ಬಿಗ್ ಬಾಸ್ ಕನ್ನಡ ವಿಜೇತ ಶೈನ್ ಶೆಟ್ಟಿ ಮತ್ತು ಅಂಕಿತಾ ಅಮರ್ ಅಭಿನಯದ 'ಜಸ್ಟ್ ಮ್ಯಾರೀಡ್' ಚಿತ್ರದ 'ಇದು ಮೊದಲನೆ ಸ್ವಾಗತಾನಾ' ರೋಮ್ಯಾಂಟಿಕ್ ಟ್ರ್ಯಾಕ್ ಅನ್ನು ಪ್ರೇಮಿಗಳ ದಿನದಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದರು. ಇದೊಂದು 'ಸುಂದರವಾದ ಹಾಡು’ ಎಂದ ಅವರು ಚಿತ್ರತಂಡಕ್ಕೆ ಶುಭ ಕೋರಿದರು. ಈ ಹಾಡನ್ನು ಕೆ ಕಲ್ಯಾಣ್ ಬರೆದಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಯಿದೆ. ಹಾಡಿಗೆ ಜಸ್‌ಕರಣ್ ಸಿಂಗ್ ಧ್ವನಿ ನೀಡಿದ್ದಾರೆ.
ಚಿತ್ರಕ್ಕೆ ಸಿಆರ್ ಬಾಬಿ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದ ಸಂಭಾಷಣೆಯನ್ನು ರಘು ನಿಡುವಳ್ಳಿ ಬರೆದಿದ್ದಾರೆ. ಎಬಿಬಿಎಸ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿಆರ್ ಬಾಬಿ ಮತ್ತು ಬಿ ಅಜನೀಶ್ ಲೋಕನಾಥ್ ಚಿತ್ರವನ್ನು ನಿರ್ಮಿಸಿದ್ದಾರೆ.
ಜಸ್ಟ್ ಮ್ಯಾರೀಡ್ ಒಂದು ರೊಮ್ಯಾಂಟಿಕ್ ಡ್ರಾಮಾವಾಗಿದ್ದು, ಶೈನ್ ಶೆಟ್ಟಿ, ಅಂಕಿತಾ ಅಮರ್ ಜೊತೆಗೆ ಶ್ರುತಿ ಹರಿಹರನ್, ದೇವರಾಜ್, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಶೃತಿ ಕೃಷ್ಣ, ಅನೂಪ್ ಭಂಡಾರಿ, ರವಿಶಂಕರ್ ಗೌಡ, ರವಿ ಭಟ್, ಶ್ರೀಮನ್, ಸಾಕ್ಷಿ ಅರರ್ವಾಲ್ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಿಆರ್ ಬಾಬಿ ಮಾತನಾಡಿ, ಜಸ್ಟ್ ಮ್ಯಾರೀಡ್ ನವವಿವಾಹಿತರು ಮತ್ತು ರೊಮ್ಯಾಂಟಿಕ್ ಚಿತ್ರಗಳನ್ನು ಇಷ್ಟಪಡುವ ಅಭಿಮಾನಿಗಳಿಗೆ ಕನೆಕ್ಟ್ ಆಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದ ಕಥೆಯನ್ನು ಧನಂಜಯ್ ರಂಜನ್ ಬರೆದಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಪಿಜಿ ಅವರ ಛಾಯಾಗ್ರಾಹಕ, ಶ್ರೀಕಾಂತ್ ಮತ್ತು ಆಶಿಕ್ ಕುಸುಗೊಳ್ಳಿ ಅವರ ಸಂಕಲನ, ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನವಿದೆ. ಚಿತ್ರವು ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರತಂಡ ಇನ್ನೂ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ.