ತಿಥಿ ಚಿತ್ರದ ಅಭಿ 
ಸಿನಿಮಾ ಸುದ್ದಿ

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ: 'ತಿಥಿ' ಹೀರೋಗೆ ಇಂದೆಂಥಾ ಸ್ಥಿತಿ?, ಅಭಿ ಈಗ ದಿನಗೂಲಿ ಕಾರ್ಮಿಕ!

ನಟಿಸಿದ್ದ ಮೊದಲ ಚಿತ್ರವೇ ರಾಷ್ಟ್ರ ಪ್ರಶಸ್ತಿ ಪಡೆದು ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ತಿಥಿ ಚಿತ್ರದ ನಾಯಕ ಅಭಿಷೇಕ್ ಮತ್ತೆ ಸುದ್ದಿಯಲ್ಲಿದ್ದಾರೆ.

ಬೆಂಗಳೂರು: ಕನ್ನಡ ರಾಷ್ಟ್ರ ಪ್ರಶಸ್ತಿ ವಿಜೇತ ತಿಥಿ ಚಿತ್ರದ ಹೀರೋ 'ಅಭಿ' ಈಗ ಏನು ಮಾಡುತ್ತಿದ್ದಾರೆ...? ಅವರ ಕುರಿತ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಒಂದು ಚಿತ್ರದ ಯಶಸ್ಸು ಅದರ ಪಾತ್ರದಾರಿಗಳ ಜೀವನವನ್ನೇ ಬದಲಿಸುತ್ತದೆ. ತಾನು ನಟಿಸಿದ್ದ ಮೊದಲ ಚಿತ್ರವೇ ರಾಷ್ಟ್ರ ಪ್ರಶಸ್ತಿ ಪಡೆದು ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ತಿಥಿ ಚಿತ್ರದ ನಾಯಕ ಅಭಿಷೇಕ್ ಮತ್ತೆ ಸುದ್ದಿಯಲ್ಲಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಿತ್ರದಲ್ಲಿ ಹೀರೊ ಆಗಿ ನಟಿಸಿ ಬಳಿಕ ಬ್ಯಾಕ್ ಟು ಬ್ಯಾಕ್ 2 ಚಿತ್ರಗಳಲ್ಲಿ ನಟಿಸಿದ್ದ ನಾಯಕ ನಟ ಬಳಿಕ ಚಿತ್ರರಂಗದಿಂದ ನಾಪತ್ತೆಯಾಗಿದ್ದರು.

ಕೆಲ ವರ್ಷಗಳ ಬಳಿಕ ಮತ್ತೆ ಕ್ಯಾಮೆರಾ ಕಣ್ಣಿಗೆ ಬಿದ್ದಿರುವ ನಟ ಅಭಿಷೇಕ್ ಸಿನಿಮೇತರ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದ ಈ ನಟ ಅಭಿಷೇಕ್ ಈಗ ಕೂಲಿ ಕೆಲಸ ಮಾಡುತ್ತಿದ್ದಾರೆ. 3 ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ್ದ ಅಭಿ ಈಗ ಮರ ಹೊರುವ ಕೆಲಸ ಮಾಡುತ್ತಿದ್ದಾರೆ.

ವಿಡಿಯೋ ವೈರಲ್

ಈ ಬಗ್ಗೆ ಯಾರೋ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ವಿಡಿಯೋದಲ್ಲಿ ತಾನು ದಿನಗೂಲಿ ಕೆಲಸ ಮಾಡುತ್ತಿರುವುದಾಗಿ ಅಭಿ ಒಪ್ಪಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. 'ತಿಥಿ' ಚಿತ್ರದಲ್ಲಿ ಗಡ್ಡಪ್ಪ ಪಾತ್ರದಲ್ಲಿ ನಟಿಸಿದ್ದ ಚೆನ್ನೇಗೌಡ ಇತ್ತೀಚೆಗೆ ನಿಧನರಾಗಿದ್ದರು.

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ

9 ವರ್ಷಗಳ ಹಿಂದೆ ತೆರೆಗೆ ಬಂದಿದ್ದ 'ತಿಥಿ' ಸಿನಿಮಾ ದಾಖಲೆ ಬರೆದಿತ್ತು. ಸಣ್ಣ ಹಳ್ಳಿಯಲ್ಲಿ ನಡೆಯುವ ಸಿಂಪಲ್ ಕಥೆಯ ಸಿನಿಮಾ ಪ್ರೇಕ್ಷಕರ ಸೆಳೆದಿತ್ತು. ಕರ್ನಾಟಕದ ಮಂಡ್ಯ ಜಿಲ್ಲೆಯ ಹಳ್ಳಿಗಳ ವೃತ್ತಿಪರರಲ್ಲದ ಕಲಾವಿದರು ಈ ಚಿತ್ರದಲ್ಲಿ ನಟಿಸಿ ಗೆದ್ದಿದ್ದರು. ಸೆಂಚುರಿ ಗೌಡ ಹಾಗೂ ಮಗ ಮೊಮ್ಮಕ್ಕಳ ಕಥೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿತ್ತು.

ಚಿತ್ರದಲ್ಲಿ ಅಭಿ ಹಾಗೂ ಕಾವೇರಿಯ ಸಣ್ಣ ಲವ್ ಟ್ರ್ಯಾಕ್ ಕೂಡ ಇತ್ತು. ಅಭಿ ಆಗಿ ಮಂಡ್ಯದ ಸುಣ್ಣದಕೊಪ್ಪಲು ಗ್ರಾಮದ ಅಭಿಷೇಕ್ ಹೆಚ್‌. ಎನ್ ನಟಿಸಿದ್ದರು. ಕಾವೇರಿಯಾಗಿ ಪೂಜಾ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದ ಪೂಜಾ ಸದ್ಯ ಮದುವೆಯಾಗಿ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಷ್ಟ್ರೀಯ ರಕ್ಷಣಾ ಕಾರ್ಯತಂತ್ರ ಬದಲಿಸಿದ ಅಮೆರಿಕ: ಇಂಡೋ-ಪೆಸಿಫಿಕ್‌ಗೆ ಮೊದಲ ಆದ್ಯತೆ, ಯುರೋಪ್‌ನ ದೂರವಿಟ್ಟ ಟ್ರಂಪ್!

ಮೆಜೆಸ್ಟಿಕ್​​​​ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಬ್​ಅರ್ಬನ್ ರೈಲು ಯೋಜನೆಗೆ ಗ್ರೀನ್ ಸಿಗ್ನಲ್!

ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರ ವಿರುದ್ಧ ತಾರತಮ್ಯ: ವಿಶ್ವಸಂಸ್ಥೆ ಕಳವಳ

ನಾನು ಕಾಂಗ್ರೆಸ್ ನಿಯಮವನ್ನು ಉಲ್ಲಂಘಿಸಿಲ್ಲ: ಆಪರೇಷನ್ ಸಿಂಧೂರ್ ಬಗ್ಗೆ ಶಶಿ ತರೂರ್ ಮಹತ್ವದ ಹೇಳಿಕೆ, ಕೋಲಾಹಲ!

U19 ವಿಶ್ವಕಪ್: ಟಿ20 ಬೆನ್ನಲ್ಲೇ ನ್ಯೂಜಿಲ್ಯಾಂಡ್ಗೆ ಮತ್ತೆ ಸೋಲಿನ ರುಚಿ; ಭಾರತ ಯುವಪಡೆಯ ಹ್ಯಾಟ್ರಿಕ್ ಗೆಲುವು!

SCROLL FOR NEXT