ಡೆವಿಲ್ ಚಿತ್ರದ ಹೊಸ ಪೋಸ್ಟರ್ 
ಸಿನಿಮಾ ಸುದ್ದಿ

'ಡೆವಿಲ್' ಮಾತಿನ ಭಾಗದ ಚಿತ್ರೀಕರಣ ಪೂರ್ಣ: ಕನ್ವರ್‌ ಲಾಲ್ ಗೆಟಪ್ ನಲ್ಲಿ ನಟ ದರ್ಶನ್!

ಪ್ರಕಾಶ್ ವೀರ್ ನಿರ್ದೇಶಿಸಿ ಬರೆದಿರುವ 'ಡೆವಿಲ್' ಚಿತ್ರವನ್ನು ಬೆಂಗಳೂರು ಮತ್ತು ರಾಜಸ್ಥಾನದಾದ್ಯಂತ ಚಿತ್ರೀಕರಿಸಲಾಗಿದೆ., ನಗರ ವೈಭವ ಮತ್ತು ಹಳ್ಳಿಗಾಡಿನ ಸೊಬಗನ್ನು ಸೆರೆಹಿಡಿಯಲಾಗಿದೆ.

ಸ್ಯಾಂಡಲ್​​​​​ವುಡ್​ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ "ದಿ ಡೆವಿಲ್ ಪೋಸ್ಟರ್​​, ಟೀಸರ್​ನಿಂದಲೇ ಸಖತ್​ ಸದ್ದು ಮಾಡುತ್ತಿದೆ. ಶ್ರೀ ಜೈ ಮಾತಾ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಭರ್ಜರಿಯಾಗಿ ತಯಾರಾಗುತ್ತಿರುವ ಚಿತ್ರದ ಮಾತಿನ ಭಾಗದ ಶೂಟಿಂಗ್ ಪೂರ್ಣಗೊಂಡಿದೆ.

ನಿರ್ಮಾಪಕರು ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ, ಇದು ದರ್ಶನ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ನಟ ಅಂಬರೀಶ್ ಅವರ 'ಅಂತ' ಚಿತ್ರದ 'ಕನ್ವರ್‌ಲಾಲ್' ನೆನಪಿಸುವ ಲುಕ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ.

ಪ್ರಕಾಶ್ ವೀರ್ ನಿರ್ದೇಶಿಸಿ ಬರೆದಿರುವ 'ಡೆವಿಲ್' ಚಿತ್ರವನ್ನು ಬೆಂಗಳೂರು ಮತ್ತು ರಾಜಸ್ಥಾನದಾದ್ಯಂತ ಚಿತ್ರೀಕರಿಸಲಾಗಿದೆ. ನಗರ ವೈಭವ ಮತ್ತು ಹಳ್ಳಿಗಾಡಿನ ಸೊಬಗನ್ನು ಸೆರೆಹಿಡಿಯಲಾಗಿದೆ. ನಿರ್ಣಾಯಕ ಭಾಗಗಳನ್ನು ಚಿತ್ರೀಕರಿಸಲು ತಂಡವು ವಿದೇಶಕ್ಕೆ ತೆರಳಲಿದೆ ಮತ್ತು ಶೀಘ್ರದಲ್ಲೇ ಡಬ್ಬಿಂಗ್ ಪ್ರಾರಂಭಿಸಲಿದೆ. ಈ ಚಿತ್ರದಲ್ಲಿ ದರ್ಶನ್ ಗೆ ರಚನಾ ರೈ ಜೋಡಿಯಾಗಿದ್ದಾರೆ, ಮಹೇಶ್ ಮಂಜ್ರೇಕರ್ ಖಳನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತುಳಸಿ, ಅಚ್ಯುತ್ ಕುಮಾರ್, ಶ್ರೀನಿವಾಸ್ ಪ್ರಭು ಮತ್ತು ಶೋಭ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಸುಧಾಕರ್ ಎಸ್ ರಾಜ್ ಛಾಯಾಗ್ರಹಣದೊಂದಿಗೆ, ಬಿ ಅಜನೀಶ್ ಲೋಕನಾಥ್ ಡೆವಿಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಮತ್ತು ರಾಮ್-ಲಕ್ಷ್ಮಣ್ ಸಾಹಸ ನೃತ್ಯ ನಿರ್ದೇಶನ ಮಾಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟರ್​​ಗೆ ದರ್ಶನ್​​ ಫ್ಯಾನ್ಸ್​​ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!