ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಬರ್ಬರವಾಗಿ ಹತ್ಯೆಯಾಗಿದ್ದ ರೇಣುಕಾಸ್ವಾಮಿ ಮನೆಯಲ್ಲಿ ನೋವಿನಲ್ಲೂ ತುಸು ಸಂತಸದ ಕ್ಷಣಗಳು ಮನೆ ಮಾಡಿದೆ. ರೇಣುಕಾಸ್ವಾಮಿ ಕೊಲೆಯಾಗುವುದಕ್ಕೂ ಮುನ್ನ ಅವಕ ಪತ್ನಿ ಗರ್ಭಿಣಿ ಆಗಿದ್ದರು. ಅಂತೆ 2024ರ ಅಕ್ಟೋಬರ್ 16ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇಂದು ಮಗುವಿಗೆ ನಾಮಕರಣ ಮಾಡಲಾಗಿದೆ. ಮಗುವಿಗೆ ಶಶಿಧರ ಎಂದು ಹೆಸರು ಇಡುತ್ತಿದ್ದೇವೆ ಎಂದು ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಹೇಳಿದ್ದಾರೆ.