D'ubak Company: ದರ್ಶನ್ ಅಭಿಮಾನಿಗಳೊಂದಿಗೆ ಪ್ರಥಮ್ ಟ್ವೀಟ್ ವಾರ್; 'ಏನೋ ಆಗುತ್ತೆ ಕಾಯ್ತಿರಿ' ಎಂದ 'ಒಳ್ಳೆ ಹುಡ್ಗ'

ದರ್ಶನ್‌ ಅಭಿಮಾನಿಗಳಿಂದ ಹಲ್ಲೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟ ಪ್ರಥಮ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ವಾಕ್ಸಮರ ಮುಂದುವರೆದಿದೆ.
Actor Pratham again critisizes Actor Darshan Fans
ನಟ ಪ್ರಥಮ್ ಮತ್ತು ಡಿ ಕಂಪನಿ ಫಾನ್ಸ್ ಟ್ವೀಟ್ ವಾರ್
Updated on

ಬೆಂಗಳೂರು: ನಟ ದರ್ಶನ್ ಅಭಿಮಾನಿಗಳು ನಟ ಪ್ರಥಮ್ ನಡುವಿನ ಸಂಘರ್ಷ ಮತ್ತೆ ಮುಂದುವರೆದಿದ್ದು, ಈ ಬಾರಿ ನಟ ಪ್ರಥಮ್ ನಾಳೆ ವರೆಗೂ ಕಾಯ್ತಿರಿ ಎಂದು ನೇರವಾಗಿಯೇ ಖಡಕ್ ಸಂದೇಶ ನೀಡಿದ್ದಾರೆ.

ದರ್ಶನ್‌ ಅಭಿಮಾನಿಗಳಿಂದ ಹಲ್ಲೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟ ಪ್ರಥಮ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ವಾಕ್ಸಮರ ಮುಂದುವರೆದಿದೆ. ತಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದರೆ ಪ್ರಥಮ್ ಏಕೆ ಪೊಲೀಸ್ ದೂರು ನೀಡಲಿಲ್ಲ ಎಂದು ದರ್ಶನ್‌ (Darashan) ಅವರ ಫ್ಯಾನ್‌ ಪೇಜ್‌ D Company Fans Association ಪ್ರಶ್ನೆ ಮಾಡಿದೆ.

ಈ ಕುರಿತು ಪೋಸ್ಟ್ ಮಾಡಿರುವ D Company Fans Association, 'ಪ್ರಥಮ್ ಮೇಲೆ ಹಲ್ಲೆ ಪ್ರಕರಣ ಸತ್ಯ ಹೊರ ಬಂದಿದೆ. ರೌಡಿಗಳ ಜೊತೆ ಹೋಗಿ ಅವರ ಕಾರ್ಯಕ್ರಮದಲ್ಲಿ ಅವರ ಹತ್ತಿರನೇ ತಿಂದು ಅವರಿಗೆ ರೇಗಿಸಿ ಬ್ರೆಡ್ ಚಿಪ್ಸ್ ಕೇಳಿ ಖಾರ ಬನ್‌ ತಿಂದ ಪ್ರಕರಣವಿದು, ನಮ್ಮ ಪ್ರಶ್ನೆ ದರ್ಶನ ಅವರು ಜೈಲಲ್ಲಿ ಇದ್ದಾಗ ಅಭಿಮಾನಿಗಳಿಗೆ ಪ್ರಚೋದನೆ ಹೇಳಿಕೆ ನೀಡಿ ಕಾಮೆಂಟ್ ಮಾಡಿದವರ ವಿರುದ್ಧ ಸಾಲು ಸಾಲು ದೂರು ದಾಖಲಿಸಿದ ಕುತಂತ್ರಿಗೆ ?

ಹಲ್ಲೆ ನಡೆದರೂ ದೂರು ನೀಡಿದಷ್ಟು ಒಳ್ಳೆ ಮನಸ್ಸು ಇದೆಯಾ? ಕಾರಣ ಇಷ್ಟೇ ಅಂದು ಪೊಲೀಸ್ ದೂರು ನೀಡಲು ವೈದ್ಯರ ವರದಿ ಬೇಕು. ಸರ್ಕಾರಿ ಆಸ್ಪತ್ರೆಗೆ ಹೋದರೆ ವೈದ್ಯರ ಪರೀಕ್ಷೆಯಲ್ಲಿ ಕುಡಿದಿರುವುದು. ಬೆಳಕಿಗೆ ಬರುತ್ತದೆ ಕುಡುಕರ ಗಲಾಟೆ ಎಂದು ವರದಿ ನೀಡುತ್ತಾರೆ ಎರಡು ಮೂರು ದಿನ ಕಳೆದರೆ ಸತ್ಯ ಯಾರಿಗೂ ತಿಳಿಯುವುದಿಲ್ಲ.

Actor Pratham again critisizes Actor Darshan Fans
ರಮ್ಯಾ ವಿರುದ್ಧ ಕಾನೂನು ಸಮರಕ್ಕಿಳಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ: ದೂರು ಕೊಡಲು ಮುಂದು!

ಇದು ನಿಮ್ಮ ಗೇಮ್ ಹಾಗೂ ನಿಮಗೆ ಪ್ರೋತ್ಸಾಹ ಧನ ಸಹಾಯ ಮಾಡುವವರ ಹುನ್ನಾರ ಹೇಗಿದ್ರು ನೀವು ನಿರ್ದೇಶಕರು ಅಲ್ಲವೇ ಸ್ವಾಮಿ ಕಥೆ ಚಿತ್ರಕಥೆ ಸಂಭಾಷಣೆ ಚೆನ್ನಾಗಿ ರಚನೆ ಮಾಡಿದ್ದೀರಿ ರೌಡಿಗಳ ಕಾರ್ಯಕ್ರಮದಲ್ಲಿ ನಿಮಗೆ ಏನು ಕೆಲಸ ? ನೀವು ಸಭ್ಯರು ತಾನೆ ರೌಡಿಗಳು ಅಂತ ತಿಳಿದ ಕೂಡಲೇ ಕಾರು ಹತ್ತಿ ಹೋಗಬೇಕಿತ್ತು ಅವರ ಜೊತೆ ಸಮಯ ಕಳೆದು ಮತ್ತಿನಲ್ಲಿ ಮಾಡಿಕೊಂಡ ಎಡ್ಡವಟಿಗೆ ಬಾಸ್ ಹೆಸರು ತಳುಕು ಯಾಕೆ? ದರ್ಶನ್ ಅವರ ಅಧಿಕೃತ ಸಂಘಟನೆಗಳು ನೂರಾರಿವೆ? ರಿಜಿಸ್ಟರ್ ಪಟ್ಟಿ ನಮ್ಮತ್ರ ಇದೆ ನಮ್ಮ ಸಂಘದ ಸದಸ್ಯರು?

ಪದಾಧಿಕಾರಿಗಳು ಯಾರಾದ್ರೂ ಬೆದರಿಕೆ ಹಾಕಿದರೆ ಹೇಳಿ ಸ್ವಾಮಿ ಪ್ರೈವೇಟ್‌. ತೋಟದಲ್ಲಿ ಅಮಲಿನ ನಡೆದ ಜಗಳಕ್ಕೆ ನಮ್ಮ ನಟ ಆಗಲಿ ನಮ್ಮ ಅಭಿಮಾನಿಗಳು ಆಗಲಿ ಹೊಣೆ ಯಾಕೆ ಸ್ವಾಮಿ ? ಗೂಂಡಾಗಳನ್ನು ಸಾಕಬೇಡಿ ಮನೆಯಲ್ಲಿ ನಾಯಿ ಸಾಕಿ ಅಂದ ನಟನಿಗೆ ಸಿನಿಮಾ ಪ್ರಚಾರಕ್ಕೆ ದುಡಿಲ್ಲ ಅಂದರೆ ಹೇಳಿ ದರ್ಶನ್ ಅಣ್ಣ ಫೀಸ್ ನಿಮ್ಮ ಮನೆ ನಾಯಿಗೆ ಹಾಕುವ ಊಟದಲ್ಲಿ ಚೂರು ಹಾಕಿ ನಮ್ಮ ಪ್ರಶ್ನೆ ದರ್ಶನ ಅವರು ಜೈಲಲ್ಲಿ ಇದ್ದಾಗ ಅಭಿಮಾನಿಗಳಿಗೆ ಪ್ರಚೋದನೆ ಹೇಳಿಕೆ ನೀಡಿ ಕಾಮೆಂಟ್ ಮಾಡಿದವರ ವಿರುದ್ಧ ಸಾಲು ಸಾಲು ದೂರು ದಾಖಲಿಸಿದ ಕುತಂತ್ರಿಗೆ? ಹಲ್ಲೆ ನಡೆದರೂ ದೂರು ನೀಡಿದಷ್ಟು ಒಳ್ಳೆ ಮನಸ್ಸು ಇದೆಯಾ? ಎಂದು ಟ್ವೀಟ್ ಮಾಡಿದೆ.

Actor Pratham again critisizes Actor Darshan Fans
ಬೆಂಗಳೂರು: ದರ್ಶನ್ ಫ್ಯಾನ್ಸ್ ವಿರುದ್ಧ ಪೊಲೀಸ್ ಆಯುಕ್ತರಿಗೆ ನಟಿ ರಮ್ಯಾ ದೂರು; ಅತ್ಯಾಚಾರ, ಜೀವ ಬೆದರಿಕೆ ಟ್ರೋಲ್ ವಿರುದ್ಧ ಕಿಡಿ

ಇದಕ್ಕೆ ತಿರುಗೇಟು ನೀಡಿರುವ ನಟ ಪ್ರಥಮ್, 'ನಾಳೆ ದೊಡ್ಡದಾಗಿ ಅಗುತ್ತೆ! ತುಂಬಾ ದೊಡ್ಡ ನಿರ್ಧಾರ! ನೀವೆಲ್ಲರೂ ನೀವು ಇಷ್ಟ ಪಡೋ ನಟರನ್ನ ಬೀದಿಗೆ ನಿಲ್ಲಿಸ್ತಾ ಇದೀರಾ! ನಾಳೆ ನೋಡ್ತೀರಿ ಏನಾಗುತ್ತೆ ಅಂತ! D company, fans pages ನಿಮ್ಗೇನೂ ಪ್ರಾಬ್ಲಮ್ ಇರಲ್ಲ ಆರಾಮಾಗಿರಿ! ನಾಳೆ ಏನೋ ಆಗುತ್ತೆ ಕಾಯ್ತಿರಿ (paid fansಗಳ) ನಿಮ್ಮ ಹೀರೋನ ನೀವೇ ಬೀದಿಗೆ ತರ್ತಾ ಇದೀರಾ! ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ, 'Morning ತನಕ time ಇದೆ! ಸುಳ್ಳು ಸುದ್ಧಿ ನಿಲ್ಲಿಸಿದ್ರೆ ಸರಿ!ನಾಳೆ ಅಧಿಕೃತವಾಗಿ SP ತಪ್ಪು ಮಾಡಿದವರ ಮೇಲೆactionತಗೊಳೋ ತನಕ ಸುಮ್ಮನಿದ್ರೆ ಸರಿ! ನಾನು ಸುಮ್ಮನಿದ್ರೂsocial mediaಲಿ ಏನೇನೋ ಹಾಕ್ತಿದೀರಾ! ಹೀಗೇ ಸುಳ್ಳು ಸುದ್ಧಿ ಹಬ್ಬಿಸ್ತಾ ಇದ್ರೆ ಯಾವ ನಟರcompany ಆ ನಟರ ಮೇಲೆ FIR ಮಾಡ್ತೀನಿ;

ನನ್ನ ಪಾಡಿಗೆ ಸುಮ್ನೆ ಬಿಟ್ಟುಬಿಡಿ! ನೋಡ್ರಪ್ಪ ರಾಷ್ಟ್ರೀಯ ತನಿಖಾ ಸಂಸ್ಥೆ NIA, interpoleಗಿಂತಲೂ ದೊಡ್ಡ ತನಿಖಾ ಸಂಸ್ಥೆ ಈ ಬೇವರ್ಸಿಗಳ D company. ಥೂ ನಿನ್ third class ಜನ್ಮಕ್ಕಿಷ್ಟು! ಚಿಪ್ಸು, ಪಪ್ಸು ತಿನ್ನೋಕೆ ರೌಡಿ ಹತ್ತಿರ ಹೋಗಿದ್ನಂತೆ ನಾನು..enquiry ಮಾಡೋರಂತೆ. Education important; ನಾಳೆ SP ನಿಮಗೆ ಅಧಿಕೃತ ಕಾರಣ ಏನಾಯ್ತು ಅಂತ ಹೇಳ್ತಾರೆ!ಕಾಯಿರಿ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com