ನಟಿ ಆಲಿಯಾ ಭಟ್ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

Sandalwood ನತ್ತ Alia Bhat?: ಕನ್ನಡ ಚಿತ್ರರಂಗದ ಬಗ್ಗೆ ಹೇಳಿದ್ದೇನು?

ಕರ್ನಾಟಕದಿಂದ ಹೊರಬರುವ ಕಥೆ ಹೇಳುವಿಕೆ ಮತ್ತು ಸೃಜನಶೀಲತೆಯನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ.

ಬೆಂಗಳೂರು: "ಸ್ಟೂಡೆಂಟ್ ಆಫ್ ದಿ ಇಯರ್" ಚಿತ್ರದ ಮೂಲಕ ಭಾರತೀಯ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ ಆಲಿಯಾ ಭಟ್ ಇತ್ತೀಚೆಗೆ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದರು.

ಇತ್ತೀಚೆಗೆ ನಟಿ ಆಲಿಯಾ ಭಟ್ ಆರಂಭಿಸಿರುವ ಉಪಕ್ರಮ Ed-a-Mamma ಗಾಗಿ ಆಲಿಯಾ ಭಟ್ ಬೆಂಗಳೂರಿಗೆ ಆಗಮಿಸಿದ್ದರು. ಇಲ್ಲಿ ರಿಲಯನ್ಸ್ ರಿಟೇಲ್ ಜೊತೆಗಿನ ಪಾಲದಾರಿಕೆ ಮೂಲಕ ತಮ್ಮ ಮೊದಲ ಅಂಗಡಿ ತೆರೆದಿದ್ದಾರೆ. ಇದು ಮಕ್ಕಳು ಮತ್ತು ತಾಯಂದಿರಿಗಾಗಿ ಸುಸ್ಥಿರ ಬಟ್ಟೆ ಬ್ರಾಂಡ್ ಅನ್ನು ಪ್ರಾರಂಭಿಸುವ ಅವರ ಉಪ ಕ್ರಮವಾಗಿದೆ.

ಈ ವೇಳೆ ಮಾತನಾಡಿದ ಆಲಿಯಾ, ತಮ್ಮ ಈ ಉಪ ಕ್ರಮವು ಮತ್ತೊಂದು ಬ್ರ್ಯಾಂಡ್‌ಗಿಂತ ಹೆಚ್ಚಿನದಾಗುತ್ತದೆ ಎಂದು ನಾನು ಭಾವಿಸುತ್ತೇನೆ; ಇದು ಚಿಂತನಶೀಲ, ಸುಸ್ಥಿರ ಜೀವನದ ಕುರಿತು ನಗರದ ದೊಡ್ಡ ಸಂಭಾಷಣೆಯ ಭಾಗವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಂತೆಯೇ ಓರ್ವ ನಟಿಯಾಗಿ, ತಾಯಿಯಾಗಿ, ಗಾಯಕಿಯಾಗಿ ಮತ್ತು ಉದ್ಯಮಿಯಾಗಿ ಅನೇಕ ಸವಾಲುಗಳನ್ನು ಸ್ವೀಕರಿಸಲು ನಾನು ಸಿದ್ಧಳಾಗಿದ್ದೇನೆ. ಇದು ನನಗೆ ದೊಡ್ಡ ಸವಾಲಿನ ಸಮಯ. ಅದು ಎಂದಿಗೂ ಸಾಕಾಗುವುದಿಲ್ಲ! ಆದರೆ ನಾನು ಈ ಸಮಯದಲ್ಲಿ ಏನು ಮಾಡುತ್ತಿದ್ದರೂ ಅದರಲ್ಲಿ ಆದ್ಯತೆ ನೀಡಲು ಮತ್ತು ಸಂಪೂರ್ಣವಾಗಿ ಇರಲು ಕಲಿಯುತ್ತಿದ್ದೇನೆ" ಎಂದು ಹೇಳಿದರು.

ಸ್ಯಾಂಡಲ್ ವುಡ್ ಗೆ ಎಂಟ್ರಿ?

ಇದೇ ವೇಳೆ ಕನ್ನಡದಲ್ಲಿ ಚಿತ್ರ ಮಾಡುವ ಕುರಿತು ಮಾತನಾಡಿದ ಆಲಿಯಾ, 'ಕರ್ನಾಟಕದಿಂದ ಹೊರಬರುವ ಕಥೆ ಹೇಳುವಿಕೆ ಮತ್ತು ಸೃಜನಶೀಲತೆಯನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ. ನಟಿಯಾಗಿ ಅಥವಾ ನಿರ್ಮಾಣದ ಕಡೆಯಿಂದಾಗಲಿ, ಯೋಜನೆಗಳನ್ನು ಅನ್ವೇಷಿಸುವುದು ಮತ್ತು ಸಹಕರಿಸುವುದು ಅದ್ಭುತವಾಗಿರುತ್ತದೆ. ಈ ನಿಟ್ಟಿನಲ್ಲಿ ನಾನೂ ಕಾರ್ಯ ನಿರ್ವಹಿಸುತ್ತಿದ್ದೇ ಎಂದರು.

ಬೆಂಗಳೂರಿನೊಂದಿಗೆ ವಿಶೇಷ ನಂಟು

ಇದೇ ವೇಳೆ ತಮಗೂ ಹಾಗೂ ಬೆಂಗಳೂರು ನಗರಕ್ಕೂ ವಿಶೇಷ ನಂಟಿದ್ದು, ಬೆಂಗಳೂರಿಗೆ ನನ್ನ ಭೇಟಿಗಳು ಚಿಕ್ಕದಾಗಿದ್ದರೂ, ಅವು ಪ್ರೀತಿಯಿಂದ ತುಂಬಿವೆ. ಈ ಉದ್ಯಾನ ನಗರವು ಯಾವಾಗಲೂ ಸ್ವಾಗತಾರ್ಹವಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Cash for query: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ; ಆರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಲೋಕಪಾಲ ಅನುಮತಿ!

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಶಾಲಾ ಶಿಕ್ಷಕ, BJP ನಾಯಕ ಪದ್ಮರಾಜನ್ ಗೆ ಸಾಯೋವರೆಗೂ ಜೈಲು!

ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ 'ಮಹಾಘಟಬಂಧನ್' ಗೆ ತಿಲಾಂಜಲಿ; ಏಕಾಂಗಿ ಸ್ಪರ್ಧೆಗೆ ಕಾಂಗ್ರೆಸ್ 'ಮಹಾ' ನಿರ್ಧಾರ!

ಬಿಹಾರದಲ್ಲಿ ಟೈಗರ್‌ ಅಬಿ ಜಿಂದಾ ಹೈ (ನೇರ ನೋಟ)

ಬಿಹಾರ ಚುನಾವಣೆ: 3 ಲಕ್ಷ ಮತಗಳ ಏರಿಕೆ ಬಗ್ಗೆ ಕಾಂಗ್ರೆಸ್ ನಿಂದ ಮತ್ತೆ ಕಿರಿಕ್; ಚುನಾವಣಾ ಆಯೋಗ ಹೇಳಿದ್ದೇನು?

SCROLL FOR NEXT