ದಾವಣಗೆರೆ: ನಟ ದರ್ಶನ್ ಅಭಿನಯದ ದಿ ಡೆವಿಲ್ ಸಿನಿಮಾ ಬಿಡುಗಡೆ ನಂತರ ಅವರ ಅಭಿಮಾನಿಗಳನ್ನು ಭೇಟಿಯಾಗಲೆಂದು ಇಂದು ದಾವಣಗೆರೆಗೆ ಭೇಟಿ ಕೊಟ್ಟಿದ್ದರು ಅವರ ಪತ್ನಿ ವಿಜಯಲಕ್ಷ್ಮಿ. ಈ ವೇಳೆ ದರ್ಶನ್ ಅಭಿಮಾನಿಗಳನ್ನು ಉದ್ದೇಶಿಸಿ ವಿಜಯಲಕ್ಷ್ಮಿ ಆಡಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಮತ್ತು ದರ್ಶನ್ ಫ್ಯಾನ್ಸ್ ನಡುವಿನ ವಾರ್ ನ ಕಿಚ್ಚಿಗೆ ಬೆಂಕಿ ಹಚ್ಚಿದಂತಾಗಿದೆ.
ಈ ವೇಳೆ ಮಾತನಾಡಿದ ವಿಜಯಲಕ್ಷ್ಮಿ,ದರ್ಶನ್ ಅವ್ರು ಇಲ್ದೇ ಇರುವಾಗ ಕೆಲವೊಬ್ಬರು ಏನೇನೋ ಮಾತಾಡ್ತಾ ಇದ್ದಾರೆ. ವೇದಿಕೆ ಮೇಲೆ, ಚಾನೆಲ್‌ಗಳಲ್ಲಿ ಕುತ್ಕೊಂಡು ಮಾತಾಡ್ತಾರೆ. ದರ್ಶನ್ ಬಗ್ಗೆ, ಅವರ ಫ್ಯಾನ್ಸ್ ಬಗ್ಗೆ ಏನೇನೋ ಮಾತಾಡ್ತಾ ಇರ್ತಾರೆ. ದರ್ಶನ್ ಅವ್ರು ಬಂದಾಗ ಬೆಂಗಳೂರಿನಲ್ಲಿ ಇರ್ತಾರೋ ಇಲ್ವೋ ಅನ್ನೋದೆ ಗೊತ್ತಾಗೋದಿಲ್ಲ.
ಅಂತ ಜನಗಳು ದರ್ಶನ್ ಅವ್ರು ಇರುವಾಗ ಎಲ್ಲಿ ಮಾಯ ಅಗಿರ್ತಾರೋ ಗೊತ್ತಾಗೋದಿಲ್ಲ. ದರ್ಶನ್ ಹೇಳಿದಂತೆ ಯಾರು ಕೂಡ ಕೋಪ ಮಾಡ್ಕೋಬೇಡಿ, ಬೇಜಾರ್ ಮಾಡ್ಕೋಬೇಡಿ ಎಂದು ವಿಜಯಲಕ್ಷ್ಮಿ ಹೇಳಿದರು. ವಿಜಯಲಕ್ಷ್ಮಿ ಹಾಗೂ ಡೆವಿಲ್ ಚಿತ್ರ ನಟಿ ರಚನಾ ರೈ ದಾವಣಗೆರೆ ಗೀತಾಂಜಲಿ ಚಿತ್ರ ಮಂದಿರಕ್ಕೆ ಭೇಟಿ ನೀಡಿ, ಕನ್ನಡ ಚಿತ್ರರಂಗದ ಎಲ್ಲಾ ಚಿತ್ರಗಳಿಗೂ ಸಪೋರ್ಟ್ ಮಾಡಿ, ಹೆಚ್ಚಿನದಾಗಿ ನಮ್ಮ ಚಿತ್ರ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು.
ನಿನ್ನೆ ಹುಬ್ಬಳ್ಳಿಯಲ್ಲಿ ನಟ ಕಿಚ್ಚ ಸುದೀಪ್ ಹೇಳಿದ್ದೇನು?
ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ವಾ, ಆದರೆ ನನ್ನ ಗೆಳೆಯರು ಚೆನ್ನಾಗಿರಬೇಕು ಅಂತ ಬಾಯಿ ಮುಚ್ಚಿಕೊಂಡು ಇದ್ವಿ. ಬಾಯಿ ಇಲ್ಲಾ ಅಂತ ಅಲ್ಲಾ. ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಮಾಡುವುದಕ್ಕೆ ಕಾರಣ ಇದೆ. ಇನ್ನು ಇಲ್ಲಿ ಮಾತನಾಡಿದರೆ ಆಯಿತು. ಯಾರಿಗೆ ಮುಟ್ಟಬೇಕೋ ಅವರಿಗೆ ಮುಟ್ಟುತ್ತದೆ. ಯಾರಿಗೆ ತಟ್ಟಬೇಕೋ ಅವರಿಗೆ ತಟ್ಟುತ್ತದೆ. ಅದಕ್ಕೇನೆ ಮಾರ್ಕ್ ಸಿನಿಮಾದ ಕಾರ್ಯಕ್ರಮವನ್ನ ಇಲ್ಲಿ ಮಾಡಿದ್ದೇವೆ, ಹೊರಗಡೆ ಒಂದು ಪಡೆ ಸಿದ್ಧವಾಗಿದೆ, ನಾವು ರೆಡಿ ಇದ್ದೇವೆ ಎಂದು ಹೇಳಿದ್ದರು.