ವಿವಾದ: ನೇಮಕಾತಿ ಪತ್ರ ಪಡೆಯಲು ಬಂದ Muslim ವೈದ್ಯೆಯ hijab ಗೆ ಕೈ ಹಾಕಿದ ಸಿಎಂ; ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ| video

SCROLL FOR NEXT