ಅಲ್ಲು ಸಿರಿಶ್- ನಯನಿಕಾ 
ಸಿನಿಮಾ ಸುದ್ದಿ

ನಯನಿಕಾ ಜೊತೆ ಸಪ್ತಪದಿ ತುಳಿಯಲು ಸಜ್ಜಾದ ಅಲ್ಲು ಸಿರಿಶ್; ಸೋದರ ಅಲ್ಲು ಅರ್ಜುನ್ ಮದುವೆ ದಿನದಂದೇ ವಿವಾಹ!

ಸಿರೀಶ್ ಮತ್ತು ನಯನಿಕಾ 2023ರಲ್ಲಿ ಡೇಟಿಂಗ್ ಪ್ರಾರಂಭಿಸಿದರು ಮತ್ತು ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.

ನವದೆಹಲಿ: ತೆಲುಗು ನಟ ಅಲ್ಲು ಸಿರೀಶ್ ಸೋಮವಾರ ತಮ್ಮ ಗೆಳತಿ ನಯನಿಕಾ ಅವರೊಂದಿಗೆ ಮುಂದಿನ ವರ್ಷ ಮಾರ್ಚ್‌ನಲ್ಲಿ ವಿವಾಹವಾಗುವುದಾಗಿ ಹೇಳಿದ್ದಾರೆ.

ತೆಲುಗು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ಸಹೋದರ ಮತ್ತು ಪ್ರಮುಖ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರ ಸಿರೀಶ್ ಅವರು, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದೊಂದಿಗೆ ಈ ಸುದ್ದಿಯನ್ನು ತಿಳಿಸಿದ್ದಾರೆ.

'ಗೌರವಂ', 'ಕೋತ ಜಂತ' ಮತ್ತು 'ಶ್ರೀರಸ್ತು ಶುಭಮಸ್ತು' ಮುಂತಾದ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ನಟ, 2026ರ ಮಾರ್ಚ್ 6 ರಂದು ನಯನಿಕಾ ಅವರನ್ನು ವರಿಸಲಿದ್ದಾರೆ. ಅವರ ಸಹೋದರ ಅಲ್ಲು ಅರ್ಜುನ್ ಅವರ ವಿವಾಹ ಕೂಡ ಅದೇ ದಿನ ನಡೆದಿತ್ತು.

ಸಿರೀಶ್ ಮತ್ತು ನಯನಿಕಾ 2023ರಲ್ಲಿ ಡೇಟಿಂಗ್ ಪ್ರಾರಂಭಿಸಿದರು ಮತ್ತು ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.

ನಟ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಮಾರಂಭದ ಚಿತ್ರಗಳ ಸರಣಿಯನ್ನು ಹಂಚಿಕೊಳ್ಳುವ ಮೂಲಕ ನಿಶ್ಚಿತಾರ್ಥವನ್ನು ಘೋಷಿಸಿದರು.

'ನಾನು ಅಂತಿಮವಾಗಿ ಮತ್ತು ಸಂತೋಷದಿಂದ ನನ್ನ ಜೀವನದ ಪ್ರೀತಿಯಾದ ನಯನಿಕಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ' ಎಂದು ಶೀರ್ಷಿಕೆ ನೀಡಿದ್ದರು.

ಅಲ್ಲು ಸಿರಿಶ್ ಅವರು 2024ರಲ್ಲಿ ತೆರೆಕಂಡ ಸ್ಯಾಮ್ ಆಂಟನ್ ನಿರ್ದೇಶನದ 'ಬಡ್ಡಿ' ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಗಾಯತ್ರಿ ಭಾರದ್ವಾಜ್, ಪ್ರಿಷಾ ರಾಜೇಶ್ ಸಿಂಗ್ ಮತ್ತು ಅಜ್ಮಲ್ ಅಮೀರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Unnao Rape Case: ಕುಲದೀಪ್ ಸಿಂಗ್ ಸೆಂಗಾರ್'ಗೆ ಹಿನ್ನಡೆ; ಜೀವಾವಧಿ ಶಿಕ್ಷೆ ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಉಕ್ರೇನ್ - ರಷ್ಯಾ ಸಮರ ಕೊನೆಗೊಳಿಸಲು ಸಭೆ: ಟ್ರಂಪ್‌ಗೆ 50 ವರ್ಷಗಳ ಭದ್ರತಾ ಗ್ಯಾರಂಟಿ ಕೇಳಿದ ಝೆಲೆನ್ಸ್ಕಿ

ರಷ್ಯಾ ಸೇನೆಗೆ ಸೇರಿದ್ದ10 ಭಾರತೀಯರ ಸಾವು: ವರದಿ

ಡೆಹ್ರಾಡೂನ್‌ನಲ್ಲಿ ತ್ರಿಪುರಾ ವಿದ್ಯಾರ್ಥಿಯ ಹತ್ಯೆ: 'ಭಯಾನಕ ದ್ವೇಷ' ದ ಅಪರಾಧ, BJP ವಿರುದ್ಧ ರಾಹುಲ್ ಗಾಂಧಿ ಕಿಡಿ!

Horrific Video: Mahindra Bolero ವಾಹನದ ಮೇಲೆ ಬಿದ್ದ ಟ್ರಕ್, ಕಾರು ಅಪ್ಪಚ್ಚಿ, ಚಾಲಕ ಸಾವು!

SCROLL FOR NEXT