ಡೆವಿಲ್ ಚಿತ್ರದಲ್ಲಿ ದರ್ಶನ್  
ಸಿನಿಮಾ ಸುದ್ದಿ

ಡಲ್ ಆದ 'ಡೆವಿಲ್': ವಾರಾಂತ್ಯ ಕೈ ಹಿಡಿಯುತ್ತಾರಾ ಅಭಿಮಾನಿಗಳು?

‘ಡೆವಿಲ್’ ಸಿನಿಮಾ ರಿಲೀಸ್ ಆಗಿ 8 ದಿನಗಳಾಗಿವೆ. sacnilk ವರದಿ ಪ್ರಕಾರ ಈ ಚಿತ್ರ 25 ಕೋಟಿ ರೂಪಾಯಿ ಸಂಗ್ರಹ ಮಾಡಿದೆ.

‘ಡೆವಿಲ್’ ಸಿನಿಮಾ ಕಲೆಕ್ಷನ್ ಕಳೆದೆರಡು ದಿನಗಳಿಂದ ಕುಸಿಯುತ್ತಿದೆ. ಚಿತ್ರ ಬಿಡುಗಡೆಯಾದ ಆರಂಭದ ಎರಡು ದಿನಗಳಲ್ಲಿ ಇದ್ದ ಕ್ರೇಜ್ ದಿನಕಳೆಯುತ್ತಾ ಕಡಿಮೆಯಾಗುತ್ತಿದೆ. ನಿನ್ನೆ ಗುರುವಾರ ಗಳಿಕೆ ತೀವ್ರ ಕುಸಿದಿದ್ದು, ಈ ವಾರಾಂತ್ಯದಲ್ಲಿ ಸಿನಿಪ್ರೇಮಿಗಳನ್ನು ಡೆವಿಲ್ ಥಿಯೇಟರ್ ನತ್ತ ಸೆಳೆಯುತ್ತದೆಯೇ ಎಂದು ನೋಡಬೇಕಿದೆ.

‘ಡೆವಿಲ್’ ಸಿನಿಮಾ ರಿಲೀಸ್ ಆಗಿ 8 ದಿನಗಳಾಗಿವೆ. sacnilk ವರದಿ ಪ್ರಕಾರ ಈ ಚಿತ್ರ ಕಲೆಕ್ಷನ್ ಮಾಡಿರುವುದು 25 ಕೋಟಿ ರೂಪಾಯಿ. ನಿನ್ನೆ ಕೇವಲ 53 ಲಕ್ಷ ರೂಪಾಯಿ ಗಳಿಕೆಯಾಗಿದೆಯಂತೆ. ನಾಳೆ, ನಾಡಿದ್ದು ನೋಡಬೇಕಿದೆ.

ದರ್ಶನ್ ಅವರು ಜೈಲಿನಲ್ಲಿ ಇರುವ ಮಧ್ಯೆ ‘ಡೆವಿಲ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದ ಪ್ರಚಾರದ ಜವಾಬ್ದಾರಿಯನ್ನು ಅಭಿಮಾನಿಗಳು ಹೊತ್ತುಕೊಂಡಿದ್ದರು. ಆದರೆ, ಸಿನಿಮಾಗೆ ಅಂದುಕೊಂಡ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ. ವಿಮರ್ಶಕರಿಂದ ಹಾಗೂ ಸಿನಿಮಾ ಪ್ರಿಯರಿಂದ ‘ಡೆವಿಲ್​’ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ತಮ್ಮ ಡಿ ಬಾಸ್ ಚಿತ್ರವನ್ನು ತಾವೇ ಗೆಲ್ಲಿಸಿಕೊಡುತ್ತೇವೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದರು. ಈಗ ಅವರು ಕೈಹಿಡಿಯುತ್ತಾರಾ ಎಂದು ನೋಡಬೇಕಿದೆ.

ಮುಂದಿನ ವಾರ ಡೆವಿಲ್ ಚಿತ್ರಕ್ಕೆ ‘ಮಾರ್ಕ್’ ಹಾಗೂ ‘45’ ಸಿನಿಮಾಗಳು ಪೈಪೋಟಿ ನೀಡಲಿವೆ. ಇವೆರಡೂ ಕ್ರಿಸ್ ಮಸ್ ಗೆ ಬಿಡುಗಡೆಯಾಗುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

ಫೈನಲ್ ಫೈಟ್: ಸಿದ್ದರಾಮಯ್ಯ ಮನವೊಲಿಕೆಗೆ ರಾಹುಲ್ ಗಾಂಧಿ ಯತ್ನ; ಯತೀಂದ್ರಗೆ DCM ಸ್ಥಾನ, ರಾಜ್ಯಸಭೆ ಆಫರ್?

ಪಟ್ಟಕ್ಕಾಗಿ ಫೈನಲ್ ಫೈಟ್: ಮೂರು ಷರತ್ತುಗಳನ್ನು ಹೈಕಮಾಂಡ್ ಮುಂದಿಟ್ಟ ಡಿಕೆಶಿ; CM ಹುದ್ದೆಗಾಗಿ ಬಿಗಿಪಟ್ಟು!

Indian Stock Market: ಕಚ್ಚಾ ತೈಲ ದರ ಏರಿಕೆ; ರೂಪಾಯಿ ಮೌಲ್ಯ, Sensex ಇಳಿಕೆ

ರಾಜ್ಯ ಸರ್ಕಾರದ 'ದ್ವೇಷ ಭಾಷಣ' ಮಸೂದೆಗೆ ಅಮಿತ್ ಶಾ ಅಡ್ಡಗಾಲು; ಅಸ್ತಿತ್ವದಲ್ಲಿರುವ ಕಾನೂನೇ ಸಾಕು: ಕೇಂದ್ರ

SCROLL FOR NEXT