ಅರ್ಜುನ್ ಕಿಶೋರ್ ಚಂದ್ರ ನಿರ್ದೇಶನದ “ಸರ್ವಸ್ವ” ಹಾಡು ಇದೀಗ ಪಿ.ಆರ್.ಕೆ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಚೇತನ್ ರಾವ್ ರವರು ಗಾಯನ ಹಾಗೂ ಅಮೋಘವಾದ ಸಂಗೀತ ಸಂಯೋಜನೆ ಮಾಡಿದ್ದಾರೆ.
ವಿಡಿಯೋ ಸಾಂಗ್ ಕುರಿತು ಮಾತನಾಡಿರುವ ಅರ್ಜುನ್ ಅವರು, ನಾನು ಪುನೀತ್ ರಾಜಕುಮಾರ್ ಅವರ ಅಭಿಮಾನಿ. ಈ ಹಾಡನ್ನು ಪಿ.ಆರ್.ಕೆ ಆಡಿಯೋದವರು ಬಿಡುಗಡೆ ಮಾಡುತ್ತಿರುವುದು ಸಂತೋಷವಾಗಿದೆ. ನಾನೇ ಬರೆದಿರುವ ಈ ಹಾಡನ್ನು ಪಿ.ಆರ್.ಕೆ ಆಡಿಯೋ ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದು ಎಂದು ಹೇಳಿದರು.
ಕಲೆಯನ್ನು ರಚಿಸುವುದು ನನಗೆ ಸಂತೋಷವನ್ನು ನೀಡುತ್ತದೆ. ಇದು ಗುರುತು, ಉದ್ಯೋಗವನ್ನು ನೀಡುತ್ತದೆ. ಅಂತಿಮವಾಗಿ ನಮ್ಮ ಜೀವನವನ್ನು ಉತ್ತಮಗೊಳಿಸುತ್ತದೆ. ಈ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ನಾನು ಮತ್ತು ನನ್ನ ತಂಡ ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಮನಸ್ಸಿನಲ್ಲಿ ಮತ್ತು ಹೃದಯದಲ್ಲಿರುವ ಒಂದು ಕಲ್ಪನೆಯನ್ನು ಕಾರ್ಯಗತಗೊಳಿಸಿದಾಗ ಅದು ತೃಪ್ತಿಯನ್ನು ತರುತ್ತದೆ. ಕಲಾವಿದರಾಗಿ ನಾವು ರಚಿಸುವ ಪ್ರತಿಯೊಂದು ಕಲೆಯು ಕಲೆಯೊಂದಿಗೆ ಬೆಳೆಯುತ್ತಲೇ ಇರುತ್ತೇವೆ.
ಚಿತ್ರದ ಈ ಹಾಡಿನ ಚಿತ್ರೀಕರಣ ಯೂರೋಪ್ ನಲ್ಲಿ ನಡೆದಿದೆ. ಇದು ಬರೀ ಹಾಡಲ್ಲ. ಕಮರ್ಷಿಯಲ್ ಚೌಕಟ್ಟಿನೊಳಗೆ ಒಂದೊಳ್ಳೆ ಸಂದೇಶವನ್ನು ಈ ಹಾಡಿನ ಮೂಲಕ ಕೊಡುವ ಪ್ರಯತ್ನ ಮಾಡಿದ್ದೇವೆ. ಒಂದು ಹೆಣ್ಣನ್ನು ನೀವು ಪ್ರೀತಿಸಿದರೆ, ಆಕೆ ಹೇಗಿದ್ದರೂ ನೀವು ಒಪ್ಪಿಕೊಳ್ಳಬೇಕು. ಮನೆ, ತನ್ನವರಿಲ್ಲದ ಮಗುವನ್ನು ದತ್ತು ತೆಗೆದುಕೊಳ್ಳುವುದನ್ನು ನಾವು ಪ್ರೋತ್ಸಾಹಿಸುತ್ತೇವೆ. ಅವರಿಗೆ ಭರವಸೆ ನೀಡುತ್ತೇವೆ. ಸಂಗೀತದ ಮೂಲಕ ಅದನ್ನು ಹೈಲೈಟ್ ಮಾಡಿದ್ದೇವೆ. ಸರ್ವಸ್ವ ಮೂಲಕ ಕಮರ್ಷಿಯಲ್ ಚೌಕಟ್ಟಿನೊಳಗೆ ಸಂದೇಶ ರವಾನಿಸುವ ಗುರಿಯನ್ನು ಹೊಂದಿದ್ದೇವೆಂದು ತಿಳಿಸಿದ್ದಾರೆ.