ಗಾಯಕ ಸೋನು ನಿಗಮ್ 
ಸಿನಿಮಾ ಸುದ್ದಿ

'ಉಗ್ರ ದಾಳಿಗೆ ಇದೇ ಕಾರಣ': ಕನ್ನಡ ಹಾಡಿಗೆ ಒತ್ತಾಯಿಸಿದ ಅಭಿಮಾನಿ ವಿರುದ್ಧ ತಾಳ್ಮೆ ಕಳೆದುಕೊಂಡ ಗಾಯಕ Sonu Nigam ಪಾಠ!

ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಕಾರ್ಯಕ್ರಮದ ವೇಳೆ ಗಾಯಕ ಸೋನು ನಿಗಮ್ ಹಾಡು ಹಾಡುವ ವೇಳೆ ಓರ್ವ ಹುಡುಗನನ್ನು ತರಾಟೆಗೆ ತೆಗೆದುಕೊಂಡರು.

ಬೆಂಗಳೂರು: ಖ್ಯಾತ ಗಾಯಕ ಸೋನು ನಿಗಮ್ ಅಭಿಮಾನಿಗಳ ವಿರುದ್ಧ ಗರಂ ಆದ ಘಟನೆ ನಡೆದಿದ್ದು, ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿ ಘಟನೆಗೆ ಇದೇ ಕಾರಣ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಕಾರ್ಯಕ್ರಮದ ವೇಳೆ ಗಾಯಕ ಸೋನು ನಿಗಮ್ ಹಾಡು ಹಾಡುವ ವೇಳೆ ಓರ್ವ ಹುಡುಗನನ್ನು ತರಾಟೆಗೆ ತೆಗೆದುಕೊಂಡರು.

ಯುವಕ ಸೋನು ನಿಗಮ್ ಹಾಡುವ ವೇಳೆ ಕನ್ನಡ ಹಾಡಿಗೆ ಒತ್ತಾಯಿಸಿದ್ದು ಈ ವೇಳೆ ಗರಂ ಆದ ಸೋನು ನಿಗಮ್, "ನಾನು ಎಲ್ಲ ಭಾಷೆಗಳಲ್ಲಿನ ಹಾಡುಗಳನ್ನು ಹಾಡಿದ್ದೇನೆ. ಆದರೆ ನನ್ನ ಜೀವನದಲ್ಲಿ ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದವು. ನಾನು ನಿಮ್ಮ ಬಳಿ ಯಾವಾಗ ಬಂದರೂ ಕೂಡ ಬಹಳ ಪ್ರೀತಿಯಿಂದ ಬರುತ್ತೇನೆ. ನಾವು ಪ್ರತಿದಿನ ಇವೆಂಟ್‌ಗಳನ್ನು ಮಾಡುತ್ತೇವೆ, ಆದರೆ ಕರ್ನಾಟಕದಲ್ಲಿ ಎಲ್ಲಿಯಾದರೂ ಕಾರ್ಯಕ್ರಮವಿದ್ದಾಗ, ನಾವು ಬಹಳ ಗೌರವದಿಂದ, ಖುಷಿಯಿಂದ ಬರ್ತೀವಿ. ನೀವೆಲ್ಲರೂ ನಮ್ಮನ್ನು ನಿಮ್ಮ ಕುಟುಂಬ ಎಂಬಂತೆ ಸ್ವೀಕರಿಸಿದ್ದೀರಿ ಎನ್ನೋದು ಇದಕ್ಕೆ ಕಾರಣ" ಎಂದು ಅವರು ಹೇಳಿದರು.

ವಿಡಿಯೋ ವೈರಲ್

ಸೋನು ನಿಗಮ್ ಅಭಿಮಾನಿಯನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಸೋನು ನಿಗಮ್‌ ಅವರು, ಕನ್ನಡ ಹಾಡುಗಳು ಎಂದರೆ ತುಂಬ ಇಷ್ಟ. ಕರ್ನಾಟಕ ಎಂದರೆ ತುಂಬ ಇಷ್ಟ ಎಂದು ಹೇಳುತ್ತಾರೆ. ಅದೇ ಸಮಯಕ್ಕೆ ಓರ್ವ ಹುಡುಗ ಕನ್ನಡದಲ್ಲಿ ಹಾಡಿ ಎಂದು ಗದರಿಸುವ ರೀತಿಯಲ್ಲಿ ಒತ್ತಾಯ ಮಾಡಿದ್ದಾನೆ. ಆಗ ಸೋನು ಅವರು ಪಹಲ್ಗಾಮ್ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಸಮರ್ಥನೆ

ಘಟನೆ ಬಗ್ಗೆ ಮಾತನಾಡಿರುವ ಸೋನು ನಿಗಮ್, ಅವರು ಹುಟ್ಟುವ ಮೊದಲಿನಿಂದಲೂ ನಾನು ಕನ್ನಡ ಹಾಡುಗಳನ್ನು ಹಾಡಿದ್ದೇನೆ, ಅವರು ಕನ್ನಡ ಕನ್ನಡ ಎಂದು ಒತ್ತಾಯ ಮಾಡಿದ್ದಕ್ಕೆ ಕೋಪ ಬಂತು. ಕನ್ನಡದ ಮೇಲೆ ನನಗೆ ಗೌರವ ಇದೆ ಎಂದು ಸಮರ್ಥನೆ ಕೂಡ ಕೊಟ್ಟಿದ್ದಾರೆ. 'ಓರ್ವ ಹುಡುಗ ನನಗೆ ಕನ್ನಡ ಹಾಡು ಹಾಡಿ ಎಂದ. ಅವನು ಹುಟ್ಟುವ ಮೊದಲಿನಿಂದಲೂ ನಾನು ಕನ್ನಡ ಹಾಡುಗಳನ್ನು ಹಾಡುತ್ತಿದ್ದೇನೆ. ಆದರೆ ಆ ಹುಡುಗ 'ಕನ್ನಡ, ಕನ್ನಡ' ಎಂದು ಒರಟಾಗಿ ಬೆದರಿಕೆ ಹಾಕಿದ್ದು ನನಗೆ ಇಷ್ಟವಾಗಲಿಲ್ಲ. ಇದೇ ಕಾರಣಕ್ಕೆ ಪಹಲ್ಗಾಮ್‌ನಲ್ಲಿ ಏನಾಯಿತು ಅಂತ ಗೊತ್ತಿದೆ ಅಲ್ವಾ? ಮೊದಲು ಯಾರು ಮುಂದೆ ನಿಂತಿದ್ದಾರೆ ಎಂದು ಗಮನಿಸಿ. ನಾನು ಕನ್ನಡಿಗರನ್ನು ಪ್ರೀತಿಸುವೆ, ನಿಮ್ಮನ್ನು ಪ್ರೀತಿಸುವೆ' ಎಂದು ಸೋನು ನಿಗಮ್‌ ಹೇಳಿದ್ದಾರೆ.

ವ್ಯಾಪಕ ಆಕ್ರೋಶ

ಸೋನು ನಿಗಮ್ ದುರ್ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕರ್ನಾಟಕ ಎಂದ ಮೇಲೆ ಕನ್ನಡ ಹಾಡು ಕೇಳುತ್ತಾರೆ. ಅದು ಸಹಜ ಕೂಡ, ಕನ್ನಡ ಹಾಡು ಹಾಡುವುದು ಸೋನು ನಿಗಮ್‌ಗೆ ಹೊಸದೇನೂ ಅಲ್ಲ. ಈ ಮೊದಲು ವೇದಿಕೆ ಮೇಲೆ ಸಾಕಷ್ಟು ಕನ್ನಡ ಹಾಡುಗಳನ್ನು ಹಾಡಿದ್ದಾರೆ. ಆದರೂ ಕನ್ನಡ ಹಾಡು ಕೇಳಿದ್ದಕ್ಕೆ ಪಹಲ್ಗಾಮ್ ದಾಳಿಯನ್ನು ಉಲ್ಲೇಖಿಸುವ ಅಗತ್ಯವೇನಿತ್ತು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

'ಒಬ್ಬೇ ಒಬ್ಬ ಕನ್ನಡ ಅಭಿಮಾನಿ ಕೇಳಿದರೂ ಕನ್ನಡ ಹಾಡು ಹಾಡುತ್ತೇನೆ'

ಇದೇ ವೇಳೆ "ನಾನು ವಿಶ್ವದಲ್ಲಿ ಎಲ್ಲೇ ಹೋದರೂ ಕೂಡ, ಕನ್ನಡ ಹಾಡು ಹಾಡ್ತೀನಿ. 14,000 ಜನರು ಇರುವ ಜನಸಮೂಹದಲ್ಲಿ 'ಕನ್ನಡ' ಎಂಬ ಒಂದು ಪದ ಬಂದರೆ ಸಾಕು, ನಾನು ಆ ಒಬ್ಬ ಕನ್ನಡಿಗ ಅಭಿಮಾನಿಗಾಗಿ ಕೆಲವು ಸಾಲುಗಳನ್ನು ಕನ್ನಡದಲ್ಲಿ ಹಾಡುತ್ತೇನೆ. ನಾನು ನಿಮ್ಮನ್ನು ಇಷ್ಟೆಲ್ಲ ಗೌರವಿಸುತ್ತೇನೆ, ಪ್ರೀತಿಸುತ್ತೇನೆ. ಆದ್ದರಿಂದ ಸ್ವಲ್ಪ ಗೌರವವಿರಲಿ, ಹೀಗೆಲ್ಲ ಮಾಡಬಾರದು" ಎಂದು ಸೋನು ನಿಗಮ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT