ಬೆಂಗಳೂರು: ಕನ್ನಡದ ನಟ ಪ್ರಥಮ್ ಗೆ ದುಷ್ಕರ್ಮಿಗಳು ಡ್ರ್ಯಾಗರ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಪ್ರಥಮ್ ಮೇಲೆ ರೌಡಿ ಗ್ಯಾಂಗ್ ಒಂದು ಅಟ್ಯಾಕ್ ಮಾಡಲು ಪ್ರಯತ್ನಿಸಿತ್ತು. ಈ ವೇಳೆ ರೌಡಿಗಳ ಜೊತೆ ರಕ್ಷಕ್ ಬುಲೆಟ್ ಸಹ ಇದ್ದ ಎಂದು ಲಾಯರ್ ಜಗದೀಶ್ ಜೊತೆ ಪ್ರಥಮ್ ದೂರವಾಣಿ ಕರೆ ವೇಳೆ ಹೇಳಿದ್ದಾರೆ. ಚಿತ್ರೀಕರಣಕ್ಕೆ ಹೋಗುವ ಮುನ್ನ ನಟ ಪ್ರಥಮ್ ದೊಡ್ಡಬಳ್ಳಾಪುರದ ದೇವಸ್ಥಾನಕ್ಕೆ ತೆರಳಿದ್ದಾಗ ಘಟನೆ ನಡೆದಿದೆ. ಈ ಬಗ್ಗೆ ಪ್ರಥಮ್ ಲಾಯರ್ ಜಗದೀಶ್ ಜೊತೆ ಮಾತನಾಡಿರುವ ಆಡೀಯೋ ವೈರಲ್ ಆಗಿದೆ. ದೊಡ್ಡಬಳ್ಳಾಪುರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಾಸ್ ಆಗುತ್ತಿದ್ದಾಗ ಪ್ರಥಮ್ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಬಲವಂತವಾಗಿ ಕರೆದೊಯ್ದು ನಮ್ಮ ಬಾಸ್ (DBoss) ಬಗ್ಗೆ ಮಾತನಾಡುತ್ತಿಯಾ ಅಂತ ಹಲ್ಲೆಗೆ ಯತ್ನಿಸಿ, ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ದುಷ್ಕರ್ಮಿಗಳು ನನಗೆ ಬೆದರಿಕೆ ಹಾಕುತ್ತಿದ್ದಾಗ ರಕ್ಷಕ್ ಬುಲೆಟ್ ಸಹ ಆ ಗ್ಯಾಂಗ್ ಜೊತೆ ಇದ್ದ ಎಂದು ಪ್ರಥಮ್ ಹೇಳಿದ್ದಾರೆ.