ನಿರ್ದೇಶಕ ರಾಜ್ ನಿಡಿಮೋರು ಜೊತೆ ನಟಿ ಸಮಂತಾ ರುತ್ ಪ್ರಭು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳ ನಡುವೆ ಶನಿವಾರ ಈ ಜೋಡಿ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಂಪ್ರದಾಯಿಕ ದಿರಿಸಿನಲ್ಲಿ ದೇವಾಲಯಕ್ಕೆ ಆಗಮಿಸಿದ ಇವರಿಬ್ಬರೂ ದೇವರ ಆಶೀರ್ವಾದ ಪಡೆದಿದ್ದಾರೆ. ಸಮಂತಾ ಆಗಾಗ್ಗೆ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಸಮಂತಾ ಗುಲಾಬಿ ಸಲ್ವಾರ್ ಸೂಟ್ ನಲ್ಲಿದ್ದರೆ, ರಾಜ್ ನಿಡಿಮೋರು ನೀಲಿ ಶರ್ಟ್ ಮತ್ತು ಬಿಳಿ ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋವೊಂದರಲ್ಲಿ ಇಬ್ಬರೂ ಒಟ್ಟಿಗೆ ದೇವಸ್ಥಾನವನ್ನು ಪ್ರವೇಶಿಸುತ್ತಾರೆ.
ಮತ್ತೊಂದು ವಿಡಿಯೋದಲ್ಲಿ ಇತರ ಹಲವರೊಂದಿಗೆ ಸಮಂತಾ ದೇವಸ್ಥಾನಕ್ಕೆ ಹೋಗುತ್ತಿರುವುದನ್ನು ತೋರಿಸಿದೆ. ಸಮಂತಾ ಅಥವಾ ರಾಜ್ ನಿಡಿಮೋರು ಅವರ ಡೇಟಿಂಗ್ ವದಂತಿಗಳ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ, ಆದರೆ ಅವರಿಬ್ಬರೂ ಬಹಳ ದಿನಗಳಿಂದ ಡೇಟ್ ನಲ್ಲಿದ್ದಾರೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.
ರಾಜ್ ನಿಡಿಮೋರು ನಿರ್ದೇಶನದ ಸಿಟಾಡೆಲ್: ಹನ್ನಿ ಬನ್ನಿ ಮತ್ತು ದಿ ಪ್ಯಾಮಿಲಿ ಮ್ಯಾನ್ 2 ಚಿತ್ರದಲ್ಲಿ ನಟಿಸಿರುವ ಸಮಂತಾ, ಮುಂದಿನ ನೆಟ್ ಫ್ಲಿಕ್ಸ್
'ರಕ್ತ ಬ್ರಹ್ಮಾಂಡ್: ದಿ ಬ್ಲಡಿ ಕಿಂಗ್‌ಡಮ್' ಚಿತ್ರದಲ್ಲೂ ನಿಡಿಮೋರ್ ಜೊತೆಗೆ ಕೆಲಸ ಮಾಡಿದ್ದಾರೆ. ಸಮಂತಾ ಕೊನೆಯದಾಗಿ ಸಿಟಾಡೆಲ್: ಹನಿ ಬನ್ನಿ ಚಿತ್ರದಲ್ಲಿ ವರುಣ್ ಧವನ್ ಜೊತೆ ನಟಿಸಿದ್ದರು.