ಕೊಲೆಯಾದ ರಾಜಾ ರಘುವಂಶಿ ಹಾಗೂ ಪತ್ನಿ ಸೋನಂ 
ಸಿನಿಮಾ ಸುದ್ದಿ

"ಹನಿಮೂನ್ ಇನ್ ಶಿಲ್ಲಾಂಗ್": ರಾಜಾ ರಘುವಂಶಿ ಹತ್ಯೆ ಕುರಿತು ಸಿನಿಮಾ; ಸಂಬಂಧಿಕರ ಒಪ್ಪಿಗೆ

ಎಸ್‌ಪಿ ನಿಂಬವತ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ತಾತ್ಕಾಲಿಕವಾಗಿ "ಹನಿಮೂನ್ ಇನ್ ಶಿಲ್ಲಾಂಗ್" ಎಂದು ಹೆಸರಿಡಲಾಗಿದೆ.

ಮೇಘಾಲಯಕ್ಕೆ ಹನಿಮೂನ್ ಹೋಗಿದ್ದಾಗ ಪತ್ನಿಯಿಂದ ಹತ್ಯೆಗೀಡಾದ ಇಂದೋರ್‌ ಮೂಲದ ಉದ್ಯಮಿ ರಾಜಾ ರಘುವಂಶಿ ಅವರ ಕುಟುಂಬ ಸದಸ್ಯರು, ಪತ್ನಿ ಸೋನಮ್ ಮತ್ತು ಆಕೆಯ ಶಂಕಿತ ಪ್ರೇಮಿಯ ಬಂಧನದ ನಂತರ ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಅಪರಾಧ ಕೃತ್ಯದ ಕುರಿತ ಸಿನಿಮಾ ಮಾಡಲು ಒಪ್ಪಿಗೆ ನೀಡಿದ್ದಾರೆ.

ಎಸ್‌ಪಿ ನಿಂಬವತ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ತಾತ್ಕಾಲಿಕವಾಗಿ "ಹನಿಮೂನ್ ಇನ್ ಶಿಲ್ಲಾಂಗ್" ಎಂದು ಹೆಸರಿಡಲಾಗಿದೆ.

"ಕೊಲೆ ಪ್ರಕರಣದ ಕುರಿತು ಸಿನಿಮಾಗೆ ನಾವು ಒಪ್ಪಿಗೆ ನೀಡಿದ್ದೇವೆ. ನನ್ನ ಸಹೋದರನ ಕೊಲೆಯ ಕಥೆಯನ್ನು ದೊಡ್ಡ ಪರದೆಯ ಮೇಲೆ ತರದಿದ್ದರೆ, ಯಾರು ಸರಿ ಮತ್ತು ಯಾರು ತಪ್ಪು ಎಂದು ಜನರಿಗೆ ತಿಳಿಯಲು ಸಾಧ್ಯವಾಗುವುದಿಲ್ಲ ಎಂದು ನಾವು ನಂಬಿದ್ದೇವೆ" ಎಂದು ರಘುವಂಶಿ ಅವರ ಹಿರಿಯ ಸಹೋದರ ಸಚಿನ್ ವರದಿಗಾರರಿಗೆ ತಿಳಿಸಿದ್ದಾರೆ.

ರಾಜಾ ರಘುವಂಶಿಗೆ ದೊಡ್ಡ ದ್ರೋಹ ಮಾಡಲಾಗಿದೆ. ನಮ್ಮ ಚಿತ್ರದ ಮೂಲಕ, ಅಂತಹ ದ್ರೋಹದ ಘಟನೆಗಳನ್ನು ನಿಲ್ಲಿಸಬೇಕು ಎಂಬ ಸಂದೇಶವನ್ನು ನಾವು ಸಾರ್ವಜನಿಕರಿಗೆ ನೀಡಲು ಬಯಸುತ್ತೇವೆ" ಎಂದು ನಿರ್ದೇಶಕ ನಿಂಬವತ್ ಹೇಳಿದ್ದಾರೆ.

ನಟರ ಹೆಸರುಗಳನ್ನು ಬಹಿರಂಗಪಡಿಸದೆ, ಚಿತ್ರದ ಸ್ಕ್ರಿಪ್ಟ್ ಸಿದ್ಧವಾಗಿದೆ ಎಂದು ನಿಂಬವತ್ ತಿಳಿಸಿದರು.

"ಚಿತ್ರದ ಚಿತ್ರೀಕರಣವೂ ಶೇ 80 ರಷ್ಟು ಇಂದೋರ್‌ನಲ್ಲಿ ಮತ್ತು ಉಳಿದ ಶೇ. 20 ರಷ್ಟು ಮೇಘಾಲಯದ ವಿವಿಧ ಪ್ರದೇಶಗಳಲ್ಲಿ ನಡೆಯಲಿದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬಿಹಾರ ಚುನಾವಣೆಗೆ ಮುಹೂರ್ತ ಫಿಕ್ಸ್: 2 ಹಂತದಲ್ಲಿ ಮತದಾನ; ನ.14ಕ್ಕೆ ಫಲಿತಾಂಶ ಪ್ರಕಟ!

Kannada Biggbossಗೆ ಸಂಕಷ್ಟ: ಕೂಡಲೇ ಬಿಗ್‌ಬಾಸ್‌ ಮನೆಯನ್ನು ಬಂದ್ ಮಾಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್

CJI ಬಿಆರ್ ಗವಾಯಿಯತ್ತ 'ಶೂ' ಎಸೆತ: ಇದು ಕೇವಲ ಅವರ ಮೇಲಿನ ಹಲ್ಲೆಯಷ್ಟೇ ಅಲ್ಲ...: ಸೋನಿಯಾ ಗಾಂಧಿ

ಕೆಮ್ಮಿನ ಸಿರಪ್ ನಿಂದ ಮಕ್ಕಳ ಸಾವು: ಮಧ್ಯಪ್ರದೇಶ ಔಷಧ ನಿಯಂತ್ರಕರ ವರ್ಗಾವಣೆ, ಮೂವರಿಗೆ ಅಮಾನತು ಶಿಕ್ಷೆ

Bar Council: ಸುಪ್ರೀಂ ನಲ್ಲಿ CJI ಮೇಲೆ 'ಶೂ' ಎಸೆತ: ವಕೀಲ ರಾಕೇಶ್ ಕಿಶೋರ್ ಅಮಾನತುಪಡಿಸಿದ ಬಾರ್ ಕೌನ್ಸಿಲ್!

SCROLL FOR NEXT