ಅನ್‌ಲಾಕ್ ರಾಘವ ಚಿತ್ರದ ಹಾಡು ಬಿಡುಗಡೆ ಮಾಡಿದ ನಟಿ ಸಪ್ತಮಿ ಗೌಡ 
ಸಿನಿಮಾ ಸುದ್ದಿ

'ಅನ್‌ಲಾಕ್ ರಾಘವ' ಚಿತ್ರದ ಮೂರನೇ ಹಾಡು ಬಿಡುಗಡೆ: ಶುಭಾಶಯ ಕೋರಿದ ನಟಿ ಸಪ್ತಮಿ ಗೌಡ

ನಾಯಕಿಯಾಗಿ ನಟಿಸಿರುವ ರಾಚೆಲ್ ಡೇವಿಡ್ ಜಾನಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವನಾಗಿ ಮಿಲಿಂದ್ ನಟಿಸಿದ್ದಾರೆ.

ಅನ್‌ಲಾಕ್ ರಾಘವ ಚಿತ್ರದ 'ರಾಘವ ರಾಘವ' ಶೀರ್ಷಿಕೆಯು ಮೂರನೇ ಹಾಡು ಬಿಡುಗಡೆಯಾಗಿದೆ. ಹಾಡಿಗೆ ಅಂಕಿತಾ ಕುಂಡು ಧ್ವನಿ ನೀಡಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಹಾಡನ್ನು ಬಿಡುಗಡೆ ಮಾಡಿದ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ, ಚಿತ್ರಕ್ಕೆ ಶುಭ ಕೋರಿದರು.

ನಾಯಕಿಯಾಗಿ ನಟಿಸಿರುವ ರಾಚೆಲ್ ಡೇವಿಡ್ ಜಾನಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವನಾಗಿ ಮಿಲಿಂದ್ ನಟಿಸಿದ್ದಾರೆ. ಹಾಡಿಗೆ ಧನಂಜಯ ಅವರ ನೃತ್ಯ ನಿರ್ದೇಶನವಿದ್ದು, ಜೋಡಿಯ ನಡುವಿನ ಕೆಮಿಸ್ಟ್ರಿ ಸಖತ್ ವರ್ಕ್ ಆಗಿದೆ. ಕೋಟೆ ನಗರ ಚಿತ್ರದುರ್ಗದ ರಮಣೀಯ ದೃಶ್ಯಗಳ ನಡುವೆ ಸುಂದರವಾಗಿ ಮೂಡಿಬಂದಿದೆ. ಬೆಟ್ಟಗಳು, ಬಂಡೆಗಳು ಮತ್ತು ಗಲ್ಲಿಗಳಲ್ಲಿನ ದೃಶ್ಯಗಳು ಹಾಡಿನ ಸೌಂದರ್ಯವನ್ನು ಹೆಚ್ಚಿಸಿವೆ.

ಈ ಹಿಂದೆ ಬಿಡುಗಡೆಯಾದ 'ನನ್ ಹುಡುಗಿ' ಮತ್ತು 'ಲಾಕ್ ಲಾಕ್' ಹಾಡುಗಳು ಈಗಾಗಲೇ ಯುವಜನರ ಮೆಚ್ಚಿನವುಗಳಾಗಿವೆ ಮತ್ತು A2 ಮ್ಯೂಸಿಕ್‌ ಚಾನಲ್‌ನಲ್ಲಿ ಬಿಡುಗಡೆಯಾದ 'ರಾಘವ ರಾಘವ' ಹಾಡು ಇದೀಗ ವೀಕ್ಷಣೆಗೆ ಸಿದ್ಧವಾಗಿದೆ.

ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮಂಜುನಾಥ್ ಡಿ ಮತ್ತು ಗಿರೀಶ್ ಕುಮಾರ್ ನಿರ್ಮಿಸಿರುವ ಅನ್‌ಲಾಕ್ ರಾಘವ ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ರೋಮ್ಯಾನ್ಸ್, ಆ್ಯಕ್ಷನ್ ಮತ್ತು ಮನರಂಜನೆಯ ಭರವಸೆ ನೀಡಿದ್ದಾರೆ. ಫೆಬ್ರುವರಿ 7 ರಂದು ತೆರೆಗೆ ಬರಲಿರುವ ಈ ಚಿತ್ರ ರಾಮ ರಾಮ ರೇ ಖ್ಯಾತಿಯ ಡಿ ಸತ್ಯ ಪ್ರಕಾಶ್ ಅವರ ಕಥೆ ಮತ್ತು ಚಿತ್ರಕಥೆಯನ್ನು ಒಳಗೊಂಡಿದೆ.

ಲವಿತ್ ಛಾಯಾಗ್ರಾಹಕರಾಗಿ, ಅಜಯ್ ಕುಮಾರ್ ಮತ್ತು ಮಧು ತುಂಬಕೆರೆ ಸಂಕಲನವನ್ನು ನಿರ್ವಹಿಸುತ್ತಿದ್ದಾರೆ. ವಿನೋದ್ ಮತ್ತು ಅರ್ಜುನ್ ಅವರ ಸಾಹಸ ಸಂಯೋಜನೆ ಹೊಂದಿರುವ ಈ ಚಿತ್ರದ ತಾರಾಗಣದಲ್ಲಿ ಸಾಧು ಕೋಕಿಲ, ಶೋಭರಾಜ್, ಅವಿನಾಶ್ ಮತ್ತು ಭೂಮಿ ಶೆಟ್ಟಿ ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

DIG ಸೋಮಶೇಖರ್ ಕಾಮಕಾಂಡ ಬಟಾಬಯಲು: ಅಪರಾಧಿ ಪತ್ನಿಗೆ ವಿಡಿಯೋ ಕಾಲ್; ಬೆತ್ತಲಾಗುವಂತೆ ಒತ್ತಡ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!