'ತುಪ್ಪದ ಹುಡುಗಿ' ರಾಗಿಣಿ ದ್ವಿವೇದಿ ಹೊಸ ಅವತಾರಕ್ಕೆ ಅಭಿಮಾನಿಗಳು ದಂಗಾಗಿದ್ದಾರೆ. ಹೌದು. ಪ್ರತಿಯೊಂದು ಹಬ್ಬಕ್ಕೆ ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿಕೊಳ್ಳುವ ಗಮನ ಸೆಳೆಯುವ ತುಪ್ಪದ ಹುಡಗಿ ರಾಗಿಣಿ ದ್ವಿವೇದಿ ಇದೀಗ ಯುಗಾದಿ ಹಬ್ಬಕ್ಕಾಗಿ ಮಾಡಿಸಿರುವ ಹೊಸ ಫೋಟೋ ಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಮಲ್ಲಿಗೆ ಹೂವುಗಳಿಂದಲೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ರವಿಕೆ ತೊಟ್ಟು ಫೋಟೋಗೆ ಮಾದಕವಾಗಿ ರಾಗಿಣಿ ಫೋಸ್ ನೀಡಿದ್ದಾರೆ.
ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿರುವ ರಾಗಿಣಿ, ಸಂಪ್ರದಾಯವನ್ನು ಉತ್ತಮವಾದ ಫ್ಯಾಷನ್ ಸ್ಪರ್ಶದೊಂದಿಗೆ ಬೆರೆಸುವ ನೋಟ ಇದಾಗಿದೆ ಎಂದು ಹೇಳಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.