ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

BIFFES 2026: ಜನವರಿ 29 ರಿಂದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಸ್ಪರ್ಧಾ ವಿಭಾಗಕ್ಕೆ ಸಿನಿಮಾಗಳ ಆಹ್ವಾನ, ಅರ್ಜಿ ಸಲ್ಲಿಸುವುದು ಹೇಗೆ?

2025ರ ಜನವರಿ 29ರಿಂದ ಫೆಬ್ರುವರಿ 6ರವರೆಗೆ ಒಟ್ಟು 9 ದಿನಗಳ ಕಾಲ ಚಲನಚಿತ್ರೋತ್ಸವವು ನಡೆಯಲಿದೆ.

ಬೆಂಗಳೂರು: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (BIFFes) ಜನವರಿ 29 ರಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗೆ ಚಲನಚಿತ್ರಗಳನ್ನು ಆಹ್ವಾನಿಸಿದೆ.

2025ರ ಜನವರಿ 29ರಿಂದ ಫೆಬ್ರುವರಿ 6ರವರೆಗೆ ಒಟ್ಟು 9 ದಿನಗಳ ಕಾಲ ಚಲನಚಿತ್ರೋತ್ಸವವು ನಡೆಯಲಿದೆ. ಚಲನಚಿತ್ರೋತ್ಸವದಲ್ಲಿ 2025ರ ಜನವರಿ 1ರಿಂದ 2025ರ ಡಿಸೆಂಬರ್ 31ರ ಒಳಗೆ ತಯಾರಾಗಿರುವ ಚಲನಚಿತ್ರಗಳನ್ನು ಸ್ಪರ್ಧೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿ (ಸಿಬಿಎಫ್‌ಸಿ) ಪ್ರಮಾಣ ಪತ್ರದಲ್ಲಿ ನಮೂದಿಸುವ ದಿನಾಂಕವನ್ನೇ ನಿರ್ಮಾಣದ ದಿನಾಂಕ ಎಂದು ಪರಿಗಣಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಒಟ್ಟು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಡಿಸೆಂಬರ್ 6ರಿಂದ 31ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಚಲನಚಿತ್ರೋತ್ಸವ ಜಾಲತಾಣ www.biffes.org, ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಪ್ರತಿ ಅರ್ಜಿಗೂ 3,000 ರೂ.ಶುಲ್ಕ ಅನ್ವಯವಾಗುತ್ತದೆ. ಸ್ಪರ್ಧೆಗೆ ಸಲ್ಲಿಸುವ ಚಲನಚಿತ್ರಗಳು ಇಂಗ್ಲಿಷ್‌ ಉಪಶೀರ್ಷಿಕೆ ಒಳಗೊಂಡಿರಬೇಕು ಎಂದು ಮಾಹಿತಿ ನೀಡಿದೆ.

ಹೆಚ್ಚಿನ ಮಾಹಿತಿಗೆ 8904645529 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಅಥವಾ biffesblr@gmail.comಗೆ ಇ–ಮೇಲ್‌ ಮಾಡಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IndiGo flights: ಮತ್ತೆ 500 ವಿಮಾನಗಳ ಹಾರಾಟ ರದ್ದುಪಡಿಸಿದ ಇಂಡಿಗೋ ಏರ್‌ಲೈನ್ಸ್‌, ವಿಮಾನಯಾನ ಸಂಸ್ಥೆಗೆ ಪ್ರಯಾಣಿಕರ ಹಿಡಿಶಾಪ

H-1B visa ನಿಯಮದಲ್ಲಿ ಅಮೆರಿಕಾ ಮಹತ್ವದ ಬದಲಾವಣೆ: ಇನ್ನು ಮುಂದೆ ಅರ್ಜಿದಾರರ "social media" ಖಾತೆ ಪಬ್ಲಿಕ್ ಇದ್ದರಷ್ಟೇ ವೀಸಾ..!

ವಿಶ್ವದ ಶ್ರೀಮಂತ ವ್ಯಕ್ತಿಯ ಬ್ರಿಟೀಷ್ ಕಾಲದ ಅರಮನೆ: Putin ಗೆ ಆತಿಥ್ಯ ವಹಿಸಿರುವ Hyderabad House ವಿಶೇಷತೆಗಳೇನು? ನಿರ್ಮಾಣ ಆಗಿದ್ದು ಹೇಗೆ?

ಉಪಲೋಕಾಯುಕ್ತರ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ತಮ್ಮ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ: BJP ಕುರಿತು ಸಿಎಂ ವ್ಯಂಗ್ಯ

ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆ: ರಾಜ್ಯ ಸರ್ಕಾರ ಘೋಷಣೆ

SCROLL FOR NEXT