ತಾಯಿ ಜೊತೆಗಿರುವ ಫೋಟೋದಲ್ಲಿ ಮೋಹನ್ ಲಾಲ್ 
ಸಿನಿಮಾ ಸುದ್ದಿ

ಕೊಚ್ಚಿ: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ 'ಮಾತೃ' ವಿಯೋಗ!

ಡಿಸೆಂಬರ್ 25, 2025 ರಂದು 'ವೃಷಭ' ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮೋಹನ್‌ಲಾಲ್ ಅವರ ತಾಯಿ ನಿಧನರಾಗಿದ್ದಾರೆ.

ಕೊಚ್ಚಿ: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ತಾಯಿ ಶಾಂತಕುಮಾರಿ ಅವರು ಮಂಗಳವಾರ ಕೊಚ್ಚಿಯ ಎಲಮಕ್ಕರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಮೂಲತಃ ಪತ್ತನಂತಿಟ್ಟದ ಎಳಂತೂರಿನವರಾದ ಅವರು ತಮ್ಮ ಪತಿ ವಿಶ್ವನಾಥನ್ ನಾಯರ್ ಅವರ ನೌಕರಿಯಿಂದಾಗಿ ಹಲವು ವರ್ಷಗಳ ಹಿಂದೆ ತಿರುವನಂತಪುರಕ್ಕೆ ತೆರಳಿದ್ದರು. ಅವರು ಸಾಯುವ ಮೊದಲು ಕೇರಳ ಸರ್ಕಾರದ ಕಾನೂನು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಶಾಂತಕುಮಾರಿ ಅವರು ತನ್ನ ಜೀವಿತದ ಬಹುಕಾಲವನ್ನು ತಿರುವನಂತಪುರಂನಲ್ಲಿರುವ ಕುಟುಂಬದ ಮನೆಯಲ್ಲಿ ಕಳೆದಿದ್ದಾರೆ. ಅವರು ಪಾರ್ಶ್ವವಾಯುವಿಗೆ ತುತ್ತಾದ ನಂತರ ಅವರನ್ನು ಕೊಚ್ಚಿಗೆ ಮೋಹನ್ ಲಾಲ್ ಕರೆತಂದಿದ್ದರು. ಹೀಗಾಗಿ ಅವರು ಕೊನೆಯವರೆಗೂ ಮೋಹನ್ ಲಾಲ್ ಜೊತೆಯಲ್ಲಿದ್ದರು.

ಶಾಂತಕುಮಾರಿ ಅವರು ಆಗಸ್ಟ್ 10, 2025 ರಂದು ಕೊಚ್ಚಿಯಲ್ಲಿ ತಮ್ಮ 90 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಮೋಹನ್ ಲಾಲ್ ಅವರು ಆಗಾಗ್ಗೆ ತಮ್ಮ ತಾಯಿ ಜೊತೆಗಿನ ಸಂಬಂಧವನ್ನು ಹೇಳಿಕೊಳ್ಳುತ್ತಿದ್ದರು. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದು ಕೊಚ್ಚಿಗೆ ಹಿಂದಿರುಗಿದಾಗ ನಂತರ ಮೊದಲು ಭೇಟಿಯಾದದ್ದು ತಾಯಿಯನ್ನು ಎಂದು ಹೇಳುತ್ತಿದ್ದ ಮೋಹನ್ ಲಾಲ್, ಈ ವರ್ಷದ ಆರಂಭದಲ್ಲಿ, ಇಬ್ಬರೂ ಒಟ್ಟಿಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ತಾಯಂದಿರ ದಿನಕ್ಕೆ ಶುಭಾಶಯ ಕೋರಿದ್ದರು.

ಶಾಂತಕುಮಾರಿ ಅವರ ಹಿರಿಯ ಮಗ ಪ್ಯಾರೇಲಾಲ್ 2000 ರಲ್ಲಿ ನಿಧನರಾಗಿದ್ದರು. ಡಿಸೆಂಬರ್ 25, 2025 ರಂದು 'ವೃಷಭ' ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮೋಹನ್‌ಲಾಲ್ ಅವರ ತಾಯಿ ನಿಧನರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪರೀಕ್ಷೆ ಅಕ್ರಮ; ಜಾರ್ಖಂಡ್ ಸಿಎಂ ಸೊರೇನ್, ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಪ್ರತಿಕೃತಿ ದಹಿಸಿ JPSC-JSSC ಆಕಾಂಕ್ಷಿಗಳ ಪ್ರತಿಭಟನೆ

NLSIU ಘಟಿಕೋತ್ಸವ: NALSAR ಮಾದರಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಆಹ್ವಾನ ವಿರೋಧಿಸಿದ ಬೆಂಗಳೂರು ಉನ್ನತ ಕಾನೂನು ಕಾಲೇಜು!

ಪಂಜಾಬ್: ತಪ್ಪಿದ ಭಾರಿ ಅನಾಹುತ; ಉಗ್ರ ದಾಳಿ ಸಂಚು ವಿಫಲ, 690 ಗ್ರಾಂ IED ಪೊಲೀಸ್ ವಶಕ್ಕೆ

SIR ಪ್ರಕ್ರಿಯೆ ಯಶಸ್ಸು: ಬಿಹಾರ ಚುನಾವಣೆ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಜಪಾನ್‌ಗಳನ್ನು ಮೀರಿಸಿದೆ: CEC ಜ್ಞಾನೇಶ್ ಕುಮಾರ್

ಭಾರತದ ಹೊಸ ಶಕ್ತಿ ಪ್ರದರ್ಶನ: ಜೆಟ್ ಚಾಲಿತ ಸ್ವದೇಶಿ 'ದಿವ್ಯಾಸ್ತ್ರ Mk3' ಮೊದಲ ಪರೀಕ್ಷೆ ಯಶಸ್ವಿ! Video