ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಭುಗಿಲೆದ್ದಿರುವ ಫ್ಯಾನ್ಸ್ ವಾರ್ ಚಾಲ್ತಿಯಲ್ಲಿರುವಂತೆಯೇ ನಟ ದರ್ಶನ್ ಕುರಿತು ನಟ ಕಿಚ್ಚಾ ಸುದೀಪ್ ಅವರ ಮಾತೊಂದು ವ್ಯಾಪಕ ವೈರಲ್ ಆಗುತ್ತಿದೆ.
ಕನ್ನಡ ಚಿತ್ರರಂಗದ ಸ್ಟಾರ್ ಹೀರೋಗಳಾದ ದರ್ಶನ್ ಹಾಗೂ ಸುದೀಪ್ ಅವರ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ಜೋರಾಗಿದ್ದು, ಈ ಬಗ್ಗೆ ಸ್ವತಃ ನಟ ಸುದೀಪ್ ಸ್ಪಷ್ಟನೆ ಕೊಟ್ಟಿದ್ದರೂ ಅಭಿಮಾನಿಗಳ ನಡುವಿನ ಸಂಘರ್ಷ ಮಾತ್ರ ಕಡಿಮೆಯಾಗಿಲ್ಲ.
ಈ ಫ್ಯಾನ್ಸ್ ವಾರ್ ಬಗ್ಗೆ ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ನಟ-ನಟಿಯರು, ನಿರ್ದೇಶಕರು ಮಾತನಾಡಿದ್ದು ಫ್ಯಾನ್ಸ್ ವಾರ್ ಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಈ ನಡುವೆ ಸ್ವತಃ ಸುದೀಪ್ ಕೂಡ ಖಾಸಗಿ ಸಂದರ್ಶನದಲ್ಲಿ ಮಾತನಾಡಿ ನಟ ದರ್ಶನ್ ಕುರಿತು ಸಕಾರಾತ್ಮಕವಾಗಿ ಮಾತನಾಡಿದ್ದರು. ರಾಕ್ಲೈನ್ ವೆಂಕಟೇಶ್ ಜೊತೆ ಕಾಟೇರಾ ಚಿತ್ರ ವೀಕ್ಷಿಸಿದ್ದಾಗಿ ಹೇಳಿದ್ದರು.
ಈ ಹೇಳಿಕೆ ಬೆನ್ನಲ್ಲೇ ಮತ್ತೆ ಸುದೀಪ್ ಮತ್ತೆ ನಟ ದರ್ಶನ್ ಕುರಿತು ಮಾತನಾಡಿದ್ದು, ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ದರ್ಶನ್ ಗೆ ಶುಭ ಹಾರೈಸಿದ್ದಾರೆ.
#AskKiccha ಹ್ಯಾಶ್ ಟ್ಯಾಗ್ ನಡಿಯಲ್ಲಿ ಅಭಿಮಾನಿಯೊಬ್ಬ ಕೇಳಿದ್ದ ಪ್ರಶ್ನೆಗೆ ಕಿಚ್ಚಾ ಸುದೀಪ್ ಉತ್ತರಿಸಿದ್ದಾರೆ. ಈ ವ್ಯಕ್ತಿ ಬಗ್ಗೆ ಒಂದು ಪದದಲ್ಲಿ ಉತ್ತರಿಸಿ ಎಂಬ ಅಭಿಮಾನಿ ಪ್ರಶ್ನೆಗೆ ನಟ ಸುದೀಪ್, 'ಯಾವಾಗಲೂ ಅವರಿಗೆ ಶುಭ ಹಾರೈಸುತ್ತೇನೆ' ಎಂದು ಹೇಳಿದ್ದಾರೆ. ಅವರ ಈ ಪೋಸ್ಟ್ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.