Pakadua Vivah: ಯುವಕನಿಗೆ ಮತ್ತಿನ ಪದಾರ್ಥ ನೀಡಿ ಬಲವಂತದ ಮದುವೆ: Video Viral

ಬಿಹಾರದ ಸಮಸ್ತಿಪುರದಲ್ಲಿ, ಹೋಮ್ ಗಾರ್ಡ್ ಅಭ್ಯರ್ಥಿ ನಿತೀಶ್ ಕುಮಾರ್ ಎಂಬುವವರನ್ನು ಮತ್ತಿನ ಪದಾರ್ಥ ನೀಡಿ ಅಪಹರಣ ಮಾಡಿ ಬಲವಂತವಾಗಿ ಮದುವೆ ಮಾಡಲಾಗಿದೆ.
Pakadua Vivah
ಬಲವಂತದ ಮದುವೆ
Updated on

ಪಾಟ್ನಾ: ಪೊಲೀಸ್ ಆಗಲು ಸಿದ್ಧತೆ ನಡೆಸಿದ್ದ ಯುವಕನೋರ್ವನನ್ನು ಮತ್ತಿನ ಪದಾರ್ಥ ನೀಡಿ ಎಳೆದೊಯ್ದು ಬಲವಂತವಾಗಿ ಮದುವೆ ಮಾಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದೆ.

ಬಿಹಾರದ ಸಮಸ್ತಿಪುರದಲ್ಲಿ, ಹೋಮ್ ಗಾರ್ಡ್ ಅಭ್ಯರ್ಥಿ ನಿತೀಶ್ ಕುಮಾರ್ ಎಂಬುವವರನ್ನು ಮತ್ತಿನ ಪದಾರ್ಥ ನೀಡಿ ಅಪಹರಣ ಮಾಡಿ ಬಲವಂತವಾಗಿ ಮದುವೆ ಮಾಡಲಾಗಿದೆ.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಸಂತ್ರಸ್ಥ ನಿತೀಶ್ ಕುಮಾರ್ ಅರೆ ಪ್ರಜ್ಞಾವಸ್ಥೆಯಲ್ಲೇ ವಿವಾಹ ಪೀಠದ ಮೇಲೆ ಕುಳಿತಿರುವುದು ಕಂಡುಬರುತ್ತದೆ.

ಅಲ್ಲದೆ ಇತರರ ನೆರವಿನಿಂದ ಬಲವಂತವಾಗಿಯೇ ವರಮಾಲಾ ಕಾರ್ಯಕ್ರಮದಲ್ಲಿ ಮದುವೆ ಹೆಣ್ಣಿಗೆ ಹಾರ ಹಾಕಿದ್ದಾರೆ. ಕೈಯಲ್ಲಿ ಹಾರವನ್ನೂ ಹಿಡಿಯಲಾಗದ ಪರಿಸ್ಥಿತಿಯಲ್ಲಿ ಇರುವುದು ಕಂಡುಬಂದಿದೆ.

Pakadua Vivah
Nationwide strike: 'ಕಾರ್ಮಿಕ ನೀತಿ' ವಿರೋಧಿಸಿ ದೇಶಾದ್ಯಂತ ಮುಷ್ಕರ: 30 ಕೋಟಿ ಕಾರ್ಮಿಕರು ಭಾಗಿ, ಬ್ಯಾಂಕಿಂಗ್, ವಿದ್ಯುತ್ ಸೇವೆ ವ್ಯತ್ಯಯ!

ವಿಡಿಯೋ ಹರಿಬಿಟ್ಟ ನಿತೀಶ್

ಇನ್ನು ಈ ಬಲವಂತದ ಮದುವೆ ಬಳಿಕ ಪೋಖರ್ ಗ್ರಾಮದ ನಿವಾಸಿ ನಿತೀಶ್ ಒಂದು ವಿಡಿಯೋ ಬಿಡುಗಡೆ ಮಾಡಿದ್ದಾನೆ. ವಿಡಿಯೋದಲ್ಲಿ ಫೆಬ್ರವರಿ 7 ರಂದು ಗ್ರಂಥಾಲಯಕ್ಕೆ ಹೋಗುತ್ತಿದ್ದಾಗ, ಕೆಲವು ಪುರುಷರ ಗುಂಪೊಂದು ತನ್ನನ್ನು ಅಪಹರಿಸಿದೆ.

ಬಳಿಕ ತನ್ನನ್ನು ಥಳಿಸಿ, ಮಾದಕ ದ್ರವ್ಯ ನೀಡಿ, ನಂತರ ಮೋರ್ವಾದಲ್ಲಿರುವ ದೇವಸ್ಥಾನಕ್ಕೆ ಕರೆದೊಯ್ದು, ಚಕ್ರಜ ಅಲಿ ಗ್ರಾಮದ ನಿವಾಸಿ ಶಂಕರ್ ರೈ ಅವರ ಮಗಳು ಲಕ್ಷ್ಮಿ ಕುಮಾರಿ ಅವರೊಂದಿಗೆ ಬಲವಂತವಾಗಿ ವಿವಾಹ ಮಾಡಲಾಯಿತು ಎಂದು ಆರೋಪಿಸಿದ್ದಾರೆ.

ಮದುವೆ ಬಳಿಕ ಸಹಾಯಕ್ಕಾಗಿ ಕರೆ ಮಾಡದಂತೆ ತಡೆಯಲು ತನ್ನ "ಮಾವ" ಮನೆಯಲ್ಲಿ ಒಂದು ಕೋಣೆಯೊಳಗೆ ಬಂಧಿಸಲಾಯಿತು ಎಂದು ನಿತೀಶ್ ಆರೋಪಿಸಿದ್ದಾರೆ.

ಪೊಲೀಸರ ಮಧ್ಯ ಪ್ರವೇಶ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಜನಪ್ರಿಯತೆ ಗಳಿಸುತ್ತಿದ್ದಂತೆ, ಸಮಷ್ಟಿಪುರ ಪೊಲೀಸರು ನಿತೀಶ್ ಅವರನ್ನು ಮನೆಯಿಂದ ರಕ್ಷಿಸಿ ವಿಚಾರಣೆಗಾಗಿ ಠಾಣೆಗೆ ಕರೆತಂದರು. ಪಟೋರಿ ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಕುಮಾರ್, ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ವೈರಲ್ ಆಗಿರುವ ವೀಡಿಯೊದ ಸತ್ಯಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಮದುವೆ ಒಪ್ಪಿಗೆಯಿಂದಾಗಿದೆಯೇ ಅಥವಾ ಬಲವಂತವಾಗಿ ನಡೆದಿದೆಯೇ ಎಂದು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Pakadua Vivah
ನಾನು ಎಪ್ಸ್ಟೀನ್ ಅವರನ್ನು ಭೇಟಿಯಾಗಿದ್ದೆ...: ರಾಹುಲ್ ಆರೋಪಕ್ಕೆ ಹರ್ದೀಪ್ ಸಿಂಗ್ ಪುರಿ ತಿರುಗೇಟು

ಪಕಡ್ವಾ ವಿವಾಹ್

ಇನ್ನು ಬಿಹಾರದಲ್ಲಿ ಇಂತಹ ಬಲವಂತದ ವಿವಾಹಗಳು ಸಾಮಾನ್ಯವಾಗಿದ್ದು, ಇಂತಹ ವಿವಾಹವನ್ನು ಪಕಡ್ವಾ ವಿವಾಹ್ ಎಂದು ಕರೆಯುತ್ತಾರೆ. ಇಲ್ಲಿ ವಧು ಅಥವಾ ವರನನ್ನು ಬಲವಂತವಾಗಿ ಕರೆತಂದು ವಿವಾಹ ಮಾಡಿಸಲಾಗುತ್ತದೆ.

ಸಾಕಷ್ಟು ಪ್ರಕರಣಗಳಲ್ಲಿ ಸ್ನೇಹ, ಪ್ರೀತಿ-ಪ್ರೇಮದ ಹೆಸರಲ್ಲಿ ಹೆಣ್ಣುಮಕ್ಕಳಿಗೆ ಮೋಸ ಮಾಡುವವರನ್ನು ಹಲವು ಬಾರಿ ಹೆಣ್ಣಿನ ಕುಟುಂಬಸ್ಥರು ಅಥವಾ ಗ್ರಾಮಸ್ಥರು ವರನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸುತ್ತಾರೆ.

ಅಲ್ಲದೆ ವಿವಾಹೇತರ ಸಂಬಂಧಗಳಲ್ಲೂ ಇಂತಹ ಪಕಡ್ವಾ ವಿವಾಹ್ ಸಾಮಾನ್ಯ ಎನ್ನಲಾಗಿದೆ. ಸಾಕಷ್ಟು ಬಾರಿ ಹೆಣ್ಣಿನ ಪತಿಯೇ ಆಕೆಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಕೊಟ್ಟ ಉದಾಹರಣೆ ಕೂಡ ಇದೆ. ಇದೀಗ ಈ ಪಟ್ಟಿಗೆ ನಿತೀಶ್ ಕುಮಾರ್ ಸೇರ್ಪಡೆಯಾಗಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com