ಅಭಿಮಾನಿಗಳಿಂದ ರಾಕಿಂಗ್ ಸ್ಟಾರ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಕೆಜಿಎಫ್ ಸ್ಟಾರ್ ಯಶ್, ವೈಯಕ್ತಿಕ ಜೀವನದಲ್ಲಿ ತಂದೆ-ತಾಯಿಗೆ ಒಳ್ಳೆಯ ಮಗನಾಗಿ, ಪತ್ನಿಗೆ ಪ್ರೀತಿಯ ಗಂಡನಾಗಿ, ಮಕ್ಕಳಿಗೆ ಉತ್ತಮ ತಂದೆಯಾಗಿ ಕೂಡ ಕರ್ತವ್ಯ ನಿಭಾಯಿಸುತ್ತಿದ್ದಾರೆ.
ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಮತ್ತು ರಾಮಾಯಣ: ಪಾರ್ಟ್ ಒನ್ ನಂತಹ ಬಹು ನಿರೀಕ್ಷಿತ ಚಿತ್ರಗಳ ಶೂಟಿಂಗ್ ಬ್ಯುಸಿ ಮಧ್ಯೆ, ಅವರು ತಮ್ಮ ಕುಟುಂಬಕ್ಕೆ ಆದ್ಯತೆ ನೀಡುವುದನ್ನು ಎಂದಿಗೂ ಮರೆತಿಲ್ಲ. ಈ ವರ್ಷದ ತಂದೆಯ ದಿನಕ್ಕೆ ಯಶ್ ಅವರ ಪತ್ನಿ, ನಟಿ ರಾಧಿಕಾ ಪಂಡಿತ್, ಯಶ್ ಮತ್ತು ಮಕ್ಕಳ ವಿಶೇಷ ವಿಡಿಯೊ ಶೇರ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ತಂದೆ-ಮಕ್ಕಳ ಸುಂದರ ಕ್ಷಣ ಸೆರೆಹಿಡಿಯಲಾಗಿದೆ. ಇದರಲ್ಲಿ ಯಶ್ ತಾಳ್ಮೆಯಿಂದ ಮಕ್ಕಳಿಗೆ ಪಲ್ಟಿ ಹೊಡೆಯುವುದನ್ನು ಕಲಿಸುತ್ತಿದ್ದಾರೆ, ಸ್ಪೈಡರ್ ಮ್ಯಾನ್ ಉಡುಪನ್ನು ಧರಿಸಿದ ವ್ಯಕ್ತಿ ಯಶ್ ಜೊತೆ ಸೇರಿ ಸಮರ್ ಸಾಲ್ಟ್ ಮಾಡುತ್ತಿದ್ದಾರೆ.
ರಾಧಿಕಾ ಈ ವಿಡಿಯೋವನ್ನು " ಮಕ್ಕಳಿಗಾಗಿ ತನ್ನ ಪ್ರಪಂಚವನ್ನು ತಲೆಕೆಳಗಾಗಿ ಮಾಡುವ ವಿಶ್ವದ ಅತ್ಯುತ್ತಮ ತಂದೆಗೆ ತಂದೆ ದಿನಾಚರಣೆಯ ಶುಭಾಶಯಗಳು!" ಎಂಬ ಶೀರ್ಷಿಕೆಯೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.