ವೇಷಗಳು ಚಿತ್ರದ ಫಸ್ಟ್ ಲುಕ್ ಪೋಸ್ಟರ್ 
ಸಿನಿಮಾ ಸುದ್ದಿ

ರವಿ ಬೆಳಗೆರೆಯವರ 'ವೇಷಗಳು' ಕಥೆಯಿಂದ ಪ್ರೇರಿತ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ! ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ದೂರದರ್ಶನ, ನಿರ್ಮಾಣ ಮತ್ತು ಸಿನಿಮಾ ರಂಗದಲ್ಲಿ ವರ್ಷಗಳ ಅನುಭವ ಹೊಂದಿರುವ ಕಿಶನ್ ರಾವ್ ದಳವಿ ಅವರು ಇದೇ ಮೊದಲ ಬಾರಿಗೆ 'ವೇಷಗಳು' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಸಂಜು ವೆಡ್ಸ್ ಗೀತಾ 2ರ ಯಶಸ್ಸಿನ ನಂತರ, ನಟ ಶ್ರೀನಗರ ಕಿಟ್ಟಿ ಇದೀಗ ತಮ್ಮ ಮುಂದಿನ ಯೋಜನೆಯಾದ 'ವೇಷಗಳು' ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಈ ಕಥೆಯು ದಿವಂಗತ ರವಿ ಬೆಳಗೆರೆಯವರ 'ಒಟ್ಟಾರೆ ಕಥೆಗಳು' ಕಥಾಸಂಕಲನದಿಂದ ಆಯ್ದ 'ವೇಷಗಳು' ಎಂಬ ಕಥೆಯಿಂದ ಪ್ರೇರಿತವಾಗಿದೆ. ಸಿನಿಮಾಗೂ ಅದೇ ಹೆಸರನ್ನು ಇಡಲಾಗಿದೆ. ರವಿ ಬೆಳಗೆರೆ ಅವರು ಶ್ರೀನಗರ ಕಿಟ್ಟಿಯವರ ಮಾವ ಕೂಡ ಆಗಿದ್ದಾರೆ. ಚಿತ್ರತಂಡ ಇದೀಗ ಟೈಟಲ್ ಮತ್ತು ಫಸ್ಟ್ ಲುಕ್ ಅನ್ನು ನಟನ ಜನ್ಮದಿನದಂದು ಅನಾವರಣಗೊಳಿಸಿದೆ.

ಪೋಸ್ಟರ್ ಅನ್ನು ನಿರ್ಮಾಣ ಸಂಸ್ಥೆ ಗ್ರೀನ್ ಟ್ರೀ ಸ್ಟುಡಿಯೋಸ್ ಬಿಡುಗಡೆ ಮಾಡಿದ್ದು, ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳಗೆರೆ ಪ್ರಸ್ತುತಪಡಿಸಿದ್ದಾರೆ. ಪೋಸ್ಟರ್‌ನಲ್ಲಿ ಶ್ರೀನಗರ ಕಿಟ್ಟಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೆಡೆ, ಮಹಿಳೆಯ ಅವತಾರದಲ್ಲಿ, ಮತ್ತೊಂದೆಡೆ ಕಿಟ್ಟಿ ಆಧ್ಯಾತ್ಮಿಕವಾಗಿ ಬಿಳಿ ಬಟ್ಟೆ ಧರಿಸಿ, ರುದ್ರಾಕ್ಷಿ ಧರಿಸಿ ಶಾಂತವಾಗಿ ಕಾಣಿಸಿಕೊಂಡಿದ್ದಾರೆ.

ದೂರದರ್ಶನ, ನಿರ್ಮಾಣ ಮತ್ತು ಸಿನಿಮಾ ರಂಗದಲ್ಲಿ ವರ್ಷಗಳ ಅನುಭವ ಹೊಂದಿರುವ ಕಿಶನ್ ರಾವ್ ದಳವಿ ಅವರು ಇದೇ ಮೊದಲ ಬಾರಿಗೆ 'ವೇಷಗಳು' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಗೌಳಿ ಮತ್ತು ಸಂಜು ವೆಡ್ಸ್ ಗೀತಾ 2 ರಲ್ಲಿ ಕಿಟ್ಟಿ ಜೊತೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದ ಕಿಶನ್ ಇದೀಗ ಪೂರ್ಣ ಪ್ರಮಾಣದಲ್ಲಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

'ಇದು ಒಂದು ಕನಸು ನನಸಾಗಿದೆ. ನಾನು ಸಿನಿಮಾವನ್ನು ಎಲ್ಲ ಸ್ವರೂಪಗಳಲ್ಲಿ ಬದುಕಿದ್ದೇನೆ ಮತ್ತು ಉಸಿರಾಡಿದ್ದೇನೆ. ಆದರೆ, ರವಿ ಬೆಳಗೆರೆ ಅವರ ಕಥಾಸಂಕಲನದಿಂದ ಪ್ರೇರಿತವಾದ ಚಿತ್ರವನ್ನು ನಿರ್ದೇಶಿಸುವುದು ಮತ್ತು ನಟ ಕಿಟ್ಟಿಯೊಂದಿಗೆ ಕೆಲಸ ಮಾಡುವುದು ಆಳವಾಗಿ ಭಾವನಾತ್ಮಕವಾಗಿದೆ. ಸಾಂಪ್ರದಾಯಿಕ ಹಾಗಲು ವೇಷದ ವಿಕಸಿತ ರೂಪವೇ ವೇಷ; ಇದು ಹೆಚ್ಚಾಗಿ ರಂಗನಾಯಕಿಯ ಧಾಟಿಯಲ್ಲಿದೆ, ಇದು ಮಹಿಳೆಯ ಜೀವನ ಮತ್ತು ರೂಪಾಂತರದ ಕಥೆಯಾಗಿದೆ' ಎನ್ನುತ್ತಾರೆ ಕಿಶನ್.

ಚಿತ್ರದ ತಾಂತ್ರಿಕ ತಂಡದಲ್ಲಿ 'X&Y' ಚಿತ್ರಕ್ಕೆ ಹೆಸರುವಾಸಿಯಾದ ಕೌಶಿಕ್ ಹರ್ಷ ಸಂಗೀತ ಸಂಯೋಜಿಸಿದ್ದು, ಅಕ್ಷಯ್ ಪಿ ರಾವ್ ಸಂಪಾದಕರಾಗಿ ಮತ್ತು ರಾಜ್ ಗುರು ಮತ್ತು ಸೌಜನ್ಯ ದತ್ತರಾಜು ಸಂಭಾಷಣೆ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT