ರಾಮಗೋಪಾಲ್ ವರ್ಮಾ 
ಸಿನಿಮಾ ಸುದ್ದಿ

ನನ್ನನ್ನು ಬಂಧಿಸಲು ಬಂದಿದ್ದ ಪೊಲೀಸರೇ ಎಣ್ಣೆ ಕುಡಿದು ಹೋದರು: ರಾಮಗೋಪಾಲ ವರ್ಮಾ ಶಾಕಿಂಗ್ ಹೇಳಿಕೆ!

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಅಭಿಪ್ರಾಯಗಳಿಂದಲೇ ಸುದ್ದಿಯಲ್ಲಿದ್ದಾರೆ.

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಅಭಿಪ್ರಾಯಗಳಿಂದಲೇ ಸುದ್ದಿಯಲ್ಲಿದ್ದಾರೆ. ಎಕ್ಸ್ ನಲ್ಲಿ ಅವರು ಆಗಾಗ್ಗೆ ವಿವಾದಕ್ಕೆ ಕಾರಣವಾಗುವ ವಿಷಯಗಳನ್ನು ಪೋಸ್ಟ್ ಮಾಡುತ್ತಾರೆ. ಇದರಿಂದಾಗಿ ಅವರ ವಿರುದ್ಧ ಹಲವು ಬಾರಿ ಪ್ರಕರಣಗಳು ದಾಖಲಾಗಿವೆ. 'ರಂಗೀಲಾ', 'ಸತ್ಯ' ಮತ್ತು 'ಕಂಪನಿ'ಯಂತಹ ಸೂಪರ್‌ಹಿಟ್ ಚಿತ್ರಗಳನ್ನು ನೀಡಿರುವ ಆರ್‌ಜಿವಿ ಈಗ ಸಂದರ್ಶನವೊಂದರಲ್ಲಿ ಹೊಸ ಹೇಳಿಕೆ ನೀಡಿದ್ದಾರೆ. ವಿವಾದಾತ್ಮಕ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಪೊಲೀಸರು ಒಮ್ಮೆ ತಮ್ಮ ಕಚೇರಿಗೆ ಬಂಧಿಸಲು ಬಂದಿದ್ದರು. ಆದರೆ ಅಧಿಕಾರಿಗಳು ನನ್ನ ಜೊತೆ ಕುಳಿತು ಮಧ್ಯ ಸೇವಿಸಿ ಹೊರಟುಹೋದರು ಎಂದರು.

'ಗೇಮ್ ಚೇಂಜರ್ಸ್' ಗೆ ನೀಡಿದ ಸಂದರ್ಶನದಲ್ಲಿ ರಾಮ್ ಗೋಪಾಲ್ ವರ್ಮಾ, '4-5 ವರ್ಷಗಳ ಹಿಂದೆ, ನಾನು ಕೆಲವು ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದೆ. ನಾನು ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ, ನನಗೆ ಏನೇ ಅನಿಸಿದರೂ ಅದನ್ನು ಬರೆದೆ. ಕೆಲವು ಗಂಟೆಗಳ ನಂತರ, ಮಹೇಶ್ ಭಟ್ ಸರ್ ನನಗೆ ಕರೆ ಮಾಡಿ, "ರಾಮು, ನಿಮ್ಮ ಟ್ವೀಟ್ ಬಗ್ಗೆ ಗದ್ದಲವಿದೆ. ಆದರೆ ಧರ್ಮನಿಂದನೆ ಮಾಡುವುದು ಕಾನೂನಿಗೆ ವಿರುದ್ಧವಲ್ಲ ಎಂದು ಅರ್ಥಮಾಡಿಕೊಳ್ಳಿ ಎಂದು ಹೇಳಿದರು. ನಿಜ ಹೇಳಬೇಕೆಂದರೆ, ನಾನು ಮಾಡಿದ್ದನ್ನು ಮರೆತಿದ್ದರಿಂದ ಅವರು ಏನು ಮಾತನಾಡುತ್ತಿದ್ದಾರೆಂದು ನನಗೆ ತಿಳಿದಿರಲಿಲ್ಲ.

ಈ ವಿಷಯದಲ್ಲಿ ಅವರ ವಿರುದ್ಧ ಸುಮಾರು 6-7 ಪ್ರಕರಣಗಳು ದಾಖಲಾಗಿವೆ ಎಂದು ನಿರ್ದೇಶಕರು ತಿಳಿಸಿದ್ದಾರೆ. 'ನಾವು ಎಲ್ಲಾ 6-7 ಪ್ರಕರಣಗಳನ್ನು ಒಂದೇ ಸ್ಥಳದಲ್ಲಿ ತರಲು ಪ್ರಯತ್ನಿಸುತ್ತಿದ್ದೆವು, ಆದರೆ ಅಷ್ಟೊತ್ತಿಗೆ ಪೊಲೀಸರು ನನ್ನ ಕಚೇರಿಗೆ ಬಂದಿದ್ದರು.' ಏತನ್ಮಧ್ಯೆ ನ್ಯಾಯಾಲಯವು ಆ ಕಾನೂನನ್ನು ರದ್ದುಗೊಳಿಸಿತ್ತು. ಈಗ ಪೊಲೀಸರಿಗೆ ಏನು ಮಾಡಬೇಕೆಂದು ಅರ್ಥವಾಗಲಿಲ್ಲ, ಆದ್ದರಿಂದ ಅವರೆಲ್ಲರೂ ನನ್ನೊಂದಿಗೆ ಕುಳಿತು, ಮದ್ಯ ಸೇವಿಸಿ ನಂತರ ಹೊರಟುಹೋದರು ಎಂದರು.

ಹೈದರಾಬಾದ್ ನಿವಾಸಿ ರಾಮ್ ಗೋಪಾಲ್ ವರ್ಮಾ ಸಂದರ್ಶನವೊಂದರಲ್ಲಿ ತಮ್ಮ ಹೆಚ್ಚಿನ ಟ್ವೀಟ್‌ಗಳಿಗೆ ಹೆಚ್ಚು ಗಮನ ಕೊಡುವುದಿಲ್ಲ ಎಂದು ಒಪ್ಪಿಕೊಂಡರು. 'ನಾನು ಏನೇ ಟ್ವೀಟ್ ಮಾಡಿದರೂ ಅದು ಹೆಚ್ಚಾಗಿ ಅಜ್ಞಾನದಿಂದಾಗಿ.' ಆದರೆ ಕೆಲವೊಮ್ಮೆ ನಾನು ಯಾರನ್ನಾದರೂ ಕೀಟಲೆ ಮಾಡಲು ಅಥವಾ ಕಿರುಕುಳ ನೀಡಲು ಸಹ ಟ್ವೀಟ್ ಮಾಡುತ್ತೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT