ಅಭಿಮಾನಿಗಳತ್ತ ಕೈಮುಗಿದ ರಜನಿಕಾಂತ್  
ಸಿನಿಮಾ ಸುದ್ದಿ

ಮೈಸೂರಿನಲ್ಲಿ Jailer 2 ಶೂಟಿಂಗ್ ನಲ್ಲಿ ರಜನಿಕಾಂತ್: ಅಭಿಮಾನಿಗಳತ್ತ ಕೈ ಎತ್ತಿ ಮುಗಿದ ತಲೈವಾ

ರಜನಿಕಾಂತ್, ಮೋಹನ್ ಲಾಲ್, ಶಿವರಾಜ್ ಕುಮಾರ್ ಮತ್ತು ಜಾಕಿ ಶ್ರಾಫ್ ಹೀಗೆ ಬಹುತಾರೆಯರನ್ನೊಳಗೊಂಡ ಜೈಲರ್‌ 2 ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ.

ಮೈಸೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ ಜೈಲರ್‌ 2 (Jailer 2) ಶೂಟಿಂಗ್‌ಗಾಗಿ ಮೈಸೂರಿಗೆ ಆಗಮಿಸಿರುವ ನಟ ರಜನಿಕಾಂತ್ ನೋಡಿ ಅಭಿಮಾನಿಗಳು ಖುಷಿಯಿಂದ ಕೇಕೆ ಹಾಕಿ ಕೂಗಿದ್ದಾರೆ. ರಜನಿಕಾಂತ್ ಕಾರಿನ ಮೇಲೆ ನಿಂತು ಅಭಿಮಾನಿಗಳತ್ತ ಕೈ ಬೀಸಿದ್ದಾರೆ.

ಜೈಲರ್ 2 ಶೂಟಿಂಗ್ ಮೈಸೂರಿನಲ್ಲಿ ಭರದಿಂದ ಸಾಗಿದೆ. ಹುಣಸೂರು ಸಮೀಪವಿರುವ ಬಿಳಿಕೆರೆ ಬಳಿ ಶೂಟಿಂಗ್ ನಡೆದಿದ್ದು, ನೆಚ್ಚಿನ ನಟನನ್ನ ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಈ ವೇಳೆ ಕಾರಿನ ಮೇಲೆ ನಿಂತು ಅಭಿಮಾನಿಗಳತ್ತ ರಜನಿಕಾಂತ್ ಕೈಬೀಸಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಕೈ ಎತ್ತಿ ಮುಗಿದಿದ್ದಾರೆ.

ರಜನಿಕಾಂತ್ (Rajinikanth), ಮೋಹನ್ ಲಾಲ್, ಶಿವರಾಜ್ ಕುಮಾರ್ ಮತ್ತು ಜಾಕಿ ಶ್ರಾಫ್ ಹೀಗೆ ಬಹುತಾರೆಯರನ್ನೊಳಗೊಂಡ ಜೈಲರ್‌ 2 ಸಿನಿಮಾದ (Jailer 2 Cinema) ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT