ಚೈತ್ರಾ ಜೆ ಆಚಾರ್ - ಫೌಜಿ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

'ಫೌಜಿ'ಯಲ್ಲಿ ಪ್ರಭಾಸ್ ಜೊತೆ ಕೆಲಸ ಮಾಡುವುದು ವೃತ್ತಿಜೀವನದ ಪ್ರಮುಖ ಘಟ್ಟ; ಚೈತ್ರಾ ಜೆ ಆಚಾರ್

ಕನ್ನಡ ಚಿತ್ರರಂಗದಲ್ಲಿಯೂ ಚೈತ್ರಾ ಅವರು 'ಮಾರ್ನಮಿ' ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದು, ಇದು ಬಹು ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ತಲೆದಂಡ, ಟೋಬಿ, ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಬಿ ಮತ್ತು ಬ್ಲಿಂಕ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಚೈತ್ರ ಆಚಾರ್ ಇದೀಗ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇತರ ಭಾಷೆಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಸಿದ್ಧಾರ್ಥ್ ಜೊತೆಗೆ 3BHK ಮೂಲಕ ತಮಿಳು ಚಿತ್ರಕ್ಕೆ ಪದಾರ್ಪಣೆ ಮಾಡಿದ ನಂತರ, ನಟಿ ಇದೀಗ ತೆಲುಗು ಉದ್ಯಮಕ್ಕೂ ಬಹುದೊಡ್ಡ ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ.

ಪ್ರಭಾಸ್ ನಟಿಸಿ, ಹನು ರಾಘವಪುಡಿ ನಿರ್ದೇಶಿಸಿದ 'ಫೌಜಿ' ಎಂಬ ಪೀರಿಯಡ್ ವಾರ್ ಆ್ಯಕ್ಷನ್ ಎಂಟರ್‌ಟೈನರ್ ಮೂಲಕ ಚಿತ್ರಾ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಹೊಸಬರಾದ ಇಮಾನ್ವಿ ಮತ್ತು ಮಿಥುನ್ ಚಕ್ರವರ್ತಿ, ಜಯಪ್ರದಾ ಮತ್ತು ಅನುಪಮ್ ಖೇರ್ ಅವರಂತಹ ಅನುಭವಿಗಳು ಕೂಡ ಇದ್ದಾರೆ. ಚೈತ್ರಾ ಇತ್ತೀಚೆಗಷ್ಟೇ ಚಿತ್ರದ ಸೆಟ್‌ಗೆ ಸೇರಿಕೊಂಡಿದ್ದು, 'ಚಿತ್ರೀಕರಣವು ಬಹಳ ಆಸಕ್ತಿದಾಯಕವಾಗಿ ಪ್ರಾರಂಭವಾಗಿದೆ' ಎಂದು ಹೇಳುತ್ತಾರೆ.

ಫೌಜಿ ತಮ್ಮ ನಟನಾ ವೃತ್ತಿಜೀವನದ ಒಂದು ಪ್ರಮುಖ ಘಟ್ಟದಲ್ಲಿ ಬಂದಿತು ಮತ್ತು ಈ ಪ್ರಮಾಣದ ಯೋಜನೆಯು ಒಂದು ಹೊಸ ಅನುಭವವಾಗಿದೆ. 'ಫೌಜಿಯ ಭಾಗವಾಗಿರುವುದು ಮುಖ್ಯವಾಗಿದೆ. ನನಗೆ ದೊಡ್ಡ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ ಮತ್ತು ಪ್ರಭಾಸ್ ಅವರೊಂದಿಗೆ ಕೆಲಸ ಮಾಡುವುದು ಒಂದು ಉತ್ತಮ ಕಲಿಕೆಯ ಅನುಭವವಾಗಿದೆ. ಬೃಹತ್ ಪ್ರೊಡಕ್ಷನ್ಸ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಸೆಟ್‌ನ ಲಯ, ಕರಕುಶಲತೆ ಮತ್ತು ದೊಡ್ಡ ಮಟ್ಟದ ಚಿತ್ರವನ್ನು ನಿರ್ಮಿಸುವ ಕುರಿತು ನಾನು ಅರ್ಥಮಾಡಿಕೊಳ್ಳಲು ಬಯಸುತ್ತೇನೆ. ಕಥೆಗೆ ಇದು ಪ್ರಮುಖವಾದ ಪಾತ್ರವಾಗಿರುವುದರಿಂದ ಈ ಬಗ್ಗೆ ಉತ್ಸುಕಳಾಗಿದ್ದೇನೆ. ದೊಡ್ಡದೋ ಅಥವಾ ಚಿಕ್ಕದೋ ನನಗೆ ಮುಖ್ಯವಲ್ಲ. ಚಿತ್ರವು ನಿರ್ಮಿಸುವ ಪ್ರಪಂಚವು ಮುಖ್ಯವಾದುದು ಮತ್ತು ಆ ಅರ್ಥದಲ್ಲಿ, ಫೌಜಿ ಬೇರೆ ಲೆವೆಲ್‌ನಲ್ಲಿದೆ' ಎಂದು ಹೇಳುತ್ತಾರೆ ಚೈತ್ರಾ.

ಪ್ರಭಾಸ್ ಜೊತೆಗಿನ ತನ್ನ ಮೊದಲ ಭೇಟಿಯನ್ನು ನೆನಪಿಸಿಕೊಳ್ಳುತ್ತಾ ಚೈತ್ರಾ, 'ನಿರ್ದೇಶಕರು ಈಗಾಗಲೇ ನನ್ನ ಕೆಲವು ಶಾಟ್‌ಗಳನ್ನು ಅವರಿಗೆ ತೋರಿಸಿದ್ದರು. ಹಾಗಾಗಿ ನಾನು ನನ್ನನ್ನು ಪರಿಚಯಿಸಿಕೊಂಡಾಗ, ಅವರು ನನ್ನ ಕೆಲಸದ ಕೆಲವು ತುಣುಕುಗಳನ್ನು ಈಗಾಗಲೇ ನೋಡಿದ್ದೇನೆ ಮತ್ತು ಅವುಗಳು ಆಸಕ್ತಿದಾಯಕವಾಗಿವೆ ಎಂದು ಹೇಳಿದರು. ಅವರು ತುಂಬಾ ನಾಚಿಕೆ ಸ್ವಭಾವದವರು. ನಾನು ಅವರ ಮಿರ್ಚಿ ಚಿತ್ರದ ದೊಡ್ಡ ಅಭಿಮಾನಿ ಮತ್ತು ನಾನು ಅದನ್ನು ಕನಿಷ್ಠ 25 ಬಾರಿ ನೋಡಿದ್ದೇನೆ ಎಂದು ಅವರಿಗೆ ಹೇಳಿದೆ. ಅದು ನಮ್ಮ ಆರಂಭಿಕ ಸಂಭಾಷಣೆಯಾಗಿತ್ತು ಮತ್ತು ಚಿತ್ರೀಕರಣ ಮುಂದುವರೆದಂತೆ ನಾನು ಅವರೊಂದಿಗೆ ಹೆಚ್ಚು ಮಾತನಾಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದರು.

ಕನ್ನಡ ಚಿತ್ರರಂಗದಲ್ಲಿಯೂ ಚೈತ್ರಾ ಅವರು 'ಮಾರ್ನಮಿ' ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದು, ಇದು ಬಹು ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಚೈತ್ರಾ ಮತ್ತೊಂದು ತೆಲುಗು ಚಿತ್ರಕ್ಕೂ ಸಹಿ ಹಾಕಿದ್ದು, ಚಿತ್ರತಂಡದ ಅಧಿಕೃತ ಘೋಷಣೆ ಬಾಕಿ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿಯೇ 'ಅತಿದೊಡ್ಡ ಡ್ರಾಮಾಬಾಜಿ': 'ನಾಟಕ ಬೇಡ' ಎಂದ ಪ್ರಧಾನಿಗೆ ಕಾಂಗ್ರೆಸ್ ತಿರುಗೇಟು

ನಿಜವಾದ ನಾಯಿಗಳು ಸಂಸತ್ತಿನಲ್ಲಿ ಕುಳಿತಿವೆ : ರೇಣುಕಾ ಚೌಧರಿ ವಿವಾದಾತ್ಮಕ ಹೇಳಿಕೆ

ತಂಬಾಕು ಮೇಲಿನ ಅಬಕಾರಿ ಸುಂಕ, ಪಾನ್ ಮಸಾಲ ಮೇಲೆ ದುಪ್ಪಟ್ಟು ಸೆಸ್: ಲೋಕಸಭೆಯಲ್ಲಿ 2 ಮಸೂದೆ ಮಂಡಿಸಿದ ಸೀತಾರಾಮನ್

ಇಶಾ ಯೋಗ ಕೇಂದ್ರದಲ್ಲಿ ರಾಜ್ ನಿಡಿಮೋರು ಜೊತೆ ಎರಡನೇ ಮದುವೆಯಾದ ನಟಿ ಸಮಂತಾ ರುತ್ ಪ್ರಭು!

'ಧಕ್ ಧಕ್ ಬೆಡಗಿ' ರಾಜಕೀಯ ಸೇರ್ತಾರಾ? ಯಾವ ಪಕ್ಷದಿಂದ! ಕೊನೆಗೂ ಮೌನ ಮುರಿದ ಮಾಧುರಿ ದೀಕ್ಷಿತ್!

SCROLL FOR NEXT