ಅನಾಮಧೇಯ ಅಶೋಕ್ ಕುಮಾರ್ ಸ್ಟಿಲ್ 
ಸಿನಿಮಾ ಸುದ್ದಿ

ಕಿಶೋರ್ ಕುಮಾರ್ ನಟನೆಯ 'ಅನಾಮಧೇಯ ಅಶೋಕ್ ಕುಮಾರ್' ತೆರೆಗೆ ಬರಲು ಸಿದ್ಧ

ಐಟಿ ವೃತ್ತಿಪರರಾಗಿರುವ ಸಾಗರ್ ಕುಮಾರ್ ಇದೀಗ ಚಿತ್ರ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಕಿಶೋರ್ ಕುಮಾರ್ ನಟನೆಯ, ಸಾಗರ್ ಕುಮಾರ್ ನಿರ್ದೇಶನದ 'ಅನಾಮಧೇಯ ಅಶೋಕ್ ಕುಮಾರ್' ಚಿತ್ರವು ಕ್ರೈಮ್ ಥ್ರಿಲ್ಲರ್ ಆಗಿದ್ದು, ಹರ್ಷಿಲ್ ಕೌಶಿಕ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್‌ಕೆಎನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಲಾ ಕುಮಾರ್ ಮತ್ತು ರಮ್ಯಾ ಸಾಗರ್ ಕುಮಾರ್ ನಿರ್ಮಿಸಿರುವ ಈ ಬಹು ನಿರೀಕ್ಷಿತ ಯೋಜನೆ ಫೆಬ್ರುವರಿ 7ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ.

ಐಟಿ ವೃತ್ತಿಪರರಾಗಿರುವ ಸಾಗರ್ ಕುಮಾರ್ ಇದೀಗ ಚಿತ್ರ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ನಿಜ ಜೀವನದ ಕ್ರೈಂ ಪ್ರಕರಣಗಳು ಮತ್ತು ಮಾಜಿ ಪೋಲೀಸ್ ಅಧಿಕಾರಿಯಿಂದ ಸ್ಫೂರ್ತಿ ಪಡೆದ ಕಥಾವಸ್ತುವನ್ನು ಒಳಗೊಂಡಿದ್ದು, ಸಂಜೆಯಿಂದ ಬೆಳಗಿನವರೆಗೆ ಪ್ರಸಿದ್ಧ ವಕೀಲರ ಹತ್ಯೆಯ ಸುತ್ತ ಕೇಂದ್ರೀಕೃತವಾಗಿದೆ. ಸಾಗರ್ ಕುಮಾರ್ ಮತ್ತು ಬೆನ್ನಿ ಥಾಮಸ್ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಕಿಶೋರ್ ಕುಮಾರ್ ಪತ್ರಕರ್ತನಾಗಿ ನಟಿಸಿದರೆ, ಹರ್ಷಿಲ್ ಕೌಶಿಕ್ ಸರ್ಕಲ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಚಿತ್ರೋದ್ಯಮದಲ್ಲಿ ಸವಾಲುಗಳ ನಡುವೆಯೂ, ಗುಣಮಟ್ಟದ ಕಂಟೆಂಟ್ ಮೆಚ್ಚುಗೆಯನ್ನು ಪಡೆಯುತ್ತಿದೆ ಎಂದು ಸಾಗರ್ ಕುಮಾರ್ ಹೇಳುತ್ತಾರೆ. ಅನಾಮಧೇಯ ಎಂದರೆ 'ಹೆಸರಿಲ್ಲದವನು' ಎಂದರ್ಥ. ಅನಾಮಧೇಯ ಅಶೋಕ್ ಕುಮಾರ್ ಚಿತ್ರದಲ್ಲಿನ ರಹಸ್ಯವು ಪ್ರೇಕ್ಷಕರನ್ನು ಕೊನೆಯವರೆಗೂ ಊಹಿಸುವಂತೆ ಮಾಡುತ್ತದೆ ಎನ್ನುತ್ತದೆ ಚಿತ್ರತಂಡ.

ಚಿತ್ರದ ತಾರಾಗಣದಲ್ಲಿ ಸುಧೀಂದ್ರ ನಾಯರ್, ಕಾಂತರಾಜ್ ಕಡ್ಡಿಪುಡಿ, ವೀರೇಶ್, ಸುಷ್ಮಾ, ಗಗನ್ ಮತ್ತು ದೀಪಕ್ ಇದ್ದಾರೆ. ಚಿತ್ರಕ್ಕೆ ಆಜಾದ್ ಅವರ ಸಂಗೀತ ಸಂಯೋಜನೆ, ಸುನಿಲ್ ಹೊನಳ್ಳಿ ಅವರ ಛಾಯಾಗ್ರಹಣ, ಯೇಸು ಅವರ ಸಂಕಲನವಿದೆ. ಚಿತ್ರವನ್ನು ಕುನಾಲ್ ಮತ್ತು ರವಿಚಂದ್ರನ್ ವಿತರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT