ಸಿನಿಮಾ ಸುದ್ದಿ

ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ 'ಕೆಡಿ: ದಿ ಡೆವಿಲ್' ಚಿತ್ರ ಬಿಡುಗಡೆಗೆ ಹೊಸ ದಿನಾಂಕ ಘೋಷಣೆ

ಜೋಗಿ ಪ್ರೇಮ್ ಅವರೇ ಹಾಡಿರುವ ಹಾಡು ಈಗಾಗಲೇ ವೈರಲ್ ಆಗಿದ್ದು, ಸಹೋದರರ ನಡುವಿನ ಬಾಂಧವ್ಯವನ್ನು ಎತ್ತಿತೋರಿಸುತ್ತದೆ.

ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಹಬ್ಬದ ಸಂಭ್ರಮದ ನಡುವೆ, ನಿರ್ದೇಶಕ ಪ್ರೇಮ್ ಮತ್ತು ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ 'ಕೆಡಿ: ದಿ ಡೆವಿಲ್' ಚಿತ್ರದ ಬಿಡುಗಡೆಗೆ ಸಜ್ಜಾಗಿದ್ದು, 'ಅಣ್‌ತಮ್ಮ ಜೋಡೆತ್ತು ಕಣೋ' ಎಂಬ ಹೊಸ ಹಾಡಿನ ಬಿಡುಗಡೆಯೊಂದಿಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ತಿಂಗಳುಗಳ ಅನಿಶ್ಚಿತತೆ ನಡುವೆ ಇದೀಗ ಚಿತ್ರವು ಮುಂದಿನ ವರ್ಷ ಏಪ್ರಿಲ್ 30ರಂದು ಬಿಡುಗಡೆಯಾಗಲಿದೆ.

ಜೋಗಿ ಪ್ರೇಮ್ ಅವರೇ ಹಾಡಿರುವ ಹಾಡು ಈಗಾಗಲೇ ವೈರಲ್ ಆಗಿದ್ದು, ಸಹೋದರರ ನಡುವಿನ ಬಾಂಧವ್ಯವನ್ನು ಎತ್ತಿತೋರಿಸುತ್ತದೆ. ಬಿಎಸ್ ಮಂಜುನಾಥ್ ಅವರ ಸಾಹಿತ್ಯ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಇದ್ದು, ಇದನ್ನು ಬಹು ಭಾಷೆಗಳಲ್ಲಿ ರೆಕಾರ್ಡ್ ಮಾಡಲಾಗಿದೆ. ಹಿಂದಿಯಲ್ಲಿ ಜಾವೇದ್ ಅಲಿ, ತೆಲುಗು ಮತ್ತು ತಮಿಳಿನಲ್ಲಿ ಸಿದ್ ಶ್ರೀರಾಮ್, ಮಲಯಾಳಂನಲ್ಲಿ ವಿಜಯ್ ಮತ್ತು ಕನ್ನಡದಲ್ಲಿ ಜೋಗಿ ಪ್ರೇಮ್ ಹಾಡಿದ್ದಾರೆ. ಕೆಡಿ: ದಿ ಡೆವಿಲ್ ಚಿತ್ರದ ವಿತರಣೆ ಜವಾಬ್ದಾರಿಯನ್ನು ಕೆವಿಎನ್ ಪ್ರೊಡಕ್ಷನ್ಸ್ ಹೊತ್ತುಕೊಂಡಿದೆ.

ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ಬಾಲಿವುಡ್ ನಟ ಸಂಜಯ್ ದತ್ ಮತ್ತು ನಟಿ ಶಿಲ್ಪಾ ಶೆಟ್ಟಿ, ಕನ್ನಡದ ದಿಗ್ಗಜರಾದ ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ಅನೇಕರು ತಾರಾಗಣದಲ್ಲಿದ್ದಾರೆ. ನೋರಾ ಫತೇಹಿ ಒಂದು ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಅವರ ಸ್ಟಾರ್ ಪವರ್, ಜೋಗಿ ಪ್ರೇಮ್ ಅವರ ನಿರ್ದೇಶನ, ಬಹುಭಾಷಾ ಸಂಗೀತ ಮತ್ತು ಕೆವಿಎನ್ ಪ್ರೊಡಕ್ಷನ್ಸ್‌ನ ಪ್ಯಾನ್-ಇಂಡಿಯಾ ದೃಷ್ಟಿಕೋನದ ಸಂಯೋಜನೆಯು ಕೆಡಿ: ದಿ ಡೆವಿಲ್ ಚಿತ್ರವನ್ನು 2026ರ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದನ್ನಾಗಿ ಮಾಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಒಂದು ಸಿದ್ಧಾಂತ, ಸಿದ್ಧಾಂತಗಳು ಎಂದಿಗೂ ಸಾಯಲ್ಲ: 140ನೇ ಸಂಸ್ಥಾಪನಾ ದಿನದಂದು ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ-ಆರ್‌ಎಸ್‌ಎಸ್‌ ಹೊಗಳಿದ ದಿಗ್ವಿಜಯ್ ಸಿಂಗ್‌‌ಗೆ ಶಶಿ ತರೂರ್ ಬೆಂಬಲ; ಪಕ್ಷದ ಸಂಘಟನೆ ಬಲಪಡಿಸಬೇಕು ಎಂದ ಸಂಸದ

'ಮಧ್ಯಮ ವರ್ಗದವರ ಜೀವನ' ಭಾರತಕ್ಕಿಂತ ಕೆನಡಾದಲ್ಲಿ ಉತ್ತಮವಾಗಿದೆಯೇ? ಚರ್ಚೆ ಹುಟ್ಟುಹಾಕಿದ ಭಾರತೀಯ ವಲಸಿಗ! Video

ರಾಜ್ಯ ಲೋಕಾಯುಕ್ತ ಇತಿಹಾಸದಲ್ಲಿ ಇದೇ ಮೊದಲು! ಭ್ರಷ್ಟಾಚಾರ ಆರೋಪ, ಒಂದೇ ತಾಲೂಕಿನ ಎಲ್ಲಾ '25 ಗ್ರಾಮ ಪಂಚಾಯಿತಿ'ಗಳ ವಿರುದ್ಧ ದೂರು ದಾಖಲು!

ಭಾರತ ತಂಡದಲ್ಲಿ ಆಡಿ 'ಬ್ಯಾನ್ ಶಿಕ್ಷೆ' ಗೊಳಗಾದ 'ಪಾಕಿಸ್ತಾನ'ದ ಖ್ಯಾತ ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ!

SCROLL FOR NEXT