ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಗೆ Switzerland ಸರ್ಕಾರ ವಿಸಾ ನಿರಾಕರಿಸಿದೆ.
ತಮ್ಮ ನೂತನ ಚಿತ್ರ ‘ಡೆವಿಲ್’ ಶೂಟಿಂಗ್‌ಗಾಗಿ ಸ್ವಿಟ್ಜರ್‌ಲ್ಯಾಂಡ್‌ಗೆ ತೆರಳಲು ಯೋಜನೆ ಹಾಕಿದ್ದ ದರ್ಶನ್, ಕ್ರಿಮಿನಲ್ ಹಿನ್ನೆಲೆಯ ಕಾರಣದಿಂದಾಗಿ ಯುರೋಪ್‌ಗೆ ಪ್ರವೇಶ ನಿಷೇಧಿಸಲಾಗಿದೆ. ಈ ಕಾರಣಕ್ಕೆ ಸ್ವಿಟ್ಜರ್‌ಲ್ಯಾಂಡ್ ವೀಸಾ ರದ್ದಾಗಿದೆ ಎಂದು ಹೇಳಲಾಗಿದೆ.
ದರ್ಶನ್ ಅವರು ಜುಲೈ 14 ರಂದು ದುಬೈ ಮತ್ತು ಯುರೋಪ್‌ಗೆ ತೆರಳಲು 64ನೇ ಸಿಸಿಎಚ್ ಕೋರ್ಟ್‌ನಿಂದ ಅನುಮತಿ ಪಡೆದಿದ್ದರು. ಆದರೆ, ಸ್ವಿಟ್ಜರ್‌ಲ್ಯಾಂಡ್ ವೀಸಾ ನಿರಾಕರಿಸಿದ್ದು, 'ಡೆವಿಲ್' ಚಿತ್ರದ ಶೂಟಿಂಗ್ ತಮ್ಮ ಲಕ್ಕಿ ಸ್ಟಾಟ್‌ನಲ್ಲಿ ನಡೆಸಬೇಕು ಎನ್ನುವ ದರ್ಶನ್ ಅವರ ಕನಸು ಭಗ್ನಗೊಂಡಿದೆ.
ಜೈಲಿನಿಂದ ಬಂದ ಮೇಲೆ ಅವರು ಬಹುನಿರೀಕ್ಷಿತ ಸ್ಯಾಂಡಲ್‌ವುಡ್ ಚಿತ್ರ ʼಡೆವಿಲ್ʼ (Devil) ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಇದರ ಚಿತ್ರೀಕರಣಕ್ಕಾಗಿ ದುಬೈ ಮತ್ತು ಯುರೋಪ್‌ಗೆ ಹೋಗಲು ದರ್ಶನ್ ಕೋರ್ಟ್‌ನ ಅನುಮತಿ ಕೇಳಿದ್ದರು. ಇದಕ್ಕೆ 64 ಸಿಸಿಎಚ್ ಕೋರ್ಟ್ ಸಮ್ಮತಿಸಿತ್ತು.
ಆದರೆ ಇದೀಗ ಸ್ವಿಟ್ಜರ್‌ಲ್ಯಾಂಡ್ ವೀಸಾ ನಿರಾಕರಿಸಿದೆ. ಪ್ರಕಾಶ್ ವೀರ್ ನಿರ್ದೇಶನದ ʼಡೆವಿಲ್ʼ ಚಿತ್ರದ ಶೂಟಿಂಗ್ ಬಹುತೇಕ ಅಂತಿಮಗೊಂಡಿದೆ. ಹಾಡಿನ ಚಿತ್ರೀಕರಣವನ್ನು ದರ್ಶನ್ ಲಕ್ಕಿ ಸ್ಟಾಟ್ ಎಂದೇ ಕರೆಯಿಸಿಕೊಳ್ಳುವ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಸಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಇದೀಗ ಈ ಆಸೆಗೆ ತಣ್ಣೀರೆರಚಿದಂತಾಗಿದೆ.
ಥಾಯ್ಲೆಂಡ್ ಗೆ ಹಾರಲು ಯೋಜನೆ
ಇನ್ನು ಸ್ವಿಟ್ಜರ್ಲೆಂಡ್ ವೀಸಾ ನಿರಾಕರಣೆ ಹಿನ್ನಲೆಯಲ್ಲಿ ದರ್ಶನ್ ಮತ್ತು ಡೆವಿಲ್ ಚಿತ್ರ ತಂಡ ಥೈಲ್ಯಾಂಡ್‌ಗೆ ತೆರಳಲು ಯೋಜನೆ ರೂಪಿಸಿದೆ ಎನ್ನಲಾಗಿದೆ. ಈ ಸಂಬಂಧ ಶೂಟಿಂಗ್‌ಗಾಗಿ ತೆರಳಲು ಕೋರ್ಟ್‌ನಲ್ಲಿ ನಟ ದರ್ಶನ್ ಮತ್ತೊಮ್ಮೆ ಅನುಮತಿ ಕೋರಿದ್ದಾರೆ ಎನ್ನಲಾಗಿದೆ. ಜುಲೈ 11ರಿಂದ ತೆರಳಲು ಅನುಮತಿ ಸಿಕ್ಕಿದೆ. ಹೀಗಾಗಿ ದರ್ಶನ್ ಮುಂದಿನ ವಾರ ಥಾಯ್ಲೆಂಡ್‌ನ ಪುಕೆಟ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಲಕ್ಕಿ ಸ್ವಿಸ್
ಅಂದಹಾಗೆ ಸ್ವಿಟ್ಜರ್‌ಲ್ಯಾಂಡ್ ದರ್ಶನ್ ಅಭಿನಯದ ಸಾಕಷ್ಟು ಸಿನಿಮಾಗಳ ಸಾಂಗ್ ಶೂಟಿಂಗ್ ಆಗಿತ್ತು. ಆ ಮೂಲಕ ಅದು ಅವರಿಗೆ ಅದೃಷ್ಟದ ತಾಣ ಎನಿಸಿಕೊಂಡಿತ್ತು. ಆದರೆ ಈ ಬಾರಿ ಲಕ್ ಕೈ ಕೊಟ್ಟಿದ್ದು, ನಟ ದರ್ಶನ್ ಸ್ವಿಟ್ಜರ್ಲ್ಂಡ್ ವೀಸಾ ನಿರಾಕರಣೆಗೊಂಡಿದೆ.