ಪಾರು ಪಾರ್ವತಿ ಚಿತ್ರದಲ್ಲಿ ನಟಿ ದೀಪಿಕಾ ದಾಸ್ 
ಸಿನಿಮಾ ಸುದ್ದಿ

ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ನಟನೆಯ 'ಪಾರು ಪಾರ್ವತಿ' ಬಿಡುಗಡೆಗೆ ಸಿದ್ದ; ದಿನಾಂಕ ಘೋಷಣೆ

'ಈ ಕಾರು ಕೇವಲ ವಸ್ತುವಲ್ಲ; ಇದು ಪ್ರಮುಖ ಪಾತ್ರಗಳಲ್ಲಿ ಒಂದಾಗಿದೆ. ಕಾರಿನ ಪ್ರಯಾಣವು ಚಿತ್ರದ ಸಾರವನ್ನು ಪ್ರತಿಬಿಂಬಿಸುತ್ತದೆ' ಎಂದು ನಿರ್ದೇಶಕ ರೋಹಿತ್ ಕೀರ್ತಿ ಹಂಚಿಕೊಂಡಿದ್ದಾರೆ.

ರೋಹಿತ್ ಕೀರ್ತಿ ನಿರ್ದೇಶನದ ಬಿಗ್ ಬಾಸ್ ಮಾಜಿ ಸ್ಪರ್ಧಿ ಮತ್ತು ನಟಿ ದೀಪಿಕಾ ದಾಸ್ ಅಭಿನಯದ ಮುಂಬರುವ 'ಪಾರು ಪಾರ್ವತಿ' ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡ ಚಿತ್ರದ ನಾಲ್ಕನೇ ಪ್ರಮುಖ ಪಾತ್ರದ ಹೈ-ಎಂಡ್ ISUZU V ಕ್ರಾಸ್ ಮಾಡೆಲ್ ಕಾರನ್ನು ಅನಾವರಣಗೊಳಿಸಿದ್ದು, ಚಿತ್ರವು ಜನವರಿ 31 ರಾಜ್ಯದಾದ್ಯಂತ ಚಿತ್ರಮಂಗದಿರಗಳಲ್ಲಿ ತೆರೆಕಾಣಲಿದೆ ಎಂದು ಘೋಷಿಸಿದೆ.

'ಈ ಕಾರು ಕೇವಲ ವಸ್ತುವಲ್ಲ; ಇದು ಪ್ರಮುಖ ಪಾತ್ರಗಳಲ್ಲಿ ಒಂದಾಗಿದೆ. ಕಾರಿನ ಪ್ರಯಾಣವು ಚಿತ್ರದ ಸಾರವನ್ನು ಪ್ರತಿಬಿಂಬಿಸುತ್ತದೆ' ಎಂದು ನಿರ್ದೇಶಕ ರೋಹಿತ್ ಕೀರ್ತಿ ಹಂಚಿಕೊಂಡಿದ್ದಾರೆ. ವಿಶೇಷವಾಗಿ ವಿನ್ಯಾಸಗೊಳಿಸಿದ ISUZU ಕಾರು 20 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ. ಬೆಂಗಳೂರಿನ ಉತ್ತರಹಳ್ಳಿಯಿಂದ ಉತ್ತರಾಖಂಡದವರೆಗೆ ಎಂಟು ರಾಜ್ಯಗಳಾದ್ಯಂತ 1.1 ಲಕ್ಷ ಕಿಲೋಮೀಟರ್‌ಗಳಷ್ಟು ಪ್ರಯಾಣಿಸಿದೆ. ಇದು ಚಿತ್ರದ ನಿರೂಪಣೆಗೆ ಅವಿಭಾಜ್ಯವಾಗಿದೆ.

ದೀಪಿಕಾ ದಾಸ್ ಹೊರತಾಗಿ, ಚಿತ್ರದ ತಾರಾಗಣದಲ್ಲಿ ಪೂನಂ ಸಿರ್ನಾಯಕ್ ಮತ್ತು ಫವಾಜ್ ಅಶ್ರಫ್ ಪ್ರಮುಖ ಪಾತ್ರಗಳಲ್ಲಿದ್ದಾರೆ. 'ಈ ಪ್ರಯಾಣ ಆಧರಿತ ಚಲನಚಿತ್ರವು ಭಾವನೆಗಳು, ಸಂಸ್ಕೃತಿ ಮತ್ತು ಅನ್ವೇಷಿಸದ ಸ್ಥಳಗಳನ್ನು ಪರಿಶೋಧಿಸುತ್ತದೆ. ಇದು ಮನರಂಜನೆ, ಮಾಹಿತಿ ಮತ್ತು ಪ್ರೇಕ್ಷಕರೊಂದಿಗೆ ಆಳವಾಗಿ ಸಂಪರ್ಕ ಸಾಧಿಸುತ್ತದೆ' ಎಂದು ದೀಪಿಕಾ ಹೇಳುತ್ತಾರೆ.

ಆರ್ ಹರಿ ಸಂಯೋಜಿಸಿದ ಒಂಬತ್ತು ಹಾಡುಗಳು ಚಿತ್ರದಲ್ಲಿವೆ. ಅಬಿನ್ ರಾಜೇಶ್ ಛಾಯಾಗ್ರಹಣ ಚಿತ್ರಕ್ಕಿದೆ. ಸಾಹಸ ಮತ್ತು ಭಾವನೆಗಳನ್ನು ಪಾರು ಪಾರ್ವತಿ ಚಿತ್ರ ಸಂಯೋಜಿಸುತ್ತದೆ. Eighteen Thirty Six Pictures ಅಡಿಯಲ್ಲಿ ಈ ಯೋಜನೆಯನ್ನು ನಿರ್ಮಿಸುತ್ತಿರುವ ನಿರ್ಮಾಪಕ ಪಿಬಿ ಪ್ರೇಮನಾಥ್ ಅವರು ಕನ್ನಡ ಚಿತ್ರರಂಗವನ್ನು ಉನ್ನತೀಕರಿಸುವ ಉತ್ಸಾಹವನ್ನು ವ್ಯಕ್ತಪಡಿಸಿದರು. ಇದು ಅವರ ಕನಸು ನನಸಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS 2026: Modi-Putin ಭೇಟಿ; ಆಪ್ತ ಮಿತ್ರನಿಗೆ ಪ್ರಧಾನಿಯಿಂದ ಪವಿತ್ರ, ವಿಶೇಷ ಉಡುಗೊರೆ! Video

BRICS 2026: ಭಾರತ ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿರ್ವಹಿಸಲಿ- ಕ್ಸೀ ಜಿನ್ಪಿಂಗ್ ಭಾರತ ಭೇಟಿಗೂ ಮುನ್ನ ಚೀನಾ

ನಿಮ್ಮ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಬಹುದು: ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಹೇಳಿಕೆಗೆ ರಾಹುಲ್​​ ಗಾಂಧಿ ಆಕ್ಷೇಪ

ದೇವಸ್ಥಾನದಲ್ಲಿ ಮೀನು ತಿಂದ ಸುವೇಂದು ಅಧಿಕಾರಿ: ಬಾಗೇಶ್ವರ್ ಬಾಬಾಗೆ ತಿರುಗೇಟು; CM ಮಾಂಸಾಹಾರ ಸೇವನೆ ಬಗ್ಗೆ ಬಿಜೆಪಿ ಹೇಳಿದ್ದೇನು? Video

ಜೈಪುರದಲ್ಲಿ ಘೋರ ಕೃತ್ಯ: ಪತ್ನಿ, ಮೂವರು ಹೆಣ್ಣು ಮಕ್ಕಳ ತಲೆಯನ್ನು ಬ್ರಿಕ್'ನಿಂದ ಜಜ್ಜಿ ಕೊಂದ ಕ್ರೂರಿ!