ಸಿನಿಮಾ ಸುದ್ದಿ

Idre Nemdiyaag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ರಿಲೀಸ್ ಆದ ಕೇವಲ 24 ಗಂಟೆಗಳಲ್ಲಿ ಯೂಟ್ಯೂಬ್​​ನಲ್ಲಿ ಸ್ಯಾಂಡಲ್‌ವುಡ್‌ನ ಫಾಸ್ಟೆಸ್ಟ್​ 10 ಮಿಲಿಯನ್+ ವ್ಯೂವ್ಸ್' ರೆಕಾರ್ಡ್ ಕ್ರಿಯೇಟ್​ ಮಾಡಿದ ಹಾಡು, ಯೂಟ್ಯೂಬ್​ನಲ್ಲಿ #1 ಟ್ರೆಂಡಿಂಗ್​​ನಲ್ಲಿದೆ.

ಭಾನುವಾರ ಬಿಡುಗಡೆ ಆದ ದರ್ಶನ್ ಅವರ 'ದಿ ಡೆವಿಲ್'​​ ಚಿತ್ರದ ಮೊದಲ ಹಾಡು 'ಇದ್ರೇ ನೆಮ್ದಿಯಾಗ್ ಇರ್ಬೇಕ್​​​' ಎಂಬ ಸಾಂಗ್ ಈಗ ಅಭಿಮಾನಿಗಳ ನೆಚ್ಚಿನ ಗೀತೆಯಾಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆ ಜೊತೆಗೆ ಟ್ರೆಂಡ್​ ಆಗುವ ಮೂಲಕ ದಾಖಲೆ ಬರೆದಿದೆ.

ರಿಲೀಸ್ ಆದ ಕೇವಲ 24 ಗಂಟೆಗಳಲ್ಲಿ ಯೂಟ್ಯೂಬ್​​ನಲ್ಲಿ ಸ್ಯಾಂಡಲ್‌ವುಡ್‌ನ ಫಾಸ್ಟೆಸ್ಟ್​ 10 ಮಿಲಿಯನ್+ ವ್ಯೂವ್ಸ್' ರೆಕಾರ್ಡ್ ಕ್ರಿಯೇಟ್​ ಮಾಡಿದ ಹಾಡು, ಯೂಟ್ಯೂಬ್​ನಲ್ಲಿ #1 ಟ್ರೆಂಡಿಂಗ್​​ನಲ್ಲಿದೆ. ಈ ಮಾಹಿತಿಯನ್ನು ಚಿತ್ರತಂಡ ತನ್ನ ಅಧಿಕೃತ ಇನ್​ಸ್ಟಾಗ್ರಾಮ್​ ಪೇಜ್​ನಲ್ಲಿ ಹಂಚಿಕೊಂಡಿದೆ.

ಅಷ್ಟೊಂದು ಕ್ರೇಜ್ ಕ್ರಿಯೇಟ್ ಮಾಡಿರೋ ಈ ಹಾಡಿನ ಮೇಲೆ ಈಗ ಟ್ಯೂನ್ ಕದ್ದ ಆರೋಪ ಕೇಳಿ ಬಂದಿದ್ದು ದಿವಂಗತ ನಟ ಸಂಚಾರಿ ವಿಜಯ್ ಅಭಿನಯಿಸಿರುವ 'ನಾನು ಅವನಲ್ಲ ಅವಳು' ಸಿನಿಮಾದ ಟ್ಯೂನ್ ಕದ್ದ ಆರೋಪ ಕೇಳಿಬಂದಿದೆ. ಇದು ಕದ್ದ ಹಾಡು ಎಂದು ಹಲವರು ವಾದ ಮಾಡುತ್ತಿದ್ದಾರೆ. ಅದಕ್ಕೆ ಬೇಕಾದ ಸಾಕ್ಷ್ಯ ಕೂಡಾ ನೀಡುತ್ತಿದ್ದಾರೆ.

ಯಾವ ಚಿತ್ರದ ನಕಲು ಗೊತ್ತಾ?

ಅಂದಹಾಗೆ, ಇದ್ರೆ ನೆಮ್ದಿಯಾಗ್ ಇರ್ಬೇಕ್' ಹಾಡು 2015ರಲ್ಲಿ ಬಿಡುಗಡೆಯಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಸಂಚಾರಿ ವಿಜಯ್ ಅವರ 'ನಾನು ಅವನಲ್ಲ ಅವಳು' ಸಿನಿಮಾದ ಮೂರು ಹಾಡುಗಳ ಪೈಕಿ 'ವಾರೆ ವಾರೆ' ಹಾಡಿನ ನಕಲು ಆಗಿದೆ ಎಂದು ಹಲವರು ವಾದಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವೆರಡೂ ಸಾಂಗ್ ಗಳನ್ನು ಹೋಲಿ ಮಾಡುತ್ತಾ ಚರ್ಚಿಸುತ್ತಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್​ಗೆ ಸಂಬಂಧಿಸಿದಂತೆ ದರ್ಶನ್​ ಸೇರಿ 7 ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್​ ರದ್ದುಗೊಳಿಸಿದೆ. ಹಾಗಾಗಿ, ಆಗಸ್ಟ್​​ 14ರಂದು ದರ್ಶನ್ ತೂಗುದೀಪ ಸೇರಿದಂತೆ ಆರೋಪಿಗಳು​ ಅರೆಸ್ಟ್​ ಆಗಿ ಮತ್ತೆ ಜೈಲು ಸೇರಿದ್ದಾರೆ.

ಜೈ ಮಾತಾ ಕಂಬೈನ್ಸ್ ಲಾಂಛನದಲ್ಲಿ ಪ್ರಕಾಶ್ ವೀರ್​ ನಿರ್ದೇಶಿಸಿ, ನಿರ್ಮಿಸಿರುವ ಸಿನಿಮಾ ಇದೇ ವರ್ಷದ ಡಿಸೆಂಬರ್ 12 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ. ಈ ಕ್ಷಣಕ್ಕಾಗಿ ದಾಸನ ಹೆಚ್ಚಿನ ಸಂಖ್ಯೆ ಅಭಿಮಾನಿಗಳು ಎದುರು ನೋಡುತ್ತಿದ್ದು, ಸಿನಿಮಾ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ? ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT