ಬೆಂಗಳೂರು: ನಟ ದರ್ಶನ್ ಅಭಿಮಾನಿಗಳು ಮತ್ತು ನಟ ಪ್ರಥಮ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಸ್ವತಃ ನಟ ದರ್ಶನ್ ಬಂದು ಹೇಳಿಕೆ ನೀಡುವವರೆಗೂ ನಾನು ಒಂದು ತೊಟ್ಟು ನೀರೂ ಕುಡಿಯುವುದಿಲ್ಲ ಎಂದು ನಟ ಪ್ರಥಮ್ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ದರ್ಶನ್ ಅಭಿಮಾನಿಗಳಿಂದ ಹಲ್ಲೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟ ಪ್ರಥಮ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ವಾಕ್ಸಮರ ಮುಂದುವರೆದಿದೆ.
ತಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದರೆ ಪ್ರಥಮ್ ಏಕೆ ಪೊಲೀಸ್ ದೂರು ನೀಡಲಿಲ್ಲ ಎಂದು ದರ್ಶನ್ (Darashan) ಅವರ ಫ್ಯಾನ್ ಪೇಜ್ D Company Fans Association ಪ್ರಶ್ನೆ ಮಾಡಿತ್ತು.
ಈ ಬೆಳವಣಿಗೆ ಬೆನ್ನಲ್ಲೇ ನಟ ಪ್ರಥಮ್ ಅವರು ದರ್ಶನ್ ಅಭಿಮಾನಿಗಳ ವಿರುದ್ಧ ತಿರುಗಿ ಬಿದ್ದಿದ್ದು, ತಮ್ಮ ಮೇಲಿನ ಹಲ್ಲೆ ವಿಚಾರವಾಗಿ ಇಂದು ಪ್ರಥಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ಅಲ್ಲದೆ ಪುಂಡಾಭಿಮಾನಿಗಳ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಪ್ರಥಮ್ ಗೆ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರಕಾಶ್ ಸಾಥ್ ನೀಡಿದ್ದಾರೆ.
ಬೆಂಗಳೂರು ಗ್ರಾಮಂತರ ಎಸ್ಪಿ ಕಚೇರಿ ಎದುರು ಪ್ರಥಮ್ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇದು ನನ್ನ ಜೀವನದ ಬಹಳ ದೊಡ್ಡ ನಿರ್ಧಾರ. ನಟ ದರ್ಶನ್ ಬಂದು ಹೇಳಿಕೆ ನೀಡುವ ತನಕ ತಾವು ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಪ್ರಥಮ್, 'ಚಿತ್ರರಂಗದ ಒಳಿತಿಗಾಗಿ, ಟ್ರೋಲ್ ವಿರುದ್ಧ ಹೋರಾಡಲು ತಾವು ಆಮರಣಾಂತ ಉಪವಾಸ ಸತ್ಯಾಗ್ರಹ (Hunger Strike) ಮಾಡುತ್ತಿದ್ದೇನೆ. ದರ್ಶನ್ ಬಂದು ಹೇಳಿಕೆ ನೀಡುವ ತನಕ ಉಪವಾಸ ಮುಂದುವರಿಸುತ್ತೇನೆ. ಇವತ್ತಿನಿಂದ ನಾನು ಇಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇನೆ. ಒಂದು ಹನಿ ನೀರು ಕೂಡ ಕುಡಿಯುತ್ತಿಲ್ಲ. ಯಾಕೆಂದರೆ, ಇದರ ಹಿಂದೆ ಇರುವವರು ಬಂದು ತನಿಖೆ ಮಾಡಬೇಕು. ದರ್ಶನ್ ಸರ್ ಬಂದು ಇಲ್ಲಿ ಹೇಳಿಕೆ ನೀಡಬೇಕು. ಇನ್ನೊಂದು ಸಲ ಪ್ರಥಮ್ ಸಹವಾಸಕ್ಕೆ ನಮ್ಮ ಫ್ಯಾನ್ಸ್ ಬರಲ್ಲ ಅಂತ ಅವರು ಹೇಳಬೇಕು ಎಂದಿದ್ದಾರೆ.
ಅಲ್ಲದೆ, 'ದರ್ಶನ್ ಬರುವ ತನಕ ಆಮರಣಾಂತ ಉಪವಾಸ ಸತ್ಯಾಗ್ರಹ. ಪ್ರಥಮ್ ಸತ್ತರೆ ಸಾಯ್ತಾನೆ ಎಂದರೆ ಸಾಯಲಿ ಬಿಡಿ. ಯಾರು ಏನೂ ಮಾಡೋಕೆ ಆಗಲ್ಲ. ನಾನು ಒಬ್ಬ ಸಾಯೋದರಿಂದ ಚಿತ್ರರಂಗಕ್ಕೆ ಒಳ್ಳೆಯದು ಆಗುತ್ತದೆ ಎಂದರೆ ಆಗಲಿ ಬಿಡಿ ಎಂದರು.
ನನಗೆ ಮಾತ್ರವಲ್ಲ ಸುದೀಪ್, ಯಶ್, ಗಣೇಶ್, ಪುನೀತ್, ಅಶ್ವಿನಿ ಪುನೀತ್ ರಾಜ್ಕುಮಾರ್ ಬಗ್ಗೆ ಯಾರಾದ್ರೂ ಟ್ರೋಲ್ ಮಾಡಿದರೆ ಚೆನ್ನಾಗಿ ಇರಲ್ಲ. ಮುಂದೆ ಚಿತ್ರರಂಗ ಚೆನ್ನಾಗಿ ಇರಬೇಕು ಎಂದರೆ ನಾನು ಇವತ್ತು ಉಪವಾಸ ಕುಳಿತುಕೊಳ್ಳುತ್ತೇವೆ. ನೀವು (ದರ್ಶನ್) ಇಲ್ಲಿ ಬಂದು ಹೇಳಿಕೆ ನೀಡಬೇಕು.
ನೀವು ಮಾಡಿಸಿದ್ದೀರಿ ಅಂತ ನಾನು ಹೇಳಲ್ಲ. ನಿಮ್ಮ ಜೊತೆ ಬ್ಯಾರಕ್ನಲ್ಲಿ ಇದ್ದವರು ಇದರಲ್ಲಿ ಭಾಗಿ ಆಗಿದ್ದಾರೆ ಎಂದರೆ ನೀವು ಎಲ್ಲವನ್ನೂ ನೋಡಿಕೊಂಡು ಮಜಾ ತೆಗೆದುಕೊಳ್ಳುವುದಲ್ಲ. ನಿಮ್ಮ ಬ್ಯಾರಕ್ನಲ್ಲಿ ಇದ್ದವರು ನನಗೆ ವೆಪನ್ ತೋರಿಸಿದ್ದಾರೆ ಎಂದರೆ ನೀವು ಬಂದು ಉತ್ತರ ನೀಡಬೇಕು’ ಎಂದು ಪ್ರಥಮ್ ಕಿಡಿಕಾರಿದರು.
ಇದೇ ವೇಳೆ ಕೆಲವು ಫೇಕ್ ಸೋಶಿಯಲ್ ಮೀಡಿಯಾ ಪೇಜ್ಗಳು ಇವೆ. ಡಿ ಡುಬಾಕ್ ನನ್ ಮಕ್ಕಳದ್ದು. 150-200 ಪೇಜ್ಗಳಲ್ಲಿ ಟ್ರೋಲ್ ಮಾಡಿಸುತ್ತಾ ಇದ್ದೀರಿ. ಅಷ್ಟೂ ಪೇಜ್ಗಳು ಡಿಲೀಟ್ ಆಗಬೇಕು’ ಎಂದು ಪ್ರಥಮ್ ಅವರು ಬೇಡಿಕೆ ಇಟ್ಟಿದ್ದಾರೆ.