ಕೋರಾ ಸಿನಿಮಾ ತಂಡ 
ಸಿನಿಮಾ ಸುದ್ದಿ

ಸುನಾಮಿ ಕಿಟ್ಟಿ ಅಭಿನಯದ 'ಕೋರಾ' ಸಿನಿಮಾ ಮೂರು ಭಾಷೆಗಳಲ್ಲಿ ರಿಲೀಸ್!

ನಮ್ಮ ನೆಲದ ಕಥೆ.‌ ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ರಾಕ್ಷಸನೊಬ್ಬನ‌ ಕುರಿತಾದ ಕಥೆಯೂ ಕೂಡಾ ಆಗಿದೆ. ಹೆಚ್ಚಿನ ಭಾಗದ ಚಿತ್ರೀಕರಣ ಕಾಡಿನಲ್ಲೇ ನಡೆದಿದೆ.‌

ಸುನಾಮಿ ಕಿಟ್ಟಿ ತಮ್ಮ ಮುಂದಿನ 'ಕೋರಾ' ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವು ಫೆಬ್ರವರಿ 7 ರಂದು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ನಮ್ಮ ನೆಲದ ಕಥೆ.‌ ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ರಾಕ್ಷಸನೊಬ್ಬನ‌ ಕುರಿತಾದ ಕಥೆಯೂ ಕೂಡಾ ಆಗಿದೆ. ಹೆಚ್ಚಿನ ಭಾಗದ ಚಿತ್ರೀಕರಣ ಕಾಡಿನಲ್ಲೇ ನಡೆದಿದೆ.‌ ಸಕಲೇಶಪುರ, ಶೃಂಗೇರಿ, ಉಡುಪಿ, ಮಂಗಳೂರು ಸೇರಿ ಮೊದಲಾದ ಕಡೆಗಳಲ್ಲಿ ಶೂಟ್ ಮಾಡಲಾಗಿದೆ. ನಿರ್ದೇಶಕ ಒರಟ ಶ್ರೀ ಅವರು ಒಂದೊಳ್ಳೆ ಕಥೆ ಮಾಡಿದ್ದಾರೆ. ಸುನಾಮಿ ಕಿಟ್ಟಿ ಉತ್ತಮವಾಗಿ ನಟಿಸಿದ್ದಾರೆ.‌

ನಾನು ಕೂಡಾ ಕಠೋರ ಎಂಬ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಉತ್ತಮ‌ವಾಗಿ ಮೂಡಿಬಂದಿರುವ ಈ ಚಿತ್ರ ಫೆಬ್ರವರಿ 7ರಂದು ಕನ್ನಡ,‌ ತಮಿಳು ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಲಿದೆ.‌ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಪಿ ಮೂರ್ತಿ ಹೇಳಿದ್ದಾರೆ.

ಕೋರಾ 90 ವರ್ಷಗಳ ಹಿಂದೆ ಪ್ರಕೃತಿಯನ್ನು ದೇವರೆಂದು ಪೂಜಿಸುತ್ತಿದ್ದ ಕಥೆ. ಈಗ, ಒಂದು ಸಣ್ಣ ಭೂಮಿಗೆ ಸಹ ಸಂಘರ್ಷ ನಡೆಯುತ್ತದೆ. ಇದು ವಿಶಿಷ್ಟ ವಿಷಯವನ್ನು ಹೊಂದಿರುವ ಕಮರ್ಷಿಯಲ್ ಚಿತ್ರ. ಇದು ಕನ್ನಡ ಚಿತ್ರವಾಗಿದ್ದರೂ, ಇದು ಎಲ್ಲಾ ಭಾಷೆಗಳೊಂದಿಗೆ ಸಂಪರ್ಕ ಸಾಧಿಸಬಹುದಾದ ಕಥೆ ಎಂದು ಕೆಲವರು ಹೇಳಿದ್ದಾರೆ, ಅದಕ್ಕಾಗಿಯೇ ನಾವು ಇದನ್ನು ಬಹು ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ನಿರ್ದೇಶ ನಿರ್ದೇಶಕ ಒರಟ ಶ್ರೀ ತಿಳಿಸಿದ್ದಾರೆ.

ಕೋರಾ ಒಂದು ಉತ್ತಮ ಚಿತ್ರವಾಗಿ ನಿಮ್ಮ ಮುಂದೆ ಬರುತ್ತಿದೆ ಎಂದು ಹೇಳಿದ ಸುನಾಮಿ ಕಿಟ್ಟಿ ಈ ಪಾತ್ರಕ್ಕೆ ತಮ್ಮನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಕ್ಕೆ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.

ರತ್ನಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಪಿ ಮೂರ್ತಿ ನಿರ್ಮಿಸಿದ ಮತ್ತು ಒರಟ ಶ್ರೀ ನಿರ್ದೇಶಿಸಿದ ಈ ಚಿತ್ರದ ತಾರಾಗಣದಲ್ಲಿ ಎಂಕೆ ಮಠ, ಮುನಿ, ನೀನಾಸಂ ಅಶ್ವಥ್, ಯತಿರಾಜ್, ಸೌಜನ್ಯ ನಟಿಸಿದ್ದಾರೆ, ಹೇಮಂತ್ ಕುಮಾರ್, ಸಂಗೀತವಿದ್ದು, ಸೆಲ್ವಂ ಛಾಯಾಗ್ರಾಹಣವಿದೆ. ತಮಿಳು ಆವೃತ್ತಿಯನ್ನು ಶಾನ್ ವಿತರಿಸಲಿದ್ದಾರೆ ಮತ್ತು ತೆಲುಗು ಆವೃತ್ತಿಯನ್ನು ಬಾಲಾಜಿ ವಿತರಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT